ಸಂಪುಟ ರಚನೆ: ಪ್ರಾದೇಶಿಕ ಸಮತೋಲನ, ಬ್ಯಾಲೆನ್ಸ್ ಸಂಪುಟಕ್ಕೆ ಒತ್ತು, ಬಸವರಾಜ ಬೊಮ್ಮಾಯಿ ಸುಳಿವು

ಸಂಪುಟ ರಚನೆ ಶೀಘ್ರದಲ್ಲಿ ಆಗುವುದು ಬಹುತೇಕ ಫಿಕ್ಸ್ ಆಗಿದ್ದು ಪ್ರಾದೇಶಿಕ ಸಮತೋಲನ, ಬ್ಯಾಲೆನ್ಸ್ ಸಂಪುಟಕ್ಕೆ ಒತ್ತು ನೀಡುವ ಸುಳಿವನ್ನು ನೂತನ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಸಂಪುಟ ರಚನೆ: ಪ್ರಾದೇಶಿಕ ಸಮತೋಲನ, ಬ್ಯಾಲೆನ್ಸ್ ಸಂಪುಟಕ್ಕೆ ಒತ್ತು, ಬಸವರಾಜ ಬೊಮ್ಮಾಯಿ ಸುಳಿವು
Linkup
ಹೊಸದಿಲ್ಲಿ: ಸಂಪುಟ ರಚನೆ ಸಂದರ್ಭದಲ್ಲಿ ಪ್ರಾದೇಶಿಕ ಸಮತೋಲನ, ಬ್ಯಾಲೆನ್ಸ್ ಸಂಪುಟಕ್ಕೆ ಒತ್ತು ನೀಡಲಾಗುವುದು ಎಂಬ ಸುಳಿವನ್ನು ಸಿಎಂ ನೀಡಿದ್ದಾರೆ. ದೆಹಲಿಯಲ್ಲಿ ಸೋಮವಾರ ಮಾತನಾಡಿದ ಅವರು, ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಒಮ್ಮತದ ನಿರ್ಧಾರ ಮಾಡಲಾಗಿದೆ ಎಂದರು. ಸೋಮವಾರ ಸಂಜೆ ದೆಹಲಿಯಲ್ಲಿ ಪಕ್ಷದ ಸಭೆ ನಡೆಯಲಿದೆ. ಪಕ್ಷದ ಪ್ರಮುಖರು ಹಾಗೂ ಜೆಪಿ ನಡ್ಡಾ ಸಭೆ ನಡೆಸಲಿದ್ದಾರೆ. ಇಲ್ಲಿ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರವಾಗಲಿದೆ. ಮಾಜಿ ಸಚಿವರು, ಶಾಸಕರು ಬಂದಿದ್ದಾರೆ ಅವರ ಜೊತೆಗೂ ಚರ್ಚೆ ನಡೆಸಲಾಗುವುದು. ಎಲ್ಲ ಶಾಸಕರು ಸಚಿವರಾಗಲು ಸಾಧ್ಯವಿಲ್ಲ.ಈ ವಿಚಾರ ನಮ್ಮ ಶಾಸಕರಿಗೂ ಗೊತ್ತು. ಆದರೆ ಪ್ರಾದೇಶಿಕ ತಾರತಮ್ಯ ಆಗದಂತೆ ಸಂಪುಟದಲ್ಲಿ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಈ ಹಿಂದೆ ಯಡಿಯೂರಪ್ಪ ಅವರ ಸಂಪುಟ ಇತ್ತು. ಅದನ್ನು ಕೂಡಾ ಗಮನದಲ್ಲಿ ಇಟ್ಟುಕೊಳ್ಳಲಾಗುವುದು ಎಂದ ಅವರು ಹಳೇ ಸಂಪುಟದ ಎಲ್ಲರನ್ನು ಕೈಬಿಡಲು ಸಾಧ್ಯವಿಲ್ಲ ಎಂಬ ಸುಳಿವು ನೀಡಿದರು. ಇನ್ನು ಬಿಎಸ್‌ವೈ ಪುತ್ರ ವಿಜಯೇಂದ್ರ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಇದಕ್ಕೆ ಹೈಕಮಂಡ್ ಉತ್ತರ ಕೊಡಲಿದೆ ಎಂದರು. ಒಟ್ಟಿನಲ್ಲಿ ಡಿಸಿಎಂ ಹುದ್ದೆ ಇರುವ ಹಾಗು ಪ್ರಾದೇಶಿಕ ಸಮತೋಲನದ ಬ್ಯಾಲೆನ್ಸ್ ಸಂಪುಟಕ್ಕೆ ಬಸವರಾಜ ಬೊಮ್ಮಾಯಿ ಒತ್ತು ನೀಡಿದ್ದಾರೆ ಎಂಬವುದು ಸ್ಪಷ್ಟವಾಗಿದೆ.