ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್‌ಗೆ ಸರ್‌ಪ್ರೈಸ್ ಗಿಫ್ಟ್ ನೀಡಿದ ಅಲ್ಲು ಅರ್ಜುನ್

ಟಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್‌ಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸರ್‌ಪ್ರೈಸ್ ಗಿಫ್ಟ್ ನೀಡಿದ್ದಾರೆ. 'ರಾಕ್‌ ಸ್ಟಾರ್ ದೇವಿ ಶ್ರೀ ಪ್ರಸಾದ್ - ಡಿಎಸ್‌ಪಿ' ಎಂದು ಬರೆದಿರುವ ಸೈನ್‌ಬೋರ್ಡ್ ಅನ್ನು ದೇವಿ ಶ್ರೀ ಪ್ರಸಾದ್‌ಗೆ ಉಡುಗೊರೆಯಾಗಿ ಅಲ್ಲು ಅರ್ಜುನ್ ನೀಡಿದ್ದಾರೆ.

ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್‌ಗೆ ಸರ್‌ಪ್ರೈಸ್ ಗಿಫ್ಟ್ ನೀಡಿದ ಅಲ್ಲು ಅರ್ಜುನ್
Linkup
ಟಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್‌ಗೆ ಸ್ಟೈಲಿಶ್ ಸ್ಟಾರ್ ಸರ್‌ಪ್ರೈಸ್ ಗಿಫ್ಟ್ ನೀಡಿದ್ದಾರೆ. 'ರಾಕ್‌ ಸ್ಟಾರ್ - ಡಿಎಸ್‌ಪಿ' ಎಂದು ಬರೆದಿರುವ ಸೈನ್‌ಬೋರ್ಡ್ ಅನ್ನು ದೇವಿ ಶ್ರೀ ಪ್ರಸಾದ್‌ಗೆ ಉಡುಗೊರೆಯಾಗಿ ಅಲ್ಲು ಅರ್ಜುನ್ ನೀಡಿದ್ದಾರೆ. ಅಲ್ಲು ಅರ್ಜುನ್ ಕಳುಹಿಸಿರುವ ಈ ಸ್ಪೆಷಲ್ ಗಿಫ್ಟ್ ನೋಡಿ ದೇವಿ ಶ್ರೀ ಪ್ರಸಾದ್ ಸಂತಸಗೊಂಡಿದ್ದಾರೆ. ಅಲ್ಲು ಅರ್ಜುನ್ ಕೊಟ್ಟಿರುವ ಉಡುಗೊರೆ ಬಗ್ಗೆ ದೇವಿ ಶ್ರೀ ಪ್ರಸಾದ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ''ಐಕಾನ್ ಸ್ಟಾರ್' ಅಲ್ಲು ಅರ್ಜುನ್‌ರಿಂದ ಸರ್‌ಪ್ರೈಸ್ 'ರಾಕ್ ಸ್ಟಾರ್' ಉಡುಗೊರೆ ಸಿಕ್ಕಿದೆ. ಈ ಲವ್ಲಿ ಸರ್‌ಪ್ರೈಸ್‌ಗೆ ಧನ್ಯವಾದಗಳು'' ಎಂದು ದೇವಿ ಶ್ರೀ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅಲ್ಲು ಅರ್ಜುನ್ ಕಳುಹಿಸಿದ ರಾಕ್ ಸ್ಟಾರ್ ಸೈನ್ ಬೋರ್ಡ್ ಇರುವ ವಿಡಿಯೋವನ್ನೂ ದೇವಿ ಶ್ರೀ ಪ್ರಸಾದ್ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ, ದೇವಿ ಶ್ರೀ ಪ್ರಸಾದ್ ಮತ್ತು ಅಲ್ಲು ಅರ್ಜುನ್ 17 ವರ್ಷಗಳಿಂದ ಆತ್ಮೀಯ ಗೆಳೆಯರು. ಅಲ್ಲು ಅರ್ಜುನ್ ಮತ್ತು ದೇವಿ ಶ್ರೀ ಪ್ರಸಾದ್ ಕಾಂಬಿನೇಶನ್‌ನಲ್ಲಿ 'ಆರ್ಯ', 'ಬನ್ನಿ, 'ಆರ್ಯ 2', 'ಜುಲಾಯಿ', 'ಇದ್ದಿರಮ್ಮಾಯಿಲತೋ', 'ಸನ್‌ ಆಫ್ ಸತ್ಯಮೂರ್ತಿ', 'ದುವ್ವಡ ಜಗನ್ನಾಥಂ' ಹಿಟ್ ಚಿತ್ರಗಳು ತೆರೆಕಂಡಿವೆ. ಈ ಎಲ್ಲಾ ಚಿತ್ರಗಳೂ ಮ್ಯೂಸಿಕಲ್ ಬ್ಲಾಕ್ ಬಸ್ಟರ್ ಆಗಿವೆ. ಸದ್ಯ ಅಲ್ಲು ಅರ್ಜುನ್ ಮತ್ತು ದೇವಿ ಶ್ರೀ ಪ್ರಸಾದ್ ಕಾಂಬಿನೇಶನ್‌ನಲ್ಲಿ 'ಪುಷ್ಪ' ಚಿತ್ರ ತಯಾರಾಗುತ್ತಿದೆ. ಲಾಕ್‌ಡೌನ್ ನಿಯಮಗಳು ಸಡಿಲಗೊಂಡ ಬಳಿಕ 'ಪುಷ್ಪ' ಚಿತ್ರದ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಅಂದ್ಹಾಗೆ, 'ಪುಷ್ಪ' ಚಿತ್ರಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.