ಕ್ರಿಕೆಟ್ ಪ್ರೇಮಿ ಲತಾ ಮಂಗೇಶ್ಕರ್ ‘ಟೀಮ್ ಇಂಡಿಯಾ’ಗೆ ನೀಡಿದ್ದು ಮರೆಯಲಾರದ ಕೊಡುಗೆ..!

1983ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಲಾರ್ಡ್ಸ್ ಮೈದಾನದಲ್ಲಿ ಟ್ರೋಫಿಯನ್ನು ಭಾರತ ತಂಡ ಎತ್ತಿ ಹಿಡಿಯಿತು. ಈ ಗೆಲುವನ್ನು ಸಂಭ್ರಮಿಸಲು ಬಿಸಿಸಿಐ ನಿರ್ಧರಿಸಿತು. ಆದರೆ, ಬಿಸಿಸಿಐ ಬಳಿ ಹಣದ ಕೊರತೆ ಇತ್ತು. ಆಗ ಕ್ರಿಕೆಟ್ ನಿರ್ವಾಹಕ ರಾಜ್ ಸಿಂಗ್ ಡುಂಗರ್‌ಪುರ್ ಟೀಮ್ ಇಂಡಿಯಾ ಆಟಗಾರರಿಗೆ ಗೌರವ ಧನ ನೀಡಲು ಮತ್ತು ಅಭಿನಂದನಾ ಕಾರ್ಯಕ್ರಮ ನಡೆಸುವ ಸಲುವಾಗಿ ಹಣ ಸಂಗ್ರಹಿಸಲು ಪ್ಲಾನ್ ಮಾಡಿದ್ದರು. ಆಗ ಬಿಸಿಸಿಐಗೆ ಸಹಾಯ ಹಸ್ತ ಚಾಚಿದ್ದವರು ಲತಾ ಮಂಗೇಶ್ಕರ್.

ಕ್ರಿಕೆಟ್ ಪ್ರೇಮಿ ಲತಾ ಮಂಗೇಶ್ಕರ್ ‘ಟೀಮ್ ಇಂಡಿಯಾ’ಗೆ ನೀಡಿದ್ದು ಮರೆಯಲಾರದ ಕೊಡುಗೆ..!
Linkup
ಗಾಯಕಿ ಲತಾ ಮಂಗೇಶ್ಕರ್‌ ಪ್ರೇಮಿ ಕೂಡ ಹೌದು. ಅವರಿಗೆ ಕ್ರಿಕೆಟ್ ಮೇಲೆ ಹೆಚ್ಚು ಪ್ರೀತಿ ಇತ್ತು. ಹಲವು ಕ್ರಿಕೆಟ್ ದಿಗ್ಗಜರು ಅವರೊಂದಿಗೆ ಪ್ರೀತಿಯ ಬಾಂಧವ್ಯ ಇಟ್ಟುಕೊಂಡಿದ್ದರು. ಸಚಿನ್ ತೆಂಡೂಲ್ಕರ್ ಅವರನ್ನು ಲತಾ ಮಂಗೇಶ್ಕರ್ ಯಾವಾಗಲೂ ಮಗ ಎಂದೇ ಸಂಬೋಧಿಸುತ್ತಿದ್ದರು. ಸಚಿನ್ ಮಾತ್ರವಲ್ಲ, ವಿವಿಎಸ್ ಲಕ್ಷ್ಮಣ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಸೇರಿದಂತೆ ಭಾರತೀಯ ಕ್ರಿಕೆಟ್ ಆಟಗಾರರೊಂದಿಗೆ ಲತಾ ಮಂಗೇಶ್ಕರ್ ಉತ್ತಮ ಬಾಂಧವ್ಯ ಹೊಂದಿದ್ದರು. ವಿಶ್ವಕಪ್ ಗೆದ್ದಾಗ ಲಾರ್ಡ್ಸ್‌ನಲ್ಲಿದ್ದರು! 1983ರಲ್ಲಿ ಭಾರತ ಮೊದಲ ವಿಶ್ವಕಪ್ ಗೆದ್ದ ಸಂದರ್ಭ. ಫೈನಲ್ ಪಂದ್ಯಕ್ಕೂ ಮುನ್ನವೇ ಭಾರತ ತಂಡವನ್ನು ಭೋಜನಕ್ಕೆ ಆಹ್ವಾನಿಸಿ ಶುಭ ಹಾರೈಸಿದ್ದವರು ಲತಾ ಮಂಗೇಶ್ಕರ್. ಲಾರ್ಡ್ಸ್ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಿದ ಲತಾ ಮಂಗೇಶ್ಕರ್, ಕಪಿಲ್ ದೇವ್ ತಂಡಕ್ಕೆ ಅದ್ಧೂರಿ ಭೋಜನ ಏರ್ಪಡಿಸಿದ್ದರು. ನಂತರ ದೆಹಲಿಯ ಇಂದ್ರಪ್ರಸ್ಥ ಕ್ರೀಡಾಂಗಣದಲ್ಲಿ ಸಂಗೀತ ಕಛೇರಿ ಕೂಡ ನೀಡಿದ್ದರು. ಇಂದಿಗೂ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಲತಾ ಮಂಗೇಶ್ಕರ್‌ಗಾಗಿಯೇ ಗಣ್ಯರ ಸೀಟು ಮೀಸಲಿಡಲಾಗಿದೆ. ಸಹಾಯ ಹಸ್ತ ಚಾಚಿದ್ದ ಲತಾ ಮಂಗೇಶ್ಕರ್ 1983ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಲಾರ್ಡ್ಸ್ ಮೈದಾನದಲ್ಲಿ ಟ್ರೋಫಿಯನ್ನು ಭಾರತ ತಂಡ ಎತ್ತಿ ಹಿಡಿಯಿತು. ಈ ಗೆಲುವನ್ನು ಸಂಭ್ರಮಿಸಲು ಬಿಸಿಸಿಐ ನಿರ್ಧರಿಸಿತು. ಆದರೆ, ಬಿಸಿಸಿಐ ಬಳಿ ಹಣದ ಕೊರತೆ ಇತ್ತು. ಆಗ ಕ್ರಿಕೆಟ್ ನಿರ್ವಾಹಕ ರಾಜ್ ಸಿಂಗ್ ಡುಂಗರ್‌ಪುರ್ ಆಟಗಾರರಿಗೆ ಗೌರವ ಧನ ನೀಡಲು ಮತ್ತು ಅಭಿನಂದನಾ ಕಾರ್ಯಕ್ರಮ ನಡೆಸುವ ಸಲುವಾಗಿ ಹಣ ಸಂಗ್ರಹಿಸಲು ಪ್ಲಾನ್ ಮಾಡಿದ್ದರು. ಆಗ ಬಿಸಿಸಿಐಗೆ ಸಹಾಯ ಹಸ್ತ ಚಾಚಿದ್ದವರು ಲತಾ ಮಂಗೇಶ್ಕರ್. ದೆಹಲಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿ, ಅದರಿಂದ ಬರುವ ಹಣವನ್ನು ಟೀಮ್ ಇಂಡಿಯಾ ಆಟಗಾರರಿಗೆ ಗೌರವ ಧನ ನೀಡುವ ರಾಜ್ ಸಿಂಗ್ ಡುಂಗರ್ಪುರ್ ಯೋಜನೆಗೆ ಲತಾ ಮಂಗೇಶ್ಕರ್ ಸಮ್ಮತಿ ನೀಡಿದರು. ದೆಹಲಿಯ ಇಂದ್ರಪ್ರಸ್ಥ ಕ್ರೀಡಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ಲತಾ ಮಂಗೇಶ್ಕರ್ ಹಾಗೂ ಸಹೋದರ ಹೃದಯನಾಥ್ ಮಂಗೇಶ್ಕರ್ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ಸಂಗೀತ ಕಾರ್ಯಕ್ರಮದಲ್ಲಿ 20 ಲಕ್ಷ ರೂಪಾಯಿ ಸಂಗ್ರಹವಾಯಿತು. ಪರಿಣಾಮ, ಟೀಮ್ ಇಂಡಿಯಾ ಆಟಗಾರರಿಗೆ ತಲಾ ಒಂದೊಂದು ಲಕ್ಷ ರೂಪಾಯಿಯನ್ನು ನೀಡಲಾಯಿತು. ಆದರೆ, ಲತಾ ಮಂಗೇಶ್ಕರ್ ಮಾತ್ರ ಈ ಕಾರ್ಯಕ್ರಮಕ್ಕಾಗಿ ಒಂದು ರೂಪಾಯಿಯನ್ನೂ ಸಂಭಾವನೆಯಾಗಿ ಪಡೆಯಲಿಲ್ಲ. ವಿಐಪಿ ಪಾಸ್ ಲತಾ ಮಂಗೇಶ್ಕರ್ ಅವರ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಭಾರತದಲ್ಲಿ ನಡೆಯುವ ಪ್ರತಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಎರಡು ವಿಐಪಿ ಪಾಸ್‌ಗಳನ್ನು ಲತಾ ಮಂಗೇಶ್ಕರ್‌ ಅವರಿಗೆ ಕಾಯ್ದಿರಿಸಲು ಆರಂಭಿಸಿದರು. ಹಲವು ಪಂದ್ಯಗಳನ್ನು ಸ್ಟೇಡಿಯಂನಲ್ಲೇ ಲತಾ ಮಂಗೇಶ್ಕರ್ ವೀಕ್ಷಿಸಿದ್ದರು. ಎಂಥಾ ವಿಪರ್ಯಾಸ! ಭಾರತದ ಕ್ರಿಕೆಟ್ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ಲತಾ ಮಂಗೇಶ್ಕರ್, ಟೀಮ್ ಇಂಡಿಯಾದ 1000ನೇ ಏಕದಿನ ಪಂದ್ಯದ ದಿನದಂದೇ ನಿಧನರಾಗಿದ್ದು ವಿಪರ್ಯಾಸ. ಕಪ್ಪು ಪಟ್ಟಿ ಧರಿಸಿದ ಟೀಮ್ ಇಂಡಿಯಾ ಲತಾ ಮಂಗೇಶ್ಕರ್ ಅವರ ಅಗಲಿಕೆಯ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಭಾನುವಾರ ಶೋಕಸೂಚಕವಾಗಿ ಕೈಗೆ ಕಪ್ಪು ಪಟ್ಟಿ ಧರಿಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದರು.