ಶುಭ ಸುದ್ದಿ: ಡಿಆರ್‌ಡಿಒ ತಯಾರಿಸಿದ ಕೋವಿಡ್ ಔಷಧ ಸೋಮವಾರದಿಂದ ಬಳಕೆಗೆ ಲಭ್ಯ

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಕೋವಿಡ್ ನಿಗ್ರಹ ಪೌಡರ್ ಔಷಧ 2-ಡಿಜಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಬಿಡುಗಡೆ ಮಾಡಲಿದ್ದಾರೆ. ಇದು ಕೋವಿಡ್ ಸಮಸ್ಯೆಯನ್ನು ತಗ್ಗಿಸಲು ನೆರವಾಗಲಿದೆ.

ಶುಭ ಸುದ್ದಿ: ಡಿಆರ್‌ಡಿಒ ತಯಾರಿಸಿದ ಕೋವಿಡ್ ಔಷಧ ಸೋಮವಾರದಿಂದ ಬಳಕೆಗೆ ಲಭ್ಯ
Linkup
ಹೊಸದಿಲ್ಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ () ಅಭಿವೃದ್ಧಿಪಡಿಸಿರುವ ನಿಗ್ರಹ ಔಷಧವನ್ನು ಸೋಮವಾರ ಬಿಡುಗಡೆ ಮಾಡಲಾಗುವುದು. ರಾಜಧಾನಿ ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸುಮಾರು 10 ಸಾವಿರ ಡೋಸ್‌ಗಳನ್ನು ವಿವಿಧ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಿದ್ದಾರೆ. 2-ಡಿಯೊಕ್ಸಿ-ಡಿ-ಗ್ಲುಕೋಸ್ ಅಥವಾ 2-ಡಿಜಿ ಎಂದು ಕರೆಯಲಾಗುವ ಔಷಧವನ್ನು ಹೈದರಾಬಾದ್ ಮೂಲದ ಔಷಧ ದಿಗ್ಗಜ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಜತೆಗೂಡಿ ಡಿಆರ್‌ಡಿಒ ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಔಷಧವನ್ನು ತುರ್ತು ಬಳಕೆಗಾಗಿ ದೇಶದ ಪ್ರಮುಖ ಔಷಧ ನಿಯಂತ್ರಕ ಸಂಸ್ಥೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿತ್ತು. 2-ಡಿಜಿ ತನ್ನ 2 ಮತ್ತು 3ನೇ ಹಂತಗಳ ಕ್ಲಿನಿಕಲ್ ಪ್ರಯೋಗಗಳಲ್ಲಿ ವಿಶ್ವಾಸಾರ್ಹ ಫಲಿತಾಂಶವನ್ನು ನೀಡಿತ್ತು. ಕಳೆದ ಮೇ ಹಾಗೂ ಅಕ್ಟೋಬರ್ ತಿಂಗಳ ನಡುವೆ ನಡೆದ 2ನೇ ಹಂತದ ಪ್ರಯೋಗದಲ್ಲಿ ರೋಗಿಗಳಿಗೆ ಈ ಔಷಧ ಸುರಕ್ಷಿತವಾಗಿದೆ ಎನ್ನುವುದು ದೃಢಪಟ್ಟಿತ್ತು. ರೋಗಿಗಳ ಆಸ್ಪತ್ರೆ ವಾಸವನ್ನು ತಗ್ಗಿಸುವುದರಲ್ಲಿ ಮತ್ತು ಹೆಚ್ಚುವರಿ ಆಕ್ಸಿಜನ್ ಅವಲಂಬನೆ ತಗ್ಗಿಸುವುದರಲ್ಲಿ ಪರಿಣಾಮಕಾರಿ ಎನ್ನುವುದು ಕೂಡ ಸಾಬೀತಾಗಿತ್ತು. ಔಷಧದಲ್ಲಿನ ಹುಸಿ ಗ್ಲುಕೋಸ್ ಅಣುವಿನ ಮಾದರಿಯು ವೈರಸ್‌ ತನ್ನ ಪಥದಲ್ಲಿ ಸಾಗುವುದನ್ನು ತಡೆಯುತ್ತದೆ ಎಂದು ಪರಿಣತರು ಹೇಳಿದ್ದಾರೆ. ಈ ಔಷಧವು ಪೌಡರ್ ರೂಪದಲ್ಲಿದ್ದು, ನೀರಿನೊಂದಿಗೆ ತೆಗೆದುಕೊಳ್ಳಬಹುದಾಗಿದೆ. ಕೋವಿಡ್ ಚಿಕಿತ್ಸೆಗೆಂದೇ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿರುವ ಜಗತ್ತಿನ ಕೆಲವೇ ಔಷಧಗಳಲ್ಲಿ 2-ಡಿಜಿ ಒಂದು. ಆದರೆ ಇದರಿಂದ ಕೋವಿಡ್ ಗುಣಮುಖವಾಗುವುದು ಖಚಿತವಾಗಿಲ್ಲ. ರೆಮ್‌ಡೆಸಿವಿರ್, ಐವರ್ಮೆಕ್ಟಿನ್, ಪ್ಲಾಸ್ಮಾ ಥೆರಪಿ, ಕೆಲವು ಸ್ಟೀರಾಯ್ಡ್‌ಗಳನ್ನು ಕೋವಿಡ್ ಚಿಕಿತ್ಸೆಗೆ ಪ್ರಯೋಗಾತ್ಮಕವಾಗಿ ಬಳಸಿಕೊಳ್ಳಲಾಗುತ್ತಿದೆ.