ಇನ್ಮುಂದೆ ಅಂಚೆ ಕಚೇರಿಯಲ್ಲೇ ಪಾಸ್ ಪೋರ್ಟ್ ಲಭ್ಯ! ಪಡೆಯುವುದು ಹೇಗೆ?

ಇದೀಗ ಅಂಚೆ ಕಚೇರಿ ಮೂಲಕವೂ ಪಾಸ್‌ಪೋರ್ಟ್‌ ಪಡೆಯುವ ಅವಕಾಶ ಕಲ್ಪಿಸಿದ್ದು, ನಾಗರಿಕರಿಗೆ ಮತ್ತಷ್ಟು ಅನುಕೂಲವಾಗಿದೆ. ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ಮಾಹಿತಿ ಇಲ್ಲಿದೆ.

ಇನ್ಮುಂದೆ ಅಂಚೆ ಕಚೇರಿಯಲ್ಲೇ ಪಾಸ್ ಪೋರ್ಟ್ ಲಭ್ಯ! ಪಡೆಯುವುದು ಹೇಗೆ?
Linkup
ಬೆಂಗಳೂರು: ಸರಕಾರಿ ದಾಖಲೆಗಳ ಪೈಕಿ ಪ್ರಮುಖವಾದುದು. ಇದು ವಿದೇಶಿ ಪ್ರಯಾಣಕ್ಕೆ ಮಾತ್ರವಲ್ಲದೆ, ದೇಶದಲ್ಲಿಯೂ ಅಧಿಕೃತ ಐಡೆಂಟಿಟಿ ಪ್ರೂಫ್‌ ಆಗಿ ಪರಿಗಣಿಸಲಾಗಿದೆ. ಇದುವೆರೆಗೆ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ಪೋರ್ಟ್‌ ವಿತರಿಸುತ್ತಿತ್ತು. ಇದೀಗ ಮೂಲಕವೂ ಪಾಸ್‌ಪೋರ್ಟ್‌ ಪಡೆಯುವ ಅವಕಾಶ ಕಲ್ಪಿಸಿದ್ದು, ನಾಗರಿಕರಿಗೆ ಮತ್ತಷ್ಟು ಅನುಕೂಲವಾಗಿದೆ. ಅಂಚೆ ಕಚೇರಿಯ ಸಾಮಾನ್ಯ ಸೇವಾ ಕೇಂದ್ರ ( ಕಾಮನ್‌ ಸರ್ವೀಸ್‌ ಸೆಂಟರ್‌-ಸಿಎಸ್‌ಸಿ)ದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪಾಸ್‌ಪೋರ್ಟ್‌ ಪಡೆಯಬಹುದು. ಈಗಾಗಲೇ ದೇಶಾದ್ಯಂತ 424 ಅಂಚೆ ಕಚೇರಿಗಳಲ್ಲಿ 'ಪಾಸ್‌ಪೋರ್ಟ್‌ ಸೇವಾ ಕೇಂದ್ರ' ಸ್ಥಾಪಿಸಲಾಗಿದೆ. ಈ ಕುರಿತು ಇಂಡಿಯಾ ಪೋಸ್ಟ್ ತನ್ನ ಅಧಿಕೃತ ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಅದರಲ್ಲಿ ಈಗ ಪೋಸ್ಟ್ ಆಫೀಸ್‌ನ ಸಿಎಸ್‌ಸಿ ಕೌಂಟರ್‌ನಲ್ಲಿ ಪಾಸ್‌ ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ಮತ್ತು ನೋಂದಾಯಿಸಲು ಸುಲಭವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಎಂದು ತಿಳಿಸಿದೆ. Passportindia.gov.in ವೆಬ್‌ಸೈಟ್‌ನಲ್ಲಿ ತಿಳಿಸಿರುವಂತೆ, ಹೊಸ ನಿಯಮಗಳ ಪ್ರಕಾರ, ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ, ಮುದ್ರಿತ ಪ್ರತಿಯನ್ನು ತೆಗೆದುಕೊಂಡು ಖುದ್ದಾಗಿ ನೀವೆ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಹೋಗಬೇಕು. ಮುದ್ರಿತ ಅರ್ಜಿ ಜತೆಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು. ಪೋಸ್ಟ್ ಆಫೀಸ್‌ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ನೀವು ಪೋಸ್ಟ್‌ ಆಫೀಸ್‌ ಮೂಲಕ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾದರೂ, ಮೊದಲು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ನಂತರ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ಹೊಂದಿರುವ ನಿಮ್ಮ ಹತ್ತಿರದ ಪೋಸ್ಟ್‌ ಆಫೀಸ್‌ಗೆ ಭೇಟಿ ನೀಡಿ. ಜತೆಗೆ ಅರ್ಜಿಯ ಮುದ್ರಿತ ಪ್ರತಿ ಮತ್ತು ಅಗತ್ಯ ದಾಖಲೆಗಳನ್ನು ಅಂಚೆ ಕಚೇರಿಗೆ ಸಲ್ಲಿಸಿ. ಇಲ್ಲಿಗೆ ನಿಮ್ಮ ಪಾಸ್‌ಪೋರ್ಟ್‌ ಅರ್ಜಿ ಸಲ್ಲಿಕೆ ಮುಗಿದಂತೆ.