'ಕನ್ನಡಿಗ' ನಂತರ ಮತ್ತೊಮ್ಮೆ ರವಿಚಂದ್ರನ್ ಸಿನಿಮಾಕ್ಕೆ ಪಾವನಾ ನಾಯಕಿ

'ಕ್ರೇಜಿ ಸ್ಟಾರ್' ರವಿಚಂದ್ರನ್‌ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದ ನಟಿ ಪಾವನಾ ಈಗ ಹೊಸ ಚಿತ್ರವೊಂದರಲ್ಲಿ ಅವರಿಗೇ ನಾಯಕಿಯಾಗುತ್ತಿದ್ದಾರೆ! ಈ ಹಿಂದೆ ಅವರು 'ಕನ್ನಡಿಗ' ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದರು. ಈಗ 2ನೇ ಬಾರಿಗೆ ಬಣ್ಣ ಹಚ್ಚುವ ಅವಕಾಶ ಪಡೆದುಕೊಂಡಿದ್ದಾರೆ.

'ಕನ್ನಡಿಗ' ನಂತರ ಮತ್ತೊಮ್ಮೆ ರವಿಚಂದ್ರನ್ ಸಿನಿಮಾಕ್ಕೆ ಪಾವನಾ ನಾಯಕಿ
Linkup
ಹರೀಶ್‌ ಬಸವರಾಜ್‌ ರವಿಚಂದ್ರನ್‌ ಅವರು ಭಾನುವಾರ (ಮೇ 30) ನಡೆದ ತಮ್ಮ ಹುಟ್ಟುಹಬ್ಬದಂದು ಬಿಡುಗಡೆ ಮಾಡಿದ ವಿಡಿಯೋದಲ್ಲಿ ತಮ್ಮ ಮುಂದಿನ ಸಿನಿಮಾಗಳ ಮಾಹಿತಿ ಮತ್ತು ನಾಯಕಿಯ ಪರಿಚಯ ನೀಡಿದ್ದಾರೆ. ಈ ಸಿನಿಮಾಗಳಲ್ಲಿ'6ಟಿ' ಕೂಡ ಒಂದು. ಇದರಲ್ಲಿ ಯುವ ನಟಿ ನಾಯಕಿಯಾಗಿದ್ದು, ಗ್ಲಾಮರಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಹೇಳಿರುವ ಪಾವನಾ, 'ರವಿಚಂದ್ರನ್‌ ಅವರ ಸಿನಿಮಾಗಳಲ್ಲಿ ನಟಿಸುವುದು ವಿಶೇಷ ಅನುಭವ ನೀಡುತ್ತದೆ. ನಾನು ಈಗಾಗಲೇ 'ಕನ್ನಡಿಗ' ಸಿನಿಮಾದಲ್ಲಿಅವರ ಪತ್ನಿಯಾಗಿ ಕಾಣಿಸಿಕೊಂಡಿದ್ದೇನೆ. ಆದರೆ '6ಟಿ' ಸಿನಿಮಾ ಬಹಳ ವಿಶೇಷವಾದ ಸಿನಿಮಾ. ಏಕೆಂದರೆ ಇದು ಅವರ ನಿರ್ದೇಶನದ ಸಿನಿಮಾ. ಇದರ ಸಬ್ಜೆಕ್ಟ್ ಮತ್ತು ಕೊಂಚ ವಿಭಿನ್ನವಾಗಿವೆ. ಅವರ ನಟನೆಯ ಸಿನಿಮಾದಲ್ಲಿ ನಾನು ಹೇಗೆ ಕಾಣಿಸಿಕೊಂಡಿದ್ದೇನೆ ಎಂಬುದು ಈಗಾಗಲೇ ರಿವೀಲ್‌ ಆಗಿದೆ. ಅವರು ನಾಯಕಿಯರನ್ನು ಸುಂದರವಾಗಿ ತೋರಿಸುತ್ತಾರೆ. ಈಗ ಅವರ ನಿರ್ದೇಶನದ 6ಟಿ ಕೂಡ ನನ್ನ ಕೆರಿಯರ್‌ನ ವಿಶೇಷ ಸಿನಿಮಾವಾಗಲಿದೆ' ಎಂದಿದ್ದಾರೆ. ಅವರು ನಟಿಸಿರುವ ಐದಾರು ಸಿನಿಮಾಗಳು ಇನ್ನಷ್ಟೇ ಬಿಡುಗಡೆಯಾಗಬೇಕಿವೆ. ಈಗ ರವಿಚಂದ್ರನ್‌ ಸಿನಿಮಾ ಕೂಡ ಈ ಲಿಸ್ಟ್‌ಗೆ ಸೇರಿಕೊಂಡಿದೆ. 6ಟಿ ಸಿನಿಮಾದ ಚಿತ್ರೀಕರಣವು ಬಹುತೇಕ ಮುಗಿದಿದೆ. ಉಳಿದಿದ್ದನ್ನು ಲಾಕ್‌ಡೌನ್‌ ತೆರವಾದ ಮೇಲೆ ರವಿಚಂದ್ರನ್‌ ಪೂರ್ತಿಗೊಳಿಸುತ್ತಾರೆ. ಅವರು ರಿಲೀಸ್‌ ಮಾಡಿರುವ ವಿಡಿಯೋದಲ್ಲಿ '6ಟಿ' ಸೇರಿದಂತೆ 'ಗಾಡ್‌', 'ರವಿ ಬೋಪಣ್ಣ', 'ಬ್ಯಾಡ್‌ ಬಾಯ್ಸ್‌' ಎಂಬ ಸಿನಿಮಾಗಳ ಮಾಹಿತಿಯೂ ಇದೆ. 'ಬ್ಯಾಡ್‌ ಬಾಯ್ಸ್‌' ಸಿನಿಮಾದಲ್ಲಿ ಅವರ ಪುತ್ರರಾದ ಮನುರಂಜನ್‌ ಮತ್ತು ವಿಕ್ರಮ್‌ ನಟಿಸಿದ್ದಾರೆ. ಈ ಸಂದರ್ಭದಲ್ಲಿ ರವಿಚಂದ್ರನ್‌ ಅವರ 'ಕನ್ನಡಿಗ' ಸಿನಿಮಾದ ಟೀಸರ್‌ ಕೂಡ ಬಿಡುಗಡೆಯಾಗಿದೆ. 'ಈಗ ಬಿಡುಗಡೆಯಾಗಿರುವ ವಿಡಿಯೋ, ಟೀಸರ್‌ ಅಷ್ಟೇ. ಸಿನಿಮಾ ಇನ್ನೂ ಅದ್ಭುತವಾಗಿದೆ. ಉತ್ತಮ ಪರ್ಫಾಮೆನ್ಸ್‌ಗೆ ಸೂಕ್ತವಾಗಿರುವ ಪಾತ್ರವಿದು. ರವಿಚಂದ್ರನ್‌ ಅವರ ನಿರ್ದೇಶನದ ಸಿನಿಮಾಗಳ ನಾಯಕಿಯರು ಹೇಗಿರುತ್ತಾರೋ, ನಾನು ಕೂಡ ಇದರಲ್ಲಿ ಹಾಗಿದ್ದೇನೆ' ಎಂದು ಪಾವನಾ ಹೇಳಿಕೊಳ್ಳುತ್ತಾರೆ. ---------------------------------------- ಈ ಕೆಳಗಿನ ಪ್ರಶ್ನೆಗೆ ಉತ್ತರವನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ತಿಳಿಸಿ. 1. ಕನ್ನಡಿಗ ಚಿತ್ರದಲ್ಲಿ ರವಿಚಂದ್ರನ್‌ಗೆ ನಾಯಕಿ ಯಾರು?