ಕೋವಿಡ್ ಸಾಂಕ್ರಾಮಿಕ ನಂತರ ಜನರಲ್ಲಿ ಕುತ್ತಿಗೆ, ಬೆನ್ನುಮೂಳೆ ನೋವಿನ ಸಮಸ್ಯೆ ಹೆಚ್ಚಳ!

ಕಚೇರಿಗಳಲ್ಲಿ ಕುರ್ಚಿ ಮೇಲೆ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವವರಿಗೆ ಕುತ್ತಿಗೆ ಮತ್ತು ಬೆನ್ನುಮೂಳೆ ಸಂಬಂಧಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹಲವರಿಗೆ ನೋವು ಯಾವ ಮಟ್ಟಿಗೆ ಹೋಗುತ್ತದೆ ಎಂದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯತೆ ಸಹ ಉಂಟಾಗುತ್ತದೆ.  ಬೆಂಗಳೂರು: ಕಚೇರಿಗಳಲ್ಲಿ ಕುರ್ಚಿ ಮೇಲೆ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವವರಿಗೆ ಕುತ್ತಿಗೆ ಮತ್ತು ಬೆನ್ನುಮೂಳೆ ಸಂಬಂಧಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹಲವರಿಗೆ ನೋವು ಯಾವ ಮಟ್ಟಿಗೆ ಹೋಗುತ್ತದೆ ಎಂದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯತೆ ಸಹ ಉಂಟಾಗುತ್ತದೆ.  ಬೆಂಗಳೂರಿನ ಸಂಜಯ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್‌ನ ನಿರ್ದೇಶಕ ಡಾ ನಿರಂಜನ್ ಗೌಡ ಎಂಆರ್, ಬೆನ್ನು ಮತ್ತು ಕುತ್ತಿಗೆ ಸಂಬಂಧಿ ನೋವುಗಳನ್ನು ಹೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ.  ಕೋವಿಡ್ ಸಾಂಕ್ರಾಮಿಕ ರೋಗ ಬಂದ ನಂತರ ಕುತ್ತಿಗೆ, ಬೆನ್ನು ಮತ್ತು ಬೆನ್ನುಮೂಳೆಯ ಸಂಬಂಧಿತ ಸಮಸ್ಯೆಗಳಿಗೆ ವೈದ್ಯಕೀಯ ಸಹಾಯವನ್ನು ಪಡೆಯುವ ಜನರಲ್ಲಿ ಶೇಕಡಾ 10ರಿಂದ 15ರಷ್ಟು ಹೆಚ್ಚಳವನ್ನು ನಾವು ನೋಡಿದ್ದೇವೆ. ಹೆಚ್ಚಿನ ರೋಗಿಗಳು ಕಚೇರಿಗಳಲ್ಲಿ ಕೆಲಸ ಮಾಡುವ ವೃತ್ತಿಪರರು, ಅಲ್ಪಸಮಯದಿಂದ ದೀರ್ಘಕಾಲದವರೆಗೆ ನೋವು ಕಾಣಿಸಿಕೊಂಡಿರುವುದರ ಬಗ್ಗೆ ಹೇಳಿಕೊಂಡು ಬರುತ್ತಾರೆ ಎಂದರು.  ಕೆಲಸ-ಸಂಬಂಧಿತ ಬೆನ್ನುಮೂಳೆಯ ಸಮಸ್ಯೆಗಳು ಈಗ ಬಹಳ ಪ್ರಚಲಿತವಾಗಿದೆ, ಜನರು ಭುಜದ ಕೀಲುಗಳು, ಕುತ್ತಿಗೆ ಮತ್ತು ಬೆನ್ನುಮೂಳೆಯಲ್ಲಿ ಅಸ್ವಸ್ಥತೆಯ ಬಗ್ಗೆ ದೂರು ನೀಡುತ್ತಾರೆ. ರೋಗಿಗಳು ನಿರಂತರವಾದ, ನರಳುವ ನೋವನ್ನು ಅನುಭವಿಸುತ್ತಾರೆ, ಇದು ಪ್ರತಿದಿನವೂ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಔಷಧಿ ತೆಗೆದುಕೊಂಡು ಗುಣವಾದರೂ ಮತ್ತೆ ಮತ್ತೆ ಆಸ್ಪತ್ರೆಗೆ ಬರುತ್ತಿರುತ್ತಾರೆ ಎಂದು ಡಾ ನಿರಂಜನ್ ಗೌಡ ಹೇಳುತ್ತಾರೆ.  ಇನ್‌ಸ್ಟಿಟ್ಯೂಟ್ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, 2022 ರಲ್ಲಿ 64,851 ರೋಗಿಗಳಿಗೆ ಮೂಳೆ ಮತ್ತು ಕೀಲು ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗಿದೆ. ಅವುಗಳಲ್ಲಿ 4,051 ಪ್ರಮುಖ ಮತ್ತು 7,100 ಸಣ್ಣ ಸಮಸ್ಯೆಗಳಿಗೆ ಆಗಿವೆ. ಶೇಕಡಾ 1ಕ್ಕಿಂತ ಕಡಿಮೆ ಸಾವಿನ ಪ್ರಮಾಣ ಕಂಡುಬರುತ್ತಿದೆ. ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಲಹೆಗಾರ (ಮೂಳೆರೋಗ) ಡಾ.ಹರೀಶ್ ಪುರಾಣಿಕ್, ಮೂಳೆಚಿಕಿತ್ಸೆ ವಿಭಾಗಕ್ಕೆ ಭೇಟಿ ನೀಡುವ ಒಟ್ಟು ರೋಗಿಗಳಲ್ಲಿ ಸರಿಸುಮಾರು 20-30 ಪ್ರತಿಶತದಷ್ಟು ಜನರು ಬೆನ್ನು ಮತ್ತು ಬೆನ್ನುಮೂಳೆಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೇಳಿಕೊಂಡು ಬರುತ್ತಾರೆ ಎಂದರು.  ಭಾರತವು ನಿಖರವಾದ ಅಂಕಿಅಂಶಗಳನ್ನು ಹೊಂದಿಲ್ಲವಾದರೂ, ಪ್ರಧಾನವಾಗಿ 22-45 ವಯಸ್ಸಿನ ದುಡಿಯುವ ಜನರು ಹೆಚ್ಚು ಪರಿಣಾಮ ಬೀರುತ್ತಾರೆ ಎಂದು ವೈದ್ಯರು ಹೇಳಿದರು, ಇದು ಶೇಕಡಾ 40 ಪ್ರಕರಣಗಳಲ್ಲಿ ನೌಕರರು ಕೆಲಸಕ್ಕೆ ಕಚೇರಿಗೆ ಆಗಾಗ ಗೈರುಹಾಜರಾಗುತ್ತಿರುತ್ತಾರೆ.  ಕಡಿಮೆಯಾಗುತ್ತಿರುವ ದೈಹಿಕ ಚಟುವಟಿಕೆ: ಜನರಲ್ಲಿ ದೈಹಿಕ ಚಟುವಟಿಕೆಯಲ್ಲಿ ಇಳಿಕೆ ಬೆನ್ನು ಮತ್ತು ಬೆನ್ನುಮೂಳೆಯ ಸಮಸ್ಯೆಗಳಿಗೆ ಕಾರಣವಾಗುವ ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ಅವುಗಳನ್ನು ತಪ್ಪಿಸಲು, ಕಣ್ಣಿನ ಮಟ್ಟದಲ್ಲಿ ಕಂಪ್ಯೂಟರ್ ಪರದೆ ಮುಂದೆ ಕುಳಿತುಕೊಳ್ಳಲು ಮತ್ತು ಮೇಜಿನ ಮೇಲೆ ಮೊಣಕೈಗಳನ್ನು ವಿಶ್ರಾಂತಿ ಪಡೆಯಿರಿ, ಕೈಗಳು ನೇತಾಡುವಂತೆ ಬಿಡಬೇಡಿ ಎಂದು ಡಾ ಪುರಾಣಿಕ್ ಸಲಹೆ ನೀಡುತ್ತಾರೆ. ಕುಳಿತುಕೊಳ್ಳುವಾಗ ಸೊಂಟ ಮತ್ತು ಮೊಣಕಾಲುಗಳು ಜೋಡಿಸಲ್ಪಟ್ಟಿರಬೇಕು ಎನ್ನುತ್ತಾರೆ.

ಕೋವಿಡ್ ಸಾಂಕ್ರಾಮಿಕ ನಂತರ ಜನರಲ್ಲಿ ಕುತ್ತಿಗೆ, ಬೆನ್ನುಮೂಳೆ ನೋವಿನ ಸಮಸ್ಯೆ ಹೆಚ್ಚಳ!
