ಗೆಳೆಯರೊಂದಿಗೆ ಇರುವಾಗಲೇ 14 ವರ್ಷದ ಬಾಲಕಿಯನ್ನು ಹೊತ್ತೊಯ್ದು ರೇಪ್: ಮಹಾರಾಷ್ಟ್ರದಲ್ಲಿ ಘಟನೆ
ಗೆಳೆಯರೊಂದಿಗೆ ಇರುವಾಗಲೇ 14 ವರ್ಷದ ಬಾಲಕಿಯನ್ನು ಹೊತ್ತೊಯ್ದು ರೇಪ್: ಮಹಾರಾಷ್ಟ್ರದಲ್ಲಿ ಘಟನೆ
14 ವರ್ಷದ ಬಾಲಕಿಯನ್ನು ಹೊತ್ತೊಯ್ದು ದುಷ್ಕರ್ಮಿ ಅತ್ಯಾಚಾರ ಎಸಗಿರುವ ಘಟನೆ ಪುಣೆಯಲ್ಲಿ ನಡೆದಿದೆ. ದುಷ್ಕೃತ್ಯ ಎಸಗಿದ 35 ವರ್ಷದ ಆರೋಪಿ, ಬಳಿಕ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಕುಟುಂಬ ಸದಸ್ಯರು ಕಲ್ಯಾಣ್ ರೈಲ್ವೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಕ್ಸೊ ಕಾಯಿದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಠಾಣೆ: ಮುಂಬಯಿಯ ಸಾಕಿನಾಕ ಪ್ರದೇಶದಲ್ಲಿ ಮಹಿಳೆ ಮೇಲೆ ನಡೆದ ಘಟನೆಯ ಆಘಾತದಿಂದ ಮಹಾರಾಷ್ಟ್ರದ ಜನ ಚೇತರಿಸಿಕೊಳ್ಳುವ ಮುನ್ನವೇ ಠಾಣೆಯಲ್ಲಿ ಬಾಲಕಿ ಮೇಲೆ ನಡೆದಿದೆ. ಶಿರಡಿಯಿಂದ ಹಿಂದಿರುಗಿ ಉಲ್ಲಾಸ್ನಗರದ ರೈಲು ನಿಲ್ದಾಣದಲ್ಲಿ ಸ್ನೇಹಿತರೊಂದಿಗೆ ನಡೆದು ಬರುತ್ತಿದ್ದ 14 ವರ್ಷದ ಬಾಲಕಿಯನ್ನು ಹೊತ್ತೊಯ್ದು ದುಷ್ಕರ್ಮಿ ಅತ್ಯಾಚಾರ ಎಸಗಿದ್ದಾನೆ.
ಸಮೀಪದ ರೈಲ್ವೆ ಕ್ವಾಟರ್ಸ್ನಲ್ಲಿ ದುಷ್ಕೃತ್ಯ ಎಸಗಿದ 35 ವರ್ಷದ ಆರೋಪಿ, ಬಳಿಕ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಕುಟುಂಬ ಸದಸ್ಯರು ಕಲ್ಯಾಣ್ ರೈಲ್ವೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಕ್ಸೊ ಕಾಯಿದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸಂತ್ರಸ್ತ ಬಾಲಕಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶೋಧಕಾರ್ಯದ ಬಳಿಕ ಭಾನುವಾರ ಸಂಜೆ ವೇಳೆ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ದಿನದ ಹಿಂದಷ್ಟೆ ನಡೆದಿತ್ತು ಮತ್ತೊಂದು ಅತ್ಯಾಚಾರ!ಮೂರು ದಿನ ಹಿಂದಷ್ಟೇ ಮುಂಬಯಿ ನಗರದ ಸಾಕಿನಾಕ ಪ್ರದೇಶದಲ್ಲಿ ರಸ್ತೆ ಬದಿ ನಿಂತಿದ್ದ ಟೆಂಪೊದಲ್ಲಿ 34 ವರ್ಷದ ಮಹಿಳೆಯ ಮೇಲೆ ಭೀಕರ ಅತ್ಯಾಚಾರ ನಡೆಸಿ , ಕೊಲೆಗೈಯಲಾಗಿತ್ತು. ಈ ಅಪರಾಧದ ಕರಾಳತೆ ಮರೆಯಾಗುವ ಮುನ್ನವೇ ಬಾಲಕಿಯ ಮೇಲೆ ಕಾಮುಕನೊಬ್ಬ ಕ್ರೌರ್ಯ ಮೆರೆದಿರುವುದು ಬೆಳಕಿಗೆ ಬಂದಿದೆ.
ಟೆಂಪೋದಲ್ಲಿ ಕೂಡಿ ಹಾಕಿದ್ದ ವ್ಯಕ್ತಿ ಮಹಿಳೆಯನ್ನು ನಿರಂತರ ಅತ್ಯಾಚಾರಗೈದಿದ್ದ. ಆಕೆಯ ಖಾಸಗಿ ಅಂಕ್ಕೆ ರಾಡ್ ಹಾಕಿ ಕ್ರೌರ್ಯ ಮೆರೆದಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಳು.