ಅರ್ನಬ್ ಗೋಸ್ವಾಮಿ ಬಂಧನಕ್ಕೆ ಸಂಚು: ಅನಿಲ್ ದೇಶ್‌ಮುಖ್ ತಂತ್ರದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಾಜೆ

ನಕಲಿ ಟಿಆರ್‌ಪಿ ಹಗರಣದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಲು ಮಹಾರಾಷ್ಟ್ರದ ಆಗಿನ ಗೃಹ ಸಚಿವ ಅನಿಲ್ ದೇಶ್‌ಮುಖ್ ಬಯಸಿದ್ದರು ಎಂದು ವಜಾಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಹಿರಂಗಪಡಿಸಿದ್ದಾರೆ.

ಅರ್ನಬ್ ಗೋಸ್ವಾಮಿ ಬಂಧನಕ್ಕೆ ಸಂಚು: ಅನಿಲ್ ದೇಶ್‌ಮುಖ್ ತಂತ್ರದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಾಜೆ
Linkup
ಮುಂಬಯಿ: ಭಾರಿ ವಿವಾದ ಸೃಷ್ಟಿಸಿದ್ದ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಹಗರಣದಲ್ಲಿ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅವರನ್ನು ಬಂಧಿಸಲು ಆಗಿನ ಗೃಹ ಸಚಿವ ಬಯಸಿದ್ದರು ಎಂದು ವಜಾಗೊಂಡಿರುವ ಪೊಲೀಸ್ ಅಧಿಕಾರಿ ಜಾರಿ ನಿರ್ದೇಶನಾಲಯಕ್ಕೆ () ಹೇಳಿಕೆ ನೀಡಿದ್ದಾರೆ. ವಿವಿಧ ಸುಲಿಗೆ ಚಟುವಟಿಕೆಗಳನ್ನು ನಡೆಸಲು ಮತ್ತು ಸೇರಿದಂತೆ ವಿವಿಧ ಪ್ರಕರಣಗಳನ್ನು ತಮಗೆ ವರದಿ ಮಾಡುವುದಕ್ಕಾಗಿ ಅನಿಲ್ ದೇಶ್‌ಮುಖ್ ಅವರು ತಮ್ಮನ್ನು ಮರಳಿ ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳುವ ಭರವಸೆ ನೀಡಿದ್ದರು ಎಂದು ಸಚಿನ್ ವಾಜೆ ತಿಳಿಸಿದ್ದಾರೆ. ತಮ್ಮ ಮರು ಸೇರ್ಪಡೆ ಬಳಿಕ 2 ಕೋಟಿ ರೂಪಾಯಿ ನೀಡುವಂತೆ ದೇಶ್‌ಮುಖ್ ಸೂಚಿಸಿದ್ದರು. ಅಲ್ಲದೆ, ತಮ್ಮನ್ನು ಕಚೇರಿ ಅಥವಾ ಮನೆಗೆ ಕರೆಸಿಕೊಳ್ಳುತ್ತಿದ್ದ ದೇಶ್‌ಮುಖ್, ಟಿಆರ್‌ಪಿ ಹಗರಣ, ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ಬಂಧನ, ದಿಲೀಪ್ ಛಾಬ್ರಿಯಾ ಪ್ರಕರಣ ಮತ್ತು ಸಾಮಾಜಿಕ ಜಾಲತಾಣದ ನಕಲಿ ಫಾಲೋವರ್‌ಗಳ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳ ಬಗ್ಗೆ ನೇರವಾಗಿ ಸೂಚನೆ ನೀಡುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಅರ್ನಬ್ ಬಂಧನಕ್ಕೆ ಸಂಚು'ಟಿಆರ್‌ಪಿ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸುವಂತೆ ಅನಿಲ್ ದೇಶ್‌ಮುಖ್ ಬಯಸಿದ್ದರು. ದಿಲೀಪ್ ಛಾಬ್ರಿಯಾ ಪ್ರಕರಣದಲ್ಲಿ ಅವರ ಪಾಲುದಾರರ ಜತೆ ನನ್ನ ಮೂಲಕ ಅಂದಾಜು 150 ಕೋಟಿ ರೂ ಮೊತ್ತದ ರಾಜಿ ವ್ಯವಹಾರ ನಡೆಸುವಂತೆ ಅನಿಲ್ ದೇಶ್‌ಮುಖ್ ಉದ್ದೇಶಿಸಿದ್ದರು. ಸಾಮಾಜಿಕ ಮಾಧ್ಯಮಗಳ ನಕಲಿ ಫಾಲೋವರ್‌ಗಳ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಸಮಗ್ರ ಕ್ರಮಕ್ಕೆ ಬಯಸಿದ್ದರು' ಎಂದು ವಾಜೆ ವಿವರಿಸಿದ್ದಾರೆ. ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಮತ್ತು ಅವರ ಸಹಚರರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ನಡೆದ ವಿಚಾರಣೆ ವೇಳೆ ಇ.ಡಿ ಸಹಾಯಕ ನಿರ್ದೇಶಕರ ಮುಂದೆ ವಾಜೆ ಹೇಳಿಕೆ ನೀಡಿದ್ದಾರೆ. ಪೊಲೀಸರಿಂದ ಹಣ ಸುಲಿಗೆ10 ಡಿಸಿಪಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಮುಂಬಯಿ ಪೊಲೀಸ್ ಆಯುಕ್ತರಾಗಿದ್ದ ಪರಮ್ ಬೀರ್ ಸಿಂಗ್ ನೀಡಿದ್ದ ಆದೇಶಕ್ಕೆ ಅನಿಲ್ ದೇಶ್‌ಮುಖ್ ಮತ್ತು ಸಾರಿಗೆ ಸಚಿವ ಅನಿಲ್ ಪರಬ್ ವಿರೋಧ ವ್ಯಕ್ತಪಡಿಸಿದ್ದರು. ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಮಾಡಿದ್ದ ಅವರು, ಅದಕ್ಕೆ ಪ್ರತಿಯಾಗಿ ಈ ಪೊಲೀಸ್ ಅಧಿಕಾರಿಗಳಿಂದ ಒಟ್ಟು 40 ಕೋಟಿ ರೂ ಪಡೆದುಕೊಂಡಿದ್ದರು. ಇದರಲ್ಲಿ 20 ಕೋಟಿ ರೂ ಹಣವನ್ನು ಅನಿಲ್ ದೇಶ್‌ಮುಖ್ ಅವರಿಗೆ ಅವರ ಖಾಸಗಿ ಕಾರ್ಯದರ್ಶಿ ಸಂಜೀವ್ ಪಾಲಂಡೆ ಮೂಲಕ ಹಾಗೂ ಅನಿಲ್ ಪರಬ್ ಅವರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಜರಂಗ್ ಕರ್ಮಾಟೆ ಮೂಲಕ ರವಾನಿಸಲಾಗಿತ್ತು. ಬಾರ್‌ಗಳಿಂದ ಹಣ ಸಂಗ್ರಹಅನಿಲ್ ದೇಶ್‌ಮುಖ್ ಸೂಚನೆಯಂತೆ ಮುಂಬಯಿಯ ವಿವಿಧ ಬಾರ್‌ಗಳಿಂದ ಹೇಗೆ ಹಣ ಸುಲಿಗೆ ಮಾಡಲಾಗಿತ್ತು ಎಂಬುದನ್ನು ವಾಜೆ ವಿವರಿಸಿದ್ದಾರೆ. ತಾವು 1,750 ಬಾರ್ ಮತ್ತು ರೆಸ್ಟೋರೆಂಟ್‌ಗಳ ಪಟ್ಟಿ ನೀಡಿದ್ದು, ಪ್ರತಿ ಅಂಗಡಿಯಿಂದಲೂ ಅಂದಾಜು 3 ಲಕ್ಷ ರೂ ಸಂಗ್ರಹಿಸಿದ್ದಾಗಿ ತಿಳಿಸಿದ್ದಾರೆ. 