ಅಖಿಲೇಶ್‌ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಮೇಲೆ ದಾಳಿ : ಪ್ರಾಣಾಪಾಯದಿಂದ ಪಾರು

ಮಂಗಳವಾರ ರಾತ್ರಿ ಕರ್ಹಾಲ್‌ನಲ್ಲಿ ಸಚಿವ ಬಾಘೇಲ್‌ ಅವರು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ವೇಳೆ ಅವರ ಬೆಂಗಾಲು ಪಡೆ ವಾಹನದ ಮೇಲೆ ಎಸ್‌ಪಿ ಕಾರ್ಯಕರ್ತರು ಕಲ್ಲುತೂರಾಟ ನಡೆಸಿದ್ದಾರೆ. ಅದೃಷ್ಟವಶಾತ್‌ ಸಚಿವ ಬಾಘೇಲ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಖಿಲೇಶ್‌ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಮೇಲೆ ದಾಳಿ : ಪ್ರಾಣಾಪಾಯದಿಂದ ಪಾರು
Linkup
ಲಖನೌ: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ನೇರ ಹಣಾಹಣಿಯು ದಿನೇದಿನೆ ಅತಿರೇಖದ ಘಟನೆಗಳಿಗೆ ಕಾರಣವಾಗುತ್ತಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಸಿಎಂ ಅಭ್ಯರ್ಥಿ ಅಖಿಲೇಶ್‌ ಯಾದವ್‌ ಸ್ಪರ್ಧಿಸಿರುವ ಕರ್ಹಾಲ್‌ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಮೂಲಕ ಪ್ರತಿಸ್ಪರ್ಧಿಯಾಗಿ ಕೇಂದ್ರ ಸಚಿವ ಅವರು ಕಣಕ್ಕಿಳಿದಿದ್ದಾರೆ. ಮಂಗಳವಾರ ರಾತ್ರಿ ಕರ್ಹಾಲ್‌ನಲ್ಲಿ ಸಚಿವ ಬಾಘೇಲ್‌ ಅವರು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ವೇಳೆ ಅವರ ಬೆಂಗಾಲು ಪಡೆ ವಾಹನದ ಮೇಲೆ ಎಸ್‌ಪಿ ಕಾರ್ಯಕರ್ತರು ಕಲ್ಲುತೂರಾಟ ನಡೆಸಿದ್ದಾರೆ. ಅದೃಷ್ಟವಶಾತ್‌ ಸಚಿವ ಬಾಘೇಲ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಹಮತ್ತುಲ್ಲಾಪುರ ಗ್ರಾಮದಲ್ಲಿ ಘಟನೆ ಜರುಗಿದೆ. ಬೆಂಗಾವಲು ಪಡೆ ವಾಹನವು ಜಖಂಗೊಂಡಿದೆ. ಇದೊಂದು ಹಿಂಸಾತ್ಮಕ ದಾಳಿಯಾಗಿತ್ತು. ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದೇವೆ ಎಂದು ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಮಧುವನ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸಚಿವ ಬಾಘೇಲ್‌ ಅವರ ಭದ್ರತೆಯನ್ನು 'ಝಡ್‌' ಶ್ರೇಣಿಗೆ ಉನ್ನತೀಕರಿಸಲಾಗಿದೆ. ಘಟನೆಯನ್ನು ವಿವರಿಸಿದ ಬಾಘೇಲ್, ನನ್ನ ಕಾರು ಅಟ್ಟಿಕುಲ್ಲಾಪುರ ಮಾರ್ಗವಾಗಿ ಕರ್ಹಾಲ್ಗೆ ತೆರಳುತ್ತಿತ್ತು. ಅಟ್ಟಿಕುಲ್ಲಾಪುರದ ಬಳಿಕ ಹಲವು ಜನರು ಬಡಿಗೆ ಮತ್ತು ಕಬ್ಬಿಣದ ರಾಡ್ಗಳನ್ನು ಹಿಡಿದು ಏಕಾಏಕಿ ಬಂದು ಬೆಂಗಾವಲು ವಾಹನಗಳ ಮೇಲೆ ದಾಳಿ ನಡೆಸಿದರು. ಅವರು ಅಖಿಲೇಶ್ಬಯ್ಯಾ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದರು ಎಂದು ಹೇಳಿದ್ದಾರೆ. ಅದರಲ್ಲಿ ಒಬ್ಬಾತ ತನ್ನನ್ನು ತಾನು ಉಮಾ ಕಾಂತ್ ಯಾದವ್ ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಸಚಿವರನ್ನು ಇಂದು ಬಿಡುವುದಿಲ್ಲ ಎಂದು ಕೂಗಿದ್ದಾಗಿ ಕೂಡ ಸತ್ಯಪಾಲ ಸಿಂಗ್ ತಿಳಿಸಿದ್ದಾರೆ. ವೀರಾವೇಶದಿಂದ ಕೂಗುತ್ತ ಬಂದರು. ಅಷ್ಟರಲ್ಲಿ ನನ್ನ ಬೆಂಗಾವಲು ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿ ಕೆಳಗೆ ಇಳಿಯುತ್ತಿದ್ದಂತೆ ಅವರೆಲ್ಲರೂ ಓಡಿ ಹೋದರು. ಬೆಂಗಾವಲಿಗೆ ಇದ್ದ ಒಂದು ಕಾರಿನ ಮೇಲೆ ಗುಂಡಿನ ದಾಳಿ ಕೂಡ ನಡೆಸಲಾಗಿದೆ ಎಂದೂ ಸಚಿವರು ಆರೋಪಿಸಿದ್ದಾರೆ. ಇನ್ನೊಂದೆಡೆ ಕೇಶವ್ ಪ್ರಸಾದ್ ಮೌರ್ಯ ಕೂಡ ದಾಳಿ ಕೋರರ ವಿರುದ್ಧ ಕಿಡಿ ಕಾರಿದ್ದಾರೆ. ಖಂಡಿತ ಈ ಬಾರಿ ಸೋಲುತ್ತಾರೆ. ಬಿಜೆಪಿ ಸಂಸದೆ ಗೀತಾ ಶಕ್ಯಾ ಅವರ ಮೇಲೆ ಕೂಡ ಫೆ.14ರಂದು ದಾಳಿ ನಡೆದಿತ್ತು. ಆರೋಪಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.