ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಡಿಜಿಟಲ್‌ ಹವಾ, ಇಎಎಸ್‌ಇ-4.0ಕ್ಕೆ ಚಾಲನೆ

ಸಾರ್ವಜನಿಕ ರಂಗದ ಬ್ಯಾಂಕ್‌ಗಳ ಮತ್ತೊಂದು ಸುತ್ತಿನ ಸುಧಾರಣೆಯ ಕ್ರಮ 'ಇಎಎಸ್‌ಇ-4.0'ಕ್ಕೆ ಬುಧವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಚಾಲನೆ ನೀಡಿದ್ದು, ಬ್ಯಾಂಕ್‌ಗಳಲ್ಲಿ ಡಿಜಿಟಲ್‌ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುವ ಗುರಿಯನ್ನು ಇದು ಹೊಂದಿದೆ.

ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಡಿಜಿಟಲ್‌ ಹವಾ, ಇಎಎಸ್‌ಇ-4.0ಕ್ಕೆ ಚಾಲನೆ
Linkup
ಮುಂಬಯಿ : ಸಾರ್ವಜನಿಕ ಬ್ಯಾಂಕ್‌ಗಳ ಮತ್ತೊಂದು ಸುತ್ತಿನ ಸುಧಾರಣೆಯ ಕ್ರಮ 'ಇಎಎಸ್‌ಇ-4.0'ಕ್ಕೆ ಹಣಕಾಸು ಸಚಿವೆ ಅವರು ಬುಧವಾರ ಚಾಲನೆ ನೀಡಿದ್ದಾರೆ. ಬ್ಯಾಂಕ್‌ಗಳಲ್ಲಿ ಡಿಜಿಟಲ್‌ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುವ ಗುರಿಯನ್ನು ಇದು ಹೊಂದಿದೆ. ಸಾರ್ವಜನಿಕ ಬ್ಯಾಂಕಿಂಗ್‌ ಅನ್ನು ಮತ್ತಷ್ಟು ಸ್ಮಾರ್ಟ್‌ ಆಗಿಸುವ ಉದ್ದೇಶದ ಇಎಎಸ್‌ಇ 4.0 ಯೋಜನೆ (ಎನ್‌ಹಾನ್ಸ್ಡ್‌ ಅಸೆಸ್‌ ಆ್ಯಂಡ್‌ ಸರ್ವೀಸ್‌ ಎಕ್ಸಲೆನ್ಸ್‌) ಇದಾಗಿದೆ. ತಂತ್ರಜ್ಞಾನ ಬಳಸಿದ ಸ್ಮಾರ್ಟ್‌ ಲೆಂಡಿಂಗ್‌, ಮನೆಬಾಗಿಲಿಗೆ ಹಣಕಾಸು ಸೇವೆ, ಮೊಬೈಲ್‌ ಮತ್ತು ಇಂಟರ್‌ನೆಟ್‌ ಬ್ಯಾಂಕಿಂಗ್‌, ಪಟ್ಟಣ, ಗ್ರಾಮಾಂತರ ಪ್ರದೇಶಗಳಿಗೆ ಡಿಜಿಟಲ್‌ ಪೇಮೆಂಟ್‌ ವಿಸ್ತರಣೆ, ಡೇಟಾ ಆಧಾರಿತ ಕೃಷಿ ಸಾಲ ಇತ್ಯಾದಿ ಸುಧಾರಣಾ ಕ್ರಮಗಳನ್ನು ಒಳಗೊಂಡಿದೆ. ಈಗಾಗಲೇ ಮೂರು ಸುತ್ತಿನ ಇಎಎಸ್‌ಇಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕ ಬ್ಯಾಂಕ್‌ಗಳು ಸಂಘಟಿತವಾಗಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಲಾಭದ ಹಳಿಗೆ ಮರಳುತ್ತಿರುವುದು ಸ್ಪಷ್ಟವಾಗಿದೆ. ಅವುಗಳಲ್ಲಿ2 ಬ್ಯಾಂಕ್‌ಗಳು ಅತ್ಯುತ್ತಮವಾಗಿ ನಿರ್ವಹಿಸುತ್ತಿವೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಬ್ಯಾಂಕ್‌ಗಳು ರಾಜ್ಯ ಸರಕಾರದ ಜತೆಗೂಡಿ ' ಒಂದು ಜಿಲ್ಲೆ, ಒಂದು ಉತ್ಪನ್ನ ರಫ್ತು' ಯೋಜನೆಯನ್ನು ಉತ್ತೇಜಿಸಬೇಕು ಎಂದಿದ್ದಾರೆ. ಸಾರ್ವಜನಿಕ ಮುಖ್ಯಸ್ಥರುಗಳ ಜತೆ ಬ್ಯಾಂಕ್‌ಗಳ ವಾರ್ಷಿಕ ಪರಾಮರ್ಶೆಯನ್ನೂ ಅವರು ನಡೆಸಿದ್ದಾರೆ. ಕೌಟುಂಬಿಕ ಪಿಂಚಣಿ ಹೆಚ್ಚಳ ಹಣಕಾಸು ಕಾರ್ಯದರ್ಶಿ ದೇಬಶೀಷ್‌ ಪಾಂಡಾ ಮಾತನಾಡಿ, ಬ್ಯಾಂಕ್‌ ಉದ್ಯೋಗಿಗಳ ಕುಟುಂಬದ ಸದಸ್ಯರಿಗೆ ಕೌಟುಂಬಿಕ ಪಿಂಚಣಿಯ ಅಡಿಯಲ್ಲಿ ಪಿಂಚಣಿ ಮಿತಿಯ ಬದಲಿಗೆ ಏಕರೂಪದ ಶೇ.30ರ ಶ್ರೇಣಿಯಲ್ಲಿ ಪಿಂಚಣಿ ದೊರೆಯಲಿದೆ. ಹೀಗಾಗಿ ಪಿಂಚಣಿ 35,000 ರೂ. ತನಕ ಏರಿಕೆಯಾಗಲಿದೆ ಎಂದು ವಿವರಿಸಿದರು. ಬ್ಯಾಂಕ್‌ಗಳಲ್ಲಿನ ಅರ್ಹ ಉದ್ಯೋಗಿಗಳು ನಿವೃತ್ತಿಗೆ ಮುನ್ನ ಅಥವಾ ನಿವೃತ್ತಿಯ ನಂತರ ಮೃತಪಟ್ಟ ನಂತರ ಅವರ ಕುಟುಂಬದ ಸದಸ್ಯರಿಗೆ ದೊರೆಯುವ ಪಿಂಚಣಿಯ ಮೊತ್ತವನ್ನು ಕೌಟುಂಬಿಕ ಪಿಂಚಣಿ (ಫ್ಯಾಮಿಲಿ ಪೆನ್ಷನ್‌) ಎನ್ನುತ್ತಾರೆ. ಹಾಗೆಯೇ ಎನ್‌ಪಿಎಸ್‌ ಅಡಿಯಲ್ಲಿ ಬ್ಯಾಂಕ್‌ಗಳು ನೀಡುವ ಪಾಲನ್ನು ಶೇ.10ರಿಂದ ಶೇ.14ಕ್ಕೆ ಏರಿಸಲಾಗಿದೆ ಎಂದರು.