ವೈಯಕ್ತಿಕ ಬಳಕೆಯ ಆಕ್ಸಿಜನ್‌ ಟ್ಯಾಂಕ್‌ ಆಮದಿಗೆ ಅನುಮತಿ ನೀಡಿದ ಕೇಂದ್ರ!

ಸರಕಾರ ವಿದೇಶ ವ್ಯಾಪಾರ ನೀತಿಯನ್ನು ಪರಿಷ್ಕರಿಸಿದ್ದು, ವೈಯಕ್ತಿಕ ಬಳಕೆಗೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. 2021ರ ಜುಲೈ 31ರ ತನಕ ಮಾತ್ರ ಈ ವಿಶೇಷ ಅನುಮತಿ.

ವೈಯಕ್ತಿಕ ಬಳಕೆಯ ಆಕ್ಸಿಜನ್‌ ಟ್ಯಾಂಕ್‌ ಆಮದಿಗೆ ಅನುಮತಿ ನೀಡಿದ ಕೇಂದ್ರ!
Linkup
ಹೊಸದಿಲ್ಲಿ: ಸರಕಾರ ವಿದೇಶ ವ್ಯಾಪಾರ ನೀತಿಯನ್ನು ಪರಿಷ್ಕರಿಸಿದ್ದು, ವೈಯಕ್ತಿಕ ಬಳಕೆಗೆ ಕಾನ್ಸಂಟ್ರೇಟರ್‌ಗಳನ್ನು ಮಾಡಿಕೊಳ್ಳಲು ಅನುಮತಿ ನೀಡಿದೆ. ಕೋವಿಡ್‌-19 ಕೇಸ್‌ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೂಗೊಳ್ಳಲಾಗಿದ್ದು, ಗಿಫ್ಟ್‌ ವಿಭಾಗದ ಅಡಿಯಲ್ಲಿ ವೈಯಕ್ತಿಕ ಬಳಕೆಯ ಆಕ್ಸಿಜನ್‌ ಆಮದು ಮಾಡಿಕೊಳ್ಳಬಹುದು. 2021ರ ಜುಲೈ 31ರ ತನಕ ಮಾತ್ರ ಈ ಅನುಮತಿ ಸಿಗಲಿದೆ ಎಂದು ವಿದೇಶ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ. ಏನಿದು ಆಕ್ಸಿಜನ್‌ ಕಾನ್ಸಂಟ್ರೇಟರ್‌? ಆಕ್ಸಿಜನ್‌ ಕಾನ್ಸಂಟ್ರೇಟರ್‌ ವೈದ್ಯಕೀಯ ಸಾಧನವಾಗಿದ್ದು, ಗಾಳಿಯಿಂದಲೇ ಆಕ್ಸಿಜನ್‌ ಹೀರಿಕೊಂಡು, ಆಮ್ಲಜನಕದ ಕೊರತೆಯಿಂದ ಬಳಲುತ್ತಿರುವ ರೋಗಿಗಳಿಗೆ ಕೊಡಬಹುದು. ಕೇಂದ್ರ ಸರಕಾರ ರಾಜ್ಯಗಳಿಗೆ ವಿತರಿಸಲು 1 ಲಕ್ಷ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಖರೀದಿಸುವುದಾಗಿ ತಿಳಿಸಿದೆ. ಯಾರಿಗೆ ಸೂಕ್ತ? ಆಕ್ಸಿಜನ್‌ ಮಟ್ಟ 85ರ ತನಕ ಇಳಿಕೆಯಾಗಿದ್ದರೆ ಮನೆಯಲ್ಲಿಯೇ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಬಳಸಬಹುದು. ಆದರೆ 80-85ರ ಮಟ್ಟಕ್ಕಿಂತಲೂ ಕೆಳಕ್ಕಿಳಿದರೆ, ಹೆಚ್ಚು ಆಕ್ಸಿಜನ್‌ ನೀಡುವ ಸಿಲಿಂಡರ್‌ ಅಥವಾ ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಬೇಕಾಗಬಹುದು. ಕೊರೊನಾ ಎರಡನೇ ಅಲೆಯಿಂದ ದೇಶದಲ್ಲಿ ಉಂಟಾಗಿರುವ ಆಮ್ಲಜನಕದ ಕೊರತೆಯನ್ನು ನಿವಾರಿಸಲು ಭಾರತೀಯ ವಾಯುಸೇನೆ ಕಟಿಬದ್ಧವಾಗಿ ಶ್ರಮಿಸುತ್ತಿದೆ. ಬೇರೆ ದೇಶಗಳಿಂದ ಆಕ್ಸಿಜನ್‌ ಟ್ಯಾಂಕರ್‌ಗಳನ್ನು ಐಎಎಫ್‌ ಸಿ-17 ಏರ್‌ಕ್ರಾಫ್ಟ್‌ ಮೂಲಕ ತರಿಸಲಾಗುತ್ತಿದೆ.