ಕೃಷಿ ಕಾಯ್ದೆ ವಿರುದ್ಧ ಜಂತರ್‌ ಮಂತರ್‌ನಲ್ಲಿ ರೈತ ಪ್ರತಿಭಟನೆ: ಗುರುವಾರ ಸಂಸತ್‌ ಭವನದವರೆಗೆ ರ್‍ಯಾಲಿ

​​ಸಿಂಘು ಗಡಿಯಿಂದ ಜಂತರ್‌ ಮಂತರ್‌ಗೆ ಬಸ್‌ಗಳಲ್ಲಿ ತೆರಳುವ ರೈತರು, ಅಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಬಳಿಕ ಸಂಸತ್‌ ಭವನದವರೆಗೆ ಮೆರವಣಿಗೆ ನಡೆಸಲಿದ್ದಾರೆ. ಹೀಗಾಗಿ ಸಂಸತ್‌ನ ಮಾರ್ಗದುದ್ದಕ್ಕೂ ಅಶ್ರುವಾಯು ಪಡೆ, ಜಲ ಫಿರಂಗಿ ಪಡೆ ನಿಯೋಜಿಸಲಾಗಿದೆ.

ಕೃಷಿ ಕಾಯ್ದೆ ವಿರುದ್ಧ ಜಂತರ್‌ ಮಂತರ್‌ನಲ್ಲಿ ರೈತ ಪ್ರತಿಭಟನೆ: ಗುರುವಾರ ಸಂಸತ್‌ ಭವನದವರೆಗೆ ರ್‍ಯಾಲಿ
Linkup
: ಕೇಂದ್ರ ಸರಕಾರದ ಮೂರು ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ಹಲವು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು, ಗುರುವಾರದಂದು ಅಧಿವೇಶನ ನಡೆಯುತ್ತಿರುವ ಸಂಸತ್‌ ಭವನದವರೆಗೆ ಪ್ರತಿಭಟನಾ ನಡೆಸಲು ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಸಂಸತ್ತಿನ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ದಿಲ್ಲಿ ಪೊಲೀಸರು ರೈತರಿಗೆ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದಾರೆ. 2,500 ಪೊಲೀಸರು ಮತ್ತು 3,000 ಅರೆಸೇನಾ ಪಡೆಗಳನ್ನು ರೈತರು ಪ್ರತಿಭಟನೆ ಆರಂಭಿಸುವ ಸಿಂಘು ಗಡಿಯಲ್ಲಿ ನಿಯೋಜಿಸಲಾಗಿದೆ. ಸಿಂಘು ಗಡಿಯಿಂದ ಜಂತರ್‌ ಮಂತರ್‌ಗೆ ಬಸ್‌ಗಳಲ್ಲಿ ತೆರಳುವ ರೈತರು, ಅಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಬಳಿಕ ಸಂಸತ್‌ ಭವನದವರೆಗೆ ಮೆರವಣಿಗೆ ನಡೆಸಲಿದ್ದಾರೆ. ಹೀಗಾಗಿ ಸಂಸತ್‌ನ ಮಾರ್ಗದುದ್ದಕ್ಕೂ ಅಶ್ರುವಾಯು ಪಡೆ, ಜಲ ಫಿರಂಗಿ ಪಡೆಗಳನ್ನು ಪೊಲೀಸರು ನಿಯೋಜಿಸಿದ್ದು, ಹಿಂಸಾಚಾರ ತಡೆಗೆ ಕಟ್ಟೆಚ್ಚರ ವಹಿಸಿದ್ದಾರೆ. ಗುರುವಾರದಿಂದ ಪ್ರತಿ ನಿತ್ಯ 200 ರೈತರು ಸಿಂಘು ಗಡಿಯಿಂದ ಜಂತರ್‌ ಮಂತರ್‌ಗೆ ತೆರಳಲಿದ್ದಾರೆ. ಬೆಳಗ್ಗೆ 11 ರಿಂದ ಸಂಜೆ 5ರವರೆಗೆ ಪ್ರತಿಭಟನೆ ನಡೆಸಿ ವಾಪಸಾಗಲಿದ್ದಾರೆ. ಸಂಸತ್‌ನ ಮುಂಗಾರು ಅಧಿವೇಶನ ಮುಗಿಯುವ ತನಕ ಇದೇ ಮಾದರಿ ಪ್ರತಿಭಟನೆ ಮುಂದುವರಿಯಲಿದೆ ಎಂದು ರೈತರು ಪೊಲೀಸರಿಗೆ ತಿಳಿಸಿದ್ದಾರೆ. ಕಳೆದ ಜನವರಿ 26ರಂದು ಗಣರಾಜ್ಯೋತ್ಸವದ ದಿನ ರೈತರ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಅಶಾಂತಿ ಸೃಷ್ಟಿಯಾಗಿತ್ತು.