'ವಿಕ್ಟರಿ 2' ಖ್ಯಾತಿಯ ನಟಿ ಅಪೂರ್ವ ಈಗ ನಿರ್ದೇಶಕಿ; ಮೊದಲ ಚಿತ್ರಕ್ಕೆ ಭಾರಿ ಸಿಕ್ತು ಮನ್ನಣೆ

ನಟಿ ಅಪೂರ್ವ ಈಗ ನಿರ್ದೇಶಕಿಯಾಗಿದ್ದಾರೆ. ರವಿಚಂದ್ರನ್‌ ನಟಿಸಿ, ನಿರ್ದೇಶಿಸಿದ್ದ 'ಅಪೂರ್ವ' ಸಿನಿಮಾದಿಂದ ನಾಯಕಿಯಾಗಿದ್ದ ಅಪೂರ್ವ, ಈಗ 'ಓ ನನ್ನ ಚೇತನ' ಸಿನಿಮಾದಿಂದ ಡೈರೆಕ್ಟರ್ ಆಗಿ ಬಡ್ತಿ ಪಡೆದುಕೊಂಡಿದ್ದಾರೆ.

'ವಿಕ್ಟರಿ 2' ಖ್ಯಾತಿಯ ನಟಿ ಅಪೂರ್ವ ಈಗ ನಿರ್ದೇಶಕಿ; ಮೊದಲ ಚಿತ್ರಕ್ಕೆ ಭಾರಿ ಸಿಕ್ತು ಮನ್ನಣೆ
Linkup
'ಕ್ರೇಜಿ ಸ್ಟಾರ್' ರವಿಚಂದ್ರನ್‌ ನಟಿಸಿ, ನಿರ್ದೇಶಿಸಿದ್ದ ಸಿನಿಮಾ 'ಅಪೂರ್ವ'. ಆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು ನಟಿ . ಆ ಹೆಸರಿನಿಂದಲೇ ಅವರು ಫೇಮಸ್ ಆದರು. ಆನಂತರ ಅವರು 'ವಿಕ್ಟರಿ 2', 'ಕೃಷ್ಣ ಟಾಕೀಸ್' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ಇದೀಗ ಅವರು ನಿರ್ದೇಶಕಿಯಾಗಿದ್ದಾರೆ. '' ಚಿತ್ರದ ಮೂಲಕ ಅವರು ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಅವರ ನಿರ್ದೇಶನದ ಮೊದಲ ಸಿನಿಮಾಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಬೆಂಗಳೂರು ಫಿಲ್ಮ್‌ಫೆಸ್ಟ್‌ನಲ್ಲಿ 'ಓ ನನ್ನ ಚೇತನ'ಅಪೂರ್ವ ನಿರ್ದೇಶನ ಮಾಡಿರುವ 'ಓ ನನ್ನ ಚೇತನ' ಸಿನಿಮಾದ ಇಂದಿನಿಂದ (ಮಾ.4) ಆರಂಭಗೊಂಡಿರುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಕನ್ನಡ ಸಿನಿಮಾ ಕಾಂಪಿಟೇಷನ್‌ ವಿಭಾಗದಲ್ಲಿ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಇಂದಿನ ಮಕ್ಕಳ ಕುರಿತ ಕಥೆಯನ್ನು ಈ ಸಿನಿಮಾ ಹೊಂದಿದೆ. ಸ್ಯಾಂಡಲ್‌ವುಡ್‌ನಲ್ಲಿ ಮಹಿಳಾ ನಿರ್ದೇಶಕರ ಸಂಖ್ಯೆ ತುಂಬ ವಿರಳ. ಇದೀಗ ಕನ್ನಡ ಚಿತ್ರರಂಗದ ನಿರ್ದೇಶಕಿಯರ ಸಾಲಿಗೆ ಮತ್ತೋರ್ವ ಯುವ ನಿರ್ದೇಶಕಿಯಾಗಿ ಅಪೂರ್ವ ಸೇರ್ಪಡೆಗೊಂಡಿದ್ದಾರೆ. 