ರಾಹುಲ್ ಗಾಂಧಿಯಿಂದ ನೀತಿ ಉಲ್ಲಂಘನೆ: ದಿಲ್ಲಿ ಹೈಕೋರ್ಟ್‌ಗೆ ಟ್ವಿಟ್ಟರ್ ಮಾಹಿತಿ

ದಿಲ್ಲಿ ಅತ್ಯಾಚಾರ ಸಂತ್ರಸ್ತ ಬಾಲಕಿಯ ಪೋಷಕರ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ ಅವರು ತನ್ನ ನೀತಿಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ದಿಲ್ಲಿ ಹೈಕೋರ್ಟ್‌ಗೆ ಟ್ವಿಟ್ಟರ್ ತಿಳಿಸಿದೆ.

ರಾಹುಲ್ ಗಾಂಧಿಯಿಂದ ನೀತಿ ಉಲ್ಲಂಘನೆ: ದಿಲ್ಲಿ ಹೈಕೋರ್ಟ್‌ಗೆ ಟ್ವಿಟ್ಟರ್ ಮಾಹಿತಿ
Linkup
ಹೊಸದಿಲ್ಲಿ: ಸಂತ್ರಸ್ತೆಯ ಪೋಷಕರ ಚಿತ್ರ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕ ಅವರು ತನ್ನ ನೀತಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ. ದಿಲ್ಲಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಬಾಲಕಿಯ ಮನೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಆಕೆಯ ಪೋಷಕರಿಗೆ ಸಾಂತ್ವಾನ ಹೇಳಿದ್ದರು. 'ನ್ಯಾಯ ಸಿಗುವವರೆಗೂ ಬಾಲಕಿಯ ಕುಟುಂಬದವರ ಜತೆಗೆ ಇರುತ್ತೇನೆ' ಎಂದು ಧೈರ್ಯ ಹೇಳಿದ್ದರು. ಕಾರಿನೊಳಗೆ ಕುಳಿತು ಬಾಲಕಿಯ ತಂದೆ ತಾಯಿಗೆ ಸಮಾಧಾನ ಹೇಳುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಅತ್ಯಾಚಾರ ಸಂತ್ರಸ್ತೆಯ ಪೋಷಕರ ಚಿತ್ರವನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸುವುದು ಕಾನೂನಿನ ಉಲ್ಲಂಘನೆ. ಇದು ಬಾಲಕಿಯ ಗುರುತನ್ನು ಬಹಿರಂಗಪಡಿಸಲು ಕಾರಣವಾಗಲಿದೆ ಎಂದು ಮಕ್ಕಳ ಹಕ್ಕಗಳ ರಾಷ್ಟ್ರೀಯ ರಕ್ಷಣಾ ಆಯೋಗವು ಆರೋಪಿಸಿತ್ತು. ಈ ಟ್ವೀಟ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅದು ಟ್ವಿಟ್ಟರ್ ಮತ್ತು ದಿಲ್ಲಿ ಪೊಲೀಸರಿಗೆ ಪತ್ರ ಬರೆದಿತ್ತು. ಇದರಂತೆ ಕ್ರಮ ಕೈಗೊಂಡಿದ್ದ ಟ್ವಿಟ್ಟರ್, ರಾಹುಲ್ ಗಾಂಧಿ ಪ್ರಕಟಿಸಿದ್ದ ಪೋಸ್ಟ್ ಅನ್ನು ಅಳಿಸಿ ಹಾಕಿತ್ತು. ಅತ್ಯಾಚಾರ ಸಂತ್ರಸ್ತ ಬಾಲಕಿಯ ಗುರುತನ್ನು ಬಹಿರಂಗಪಡಿಸಿದ್ದ ರಾಹುಲ್ ಗಾಂಧಿ ಮೇಲೆ ಕ್ರಮ ತೆಗೆದುಕೊಳ್ಳಲು ಮಕ್ಕಳ ಆಯೋಗ ಮತ್ತು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ದಿಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ರಾಹುಲ್ ಗಾಂಧಿ ಅವರ ಟ್ವೀಟ್ ತನ್ನ ನೀತಿಯನ್ನು ಉಲ್ಲಂಘಿಸಿದೆ ಎಂದು ಈ ಅರ್ಜಿ ವಿಚಾರಣೆ ವೇಳೆ ಟ್ವಿಟ್ಟರ್ ತಿಳಿಸಿದೆ.