Linkup
ಕಚೇರಿಗಳಲ್ಲಿ ಕುರ್ಚಿ ಮೇಲೆ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವವರಿಗೆ ಕುತ್ತಿಗೆ ಮತ್ತು ಬೆನ್ನುಮೂಳೆ ಸಂಬಂಧಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹಲವರಿಗೆ ನೋವು ಯಾವ ಮಟ್ಟಿಗೆ ಹೋಗುತ್ತದೆ ಎಂದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯತೆ ಸಹ ಉಂಟಾಗುತ್ತದೆ.  ಬೆಂಗಳೂರು: ಕಚೇರಿಗಳಲ್ಲಿ ಕುರ್ಚಿ ಮೇಲೆ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವವರಿಗೆ ಕುತ್ತಿಗೆ ಮತ್ತು ಬೆನ್ನುಮೂಳೆ ಸಂಬಂಧಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹಲವರಿಗೆ ನೋವು ಯಾವ ಮಟ್ಟಿಗೆ ಹೋಗುತ್ತದೆ ಎಂದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯತೆ ಸಹ ಉಂಟಾಗುತ್ತದೆ.  ಬೆಂಗಳೂರಿನ ಸಂಜಯ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್‌ನ ನಿರ್ದೇಶಕ ಡಾ ನಿರಂಜನ್ ಗೌಡ ಎಂಆರ್, ಬೆನ್ನು ಮತ್ತು ಕುತ್ತಿಗೆ ಸಂಬಂಧಿ ನೋವುಗಳನ್ನು ಹೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ.  ಕೋವಿಡ್ ಸಾಂಕ್ರಾಮಿಕ ರೋಗ ಬಂದ ನಂತರ ಕುತ್ತಿಗೆ, ಬೆನ್ನು ಮತ್ತು ಬೆನ್ನುಮೂಳೆಯ ಸಂಬಂಧಿತ ಸಮಸ್ಯೆಗಳಿಗೆ ವೈದ್ಯಕೀಯ ಸಹಾಯವನ್ನು ಪಡೆಯುವ ಜನರಲ್ಲಿ ಶೇಕಡಾ 10ರಿಂದ 15ರಷ್ಟು ಹೆಚ್ಚಳವನ್ನು ನಾವು ನೋಡಿದ್ದೇವೆ. ಹೆಚ್ಚಿನ ರೋಗಿಗಳು ಕಚೇರಿಗಳಲ್ಲಿ ಕೆಲಸ ಮಾಡುವ ವೃತ್ತಿಪರರು, ಅಲ್ಪಸಮಯದಿಂದ ದೀರ್ಘಕಾಲದವರೆಗೆ ನೋವು ಕಾಣಿಸಿಕೊಂಡಿರುವುದರ ಬಗ್ಗೆ ಹೇಳಿಕೊಂಡು ಬರುತ್ತಾರೆ ಎಂದರು.  ಕೆಲಸ-ಸಂಬಂಧಿತ ಬೆನ್ನುಮೂಳೆಯ ಸಮಸ್ಯೆಗಳು ಈಗ ಬಹಳ ಪ್ರಚಲಿತವಾಗಿದೆ, ಜನರು ಭುಜದ ಕೀಲುಗಳು, ಕುತ್ತಿಗೆ ಮತ್ತು ಬೆನ್ನುಮೂಳೆಯಲ್ಲಿ ಅಸ್ವಸ್ಥತೆಯ ಬಗ್ಗೆ ದೂರು ನೀಡುತ್ತಾರೆ. ರೋಗಿಗಳು ನಿರಂತರವಾದ, ನರಳುವ ನೋವನ್ನು ಅನುಭವಿಸುತ್ತಾರೆ, ಇದು ಪ್ರತಿದಿನವೂ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಔಷಧಿ ತೆಗೆದುಕೊಂಡು ಗುಣವಾದರೂ ಮತ್ತೆ ಮತ್ತೆ ಆಸ್ಪತ್ರೆಗೆ ಬರುತ್ತಿರುತ್ತಾರೆ ಎಂದು ಡಾ ನಿರಂಜನ್ ಗೌಡ ಹೇಳುತ್ತಾರೆ.  