2020ರ ಡಿಸೆಂಬರ್‌ನಿಂದ 2021ರ ಫೆಬ್ರವರಿ ಅವಧಿಯಲ್ಲಿ 4.70 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ದೇಶ್‌ಮುಖ್‌ಗೆ ನೀಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಹಣವನ್ನು 'ನಂ.1' ಎಂಬುವವರಿಗಾಗಿ ಸಂಗ್ರಹಿಸಲಾಗುತ್ತಿದೆ ಎಂದು ವಾಜೆ ಹೇಳಿದ್ದಾಗಿ ಬಾರ್ ಮಾಲೀಕನೊಬ್ಬ ಹೇಳಿಕೆ ನೀಡಿದ್ದ. 'ನಂ.1' ಎನ್ನುವುದು ಅನಿಲ್ ದೇಶ್‌ಮುಖ್ ಅವರ ಗುಪ್ತನಾಮ ಎಂದು ವಾಜೆ ತಿಳಿಸಿದ್ದಾರೆ. ಆರೋಪಿಗಳಲ್ಲಿ ದೇಶ್‌ಮುಖ್ ಇಲ್ಲ!ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಆರೋಪಿಗಳ ವಿರುದ್ಧ ಇ.ಡಿ 77 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ಆದರೆ ಅದಿನ್ನೂ ಅನಿಲ್ ದೇಶ್‌ಮುಖ್ ಅವರನ್ನು ಆರೋಪಿ ಎಂದು ಪರಿಗಣಿಸಿಲ್ಲ. ಏಕೆಂದರೆ ಇದುವರೆಗೂ ಅನಿಲ್ ದೇಶ್‌ಮುಖ್ ಇ.ಡಿ ಕಚೇರಿಗೆ ಹಾಜರಾಗಿ ಹೇಳಿಕೆ ದಾಖಲಿಸಿಲ್ಲ. ದೇಶ್‌ಮುಖ್ ಅವರ ಕುಟುಂಬದ ಸದಸ್ಯರು ಸೇರಿದಂತೆ ಇತರೆ ಶಂಕಿತರ ಪಾತ್ರದ ಬಗ್ಗೆ ತನಿಖೆ ನಡೆಸಲು ಇನ್ನಷ್ಟು ಸಮಯ ಬೇಕೆಂದು ಅದು ನ್ಯಾಯಾಲಯಕ್ಕೆ ಕೋರಿದೆ. ಯಾರಿದು ವಾಜೆ?ಪೊಲೀಸ್ ಕಸ್ಟಡಿಯಲ್ಲಿನ ಸಾವು ಪ್ರಕರಣದಡಿ ವಾಜೆ ಅವರನ್ನು 2004ರಲ್ಲಿ ಪೊಲೀಸ್ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಗೃಹ ಸಚಿವರಾಗಿದ್ದ ವೇಳೆ ಲಾಬಿ ನಡೆಸಿದ್ದ ದೇಶ್‌ಮುಖ್, ವಾಜೆಯಿಂದ ಹಣ ಪಡೆದು ಮತ್ತೆ ಪೊಲೀಸ್ ಹುದ್ದೆಗೆ ಸೇರಿಸಿದ್ದರು. ಜತೆಗೆ ತಮಗೆ ಪ್ರತಿ ತಿಂಗಳೂ ಸುಲಿಗೆ ಮಾಡಿ ಹಣ ತಂದುಕೊಡುವ ಜವಾಬ್ದಾರಿ ನೀಡಿದ್ದರು. ಎನ್‌ಕೌಂಟರ್ ಸ್ಪೆಷಲಿಸ್ಟ್ ಎನಿಸಿಕೊಂಡಿದ್ದ ವಾಜೆ, ತಮ್ಮ ಹಿಂದಿನ ಖ್ಯಾತಿಯನ್ನು ಮರಳಿ ಗಳಿಸಲು ಹಾಗೂ ತಮ್ಮ ಅನೈತಿಕ ವ್ಯವಹಾರಗಳಿಗೆ ನೆರವಾಗಲು ಮುಕೇಶ್ ಅಂಬಾನಿ ಮನೆ ಮುಂದೆ ಕಾರಿನಲ್ಲಿ ಸ್ಫೋಟಕಗಳನ್ನು ಇರಿಸಿ ಅದು, ಭಯೋತ್ಪಾದಕರ ಕೃತ್ಯ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಕಾರಿನ ಮಾಲೀಕ ಮನ್ಸುಖ್ ಹಿರೇನ್, ತಮ್ಮ ಸೂಚನೆಗಳನ್ನು ಪಾಲಿಸಲು ನಿರಾಕರಿಸಿದ್ದರಿಂದ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದರು. ಈ ಎಲ್ಲ ಸಿನಿಮೀಯ ಸಂಗತಿಗಳು ಎನ್‌ಐಎ ಮತ್ತು ಇ.ಡಿ ತನಿಖೆಯಿಂದ ಬಯಲಿಗೆ ಬರುತ್ತಿವೆ.