ಇ-ರುಪಿಗೆ ಇಂಟರ್‌ನೆಟ್‌ ಬೇಕಿಲ್ಲ! ಗ್ರಾಮೀಣ ಜನತೆಗೂ ಅನುಕೂಲ!

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿರುವ 'ಇ-ರುಪಿ'ಗೆ ಯಾವುದೇ ಬ್ಯಾಂಕ್‌ ಖಾತೆ, ಪೇಮೆಂಟ್‌ ಆ್ಯಪ್‌, ಇಂಟರ್‌ನೆಟ್‌ ಸಂಪರ್ಕ ಅಗತ್ಯವಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಜನತೆಗೆ ಹೆಚ್ಚು ಅನುಕೂಲವಾಗಲಿದೆ.

ಇ-ರುಪಿಗೆ ಇಂಟರ್‌ನೆಟ್‌ ಬೇಕಿಲ್ಲ! ಗ್ರಾಮೀಣ ಜನತೆಗೂ ಅನುಕೂಲ!
Linkup
ಹೊಸದಿಲ್ಲಿ: ಪ್ರಧಾನಿ ಸೋಮವಾರ ಚಾಲನೆ ನೀಡಿರುವ ''ಗೆ ಯಾವುದೇ ಬ್ಯಾಂಕ್‌ ಖಾತೆ, ಪೇಮೆಂಟ್‌ ಆ್ಯಪ್‌, ಇಂಟರ್‌ನೆಟ್‌ ಸಂಪರ್ಕ ಅಗತ್ಯವಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಜನತೆಗೆ ಹೆಚ್ಚು ಅನುಕೂಲವಾಗಲಿದೆ. ಸರಕಾರದ ಹಣಕಾಸು ಪ್ರಯೋಜನಗಳು ನೇರವಾಗಿ ಮತ್ತು ಸೋರಿಕೆ ರಹಿತವಾಗಿ ಜನರಿಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ. 'ಇ-ರುಪಿ' ಎಂಬುದು ಕ್ಯೂಆರ್‌ ಕೋಡ್‌ ಅಥವಾ ಎಸ್‌ಎಂಎಸ್‌ ಸ್ಟ್ರಿಂಗ್‌ ಆಧರಿತ 'ಇ-ವೋಚರ್‌'. ಇದನ್ನು ವ್ಯಕ್ತಿಯ ಮೊಬೈಲ್‌ ಸಂಖ್ಯೆ ಮತ್ತು ಗುರುತನ್ನು ದೃಢೀಕರಿಸಿ ನೇರವಾಗಿ ಮೊಬೈಲ್‌ಗೆ ವರ್ಗಾಯಿಸಬಹುದು. ತಮಗೆ ದೊರೆತ ಇ-ವೋಚರ್‌ ಅನ್ನು ಫಲಾನುಭವಿಗಳು ಸೇವಾ ಪೂರೈಕೆದಾರರ ಬಳಿ ನಗದೀಕರಿಸಬಹುದು. ಹಣದ ಬದಲಿಗೆ ಪ್ರೀಪೇಡ್‌ ಕೂಪನ್‌ ಕೋಡ್‌ನಂತೆ ಬಳಸಬಹುದು. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡ, ಕೆನರಾ ಬ್ಯಾಂಕ್‌, ಐಸಿಐಸಿಐ ಸೇರಿದಂತೆ 8 ಬ್ಯಾಂಕ್‌ಗಳಲ್ಲಿ ಇದು ಪ್ರಸ್ತುತ ಲಭ್ಯವಿದೆ. ಸದ್ಯದಲ್ಲೇ ಇತರ ಬ್ಯಾಂಕ್‌ಗಳಿಗೂ ಈ ಸೇವೆ ವಿಸ್ತರಣೆಯಾಗಲಿದೆ. ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪಾವತಿಗಳ ನಿಗಮ ಅಭಿವೃದ್ಧಿಪಡಿಸಿರುವ ವಿನೂತನ ಪಾವತಿ ವ್ಯವಸ್ಥೆ 'ಇ-ರುಪಿ'ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು. ಇ-ರುಪಿ ಮೂಲಕ ದೇಶದ ಡಿಜಿಟಲ್‌ ಆಡಳಿತಕ್ಕೆ ಹೊಸ ಆಯಾಮವನ್ನು ದೊರೆತಿದೆ. ಡಿಜಿಟಲ್‌ ವಹಿವಾಟುಗಳಲ್ಲಿ ಹಣ ಪಾವತಿಯನ್ನು ಪರಿಣಾಮಕಾರಿ ಹಾಗೂ ಪಾರದರ್ಶಕವಾಗಿಸಲು ಇದು ಮಹತ್ವದ ಪಾತ್ರ ವಹಿಸಲಿದೆ. ಈ ಸೋರಿಕೆ ರಹಿತ ವಿತರಣಾ ವ್ಯವಸ್ಥೆಯು ಭಾರತದ ತಂತ್ರಜ್ಞಾನ ಸದ್ಬಳಕೆಗೆ ನಿರ್ದಶನವಾಗಿದೆ. - ನರೇಂದ್ರ ಮೋದಿ, ಪ್ರಧಾನಿ