'ಓ ನನ್ನ ಚೇತನ' ಸಿನಿಮಾದ ಕಥೆ ಏನು?ಅಪೂರ್ವ ನಿರ್ದೇಶನ ಮಾಡಿರುವ 'ಓ ನನ್ನ ಚೇತನ' ಸಿನಿಮಾಗೆ 'ಸ್ಮಾರ್ಟ್ ಫೋನ್ ಜೀವನ' ಎಂದು ಟ್ಯಾಗ್ ಲೈನ್ ಇಡಲಾಗಿದೆ. ಇಂದಿನ ಮಕ್ಕಳು ಸ್ಮಾರ್ಟ್ ಫೋನ್‌ಗೆ ಸಾಕಷ್ಟು ಅಡಿಕ್ಟ್ ಆಗಿರುತ್ತಾರೆ. ಇಂದಿನ ಮಕ್ಕಳು ಮತ್ತು ಸ್ಮಾರ್ಟ್ ಫೋನ್ ಇಟ್ಟುಕೊಂಡು ಈ ಸಿನಿಮಾವನ್ನು ಅಪೂರ್ವ ನಿರ್ದೇಶನ ಮಾಡಿದ್ದಾರೆ. ಎಲ್ಲಾ ಬಗೆಯ ರಂಜನೀಯ ಅಂಶಗಳೊಂದಿಗೆ ಕರ್ಮಷಿಯಲ್ ಚೌಕಟ್ಟಿನಲ್ಲೇ ಮಾಡಲಾಗಿದೆ. ಚೊಚ್ಚಲ ನಿರ್ದೆಶನದ ಚಿತ್ರಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸದಲ್ಲಿ ಮನ್ನಣೆ ಸಿಕ್ಕರುವುದಕ್ಕೆ ಅಪೂರ್ವಗೆ ತುಂಬ ಖುಷಿಯಾಗಿದೆ. ಮಾರ್ಚ್‌ 9ರಂದು ಒರಾಯನ್‌ ಮಾಲ್‌ನಲ್ಲಿ ಮಧ್ಯಾಹ್ನ 3.15ಕ್ಕೆ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಇದೀಗ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ಸದ್ಯದಲ್ಲೇ ಟ್ರೈಲರ್ ನ ರಿಲೀಸ್ ಮಾಡಲಿದೆ. ಹರಿ ಸಂತು ಕಥೆ-ಚಿತ್ರಕಥೆಈಚೆಗಷ್ಟೇ 'ಬೈ ಟು ಲವ್' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಹರಿ ಸಂತು 'ಓ ನನ್ನ ಚೇತನ' ಸಿನಿಮಾಗೆ ಕಥೆ, ಚಿತ್ರಕಥೆ, ಸಾಹಿತ್ಯ ಬರೆದಿದ್ದಾರೆ. ಛಾಯಾಗ್ರಹಣವನ್ನು ಗುರುಪ್ರಶಾಂತ್ ರೈ ಮಾಡಿದ್ದರೆ, ಪ್ರದೀಪ್ ವರ್ಮಾ ಅವರ ಸಂಗೀತ ನಿರ್ದೇಶನವಿದೆ. ಸಂಕಲನದ ಹೊಣೆ ಕೆ.ಎಂ. ಪ್ರಕಾಶ್ ಅವರದ್ದು. ಎಸ್ & ಎಸ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ದೀಪಕ್, ಸಾಯಿ ಅಶೋಕ್, ಹರೀಶ್, ಪ್ರಶಾಂತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 'ಓ ನನ್ನ ಚೇತನ' ಸಿನಿಮಾದಲ್ಲಿ ಮಾಸ್ಟರ್ ಪ್ರತೀಕ್, ಬೇಬಿ ಡಿಂಪನಾ, ಮಾಸ್ಟರ್ ಶೌರ್ಯ, ಮಾಸ್ಟರ್ ಹರ್ಷ ನಟಿಸಿದ್ದಾರೆ.