ಇನ್‌ಸ್ಟಿಟ್ಯೂಟ್ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, 2022 ರಲ್ಲಿ 64,851 ರೋಗಿಗಳಿಗೆ ಮೂಳೆ ಮತ್ತು ಕೀಲು ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗಿದೆ. ಅವುಗಳಲ್ಲಿ 4,051 ಪ್ರಮುಖ ಮತ್ತು 7,100 ಸಣ್ಣ ಸಮಸ್ಯೆಗಳಿಗೆ ಆಗಿವೆ. ಶೇಕಡಾ 1ಕ್ಕಿಂತ ಕಡಿಮೆ ಸಾವಿನ ಪ್ರಮಾಣ ಕಂಡುಬರುತ್ತಿದೆ. ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಲಹೆಗಾರ (ಮೂಳೆರೋಗ) ಡಾ.ಹರೀಶ್ ಪುರಾಣಿಕ್, ಮೂಳೆಚಿಕಿತ್ಸೆ ವಿಭಾಗಕ್ಕೆ ಭೇಟಿ ನೀಡುವ ಒಟ್ಟು ರೋಗಿಗಳಲ್ಲಿ ಸರಿಸುಮಾರು 20-30 ಪ್ರತಿಶತದಷ್ಟು ಜನರು ಬೆನ್ನು ಮತ್ತು ಬೆನ್ನುಮೂಳೆಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೇಳಿಕೊಂಡು ಬರುತ್ತಾರೆ ಎಂದರು.  ಭಾರತವು ನಿಖರವಾದ ಅಂಕಿಅಂಶಗಳನ್ನು ಹೊಂದಿಲ್ಲವಾದರೂ, ಪ್ರಧಾನವಾಗಿ 22-45 ವಯಸ್ಸಿನ ದುಡಿಯುವ ಜನರು ಹೆಚ್ಚು ಪರಿಣಾಮ ಬೀರುತ್ತಾರೆ ಎಂದು ವೈದ್ಯರು ಹೇಳಿದರು, ಇದು ಶೇಕಡಾ 40 ಪ್ರಕರಣಗಳಲ್ಲಿ ನೌಕರರು ಕೆಲಸಕ್ಕೆ ಕಚೇರಿಗೆ ಆಗಾಗ ಗೈರುಹಾಜರಾಗುತ್ತಿರುತ್ತಾರೆ.  ಕಡಿಮೆಯಾಗುತ್ತಿರುವ ದೈಹಿಕ ಚಟುವಟಿಕೆ: ಜನರಲ್ಲಿ ದೈಹಿಕ ಚಟುವಟಿಕೆಯಲ್ಲಿ ಇಳಿಕೆ ಬೆನ್ನು ಮತ್ತು ಬೆನ್ನುಮೂಳೆಯ ಸಮಸ್ಯೆಗಳಿಗೆ ಕಾರಣವಾಗುವ ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ಅವುಗಳನ್ನು ತಪ್ಪಿಸಲು, ಕಣ್ಣಿನ ಮಟ್ಟದಲ್ಲಿ ಕಂಪ್ಯೂಟರ್ ಪರದೆ ಮುಂದೆ ಕುಳಿತುಕೊಳ್ಳಲು ಮತ್ತು ಮೇಜಿನ ಮೇಲೆ ಮೊಣಕೈಗಳನ್ನು ವಿಶ್ರಾಂತಿ ಪಡೆಯಿರಿ, ಕೈಗಳು ನೇತಾಡುವಂತೆ ಬಿಡಬೇಡಿ ಎಂದು ಡಾ ಪುರಾಣಿಕ್ ಸಲಹೆ ನೀಡುತ್ತಾರೆ. ಕುಳಿತುಕೊಳ್ಳುವಾಗ ಸೊಂಟ ಮತ್ತು ಮೊಣಕಾಲುಗಳು ಜೋಡಿಸಲ್ಪಟ್ಟಿರಬೇಕು ಎನ್ನುತ್ತಾರೆ. ಕೋವಿಡ್ ಸಾಂಕ್ರಾಮಿಕ ನಂತರ ಜನರಲ್ಲಿ ಕುತ್ತಿಗೆ, ಬೆನ್ನುಮೂಳೆ ನೋವಿನ ಸಮಸ್ಯೆ ಹೆಚ್ಚಳ!