ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ ತೆಗೆದುಕೊಳ್ಳಿ: ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

ದೇಶದಾದ್ಯಂತ ಸಾಮಾನ್ಯವಾಗಿ ಅನ್ವಯವಾಗುವಂತೆ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ದಿಲ್ಲಿ ಹೈಕೋರ್ಟ್ ಮನವಿ ಮಾಡಿದೆ.

ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ ತೆಗೆದುಕೊಳ್ಳಿ: ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
Linkup
ಹೊಸದಿಲ್ಲಿ: ಜಾರಿಗೆ ತರುವ ಅಗತ್ಯವನ್ನು ಪ್ರತಿಪಾದಿಸಿದೆ. 'ಸಂವಿಧಾನದ 44ನೇ ವಿಧಿಯಲ್ಲಿ ವ್ಯಕ್ತಪಡಿಸಿರುವಂತೆ ತನ್ನ ನಾಗರಿಕರನ್ನು ಸಮಾನ ನಾಗರಿಕ ಸಂಹಿತೆ ಮೂಲಕ ರಕ್ಷಿಸುವ ಅವಕಾಶವು ಕೇವಲ ಭರವಸೆಯಾಗಿಯೇ ಉಳಿಯಬಾರದು' ಎಂದು ಅದು ಹೇಳಿದೆ. ದೇಶದಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಅನ್ವಯಿಸುವ ಸಂಹಿತೆಯ ಅಗತ್ಯವಿದೆ ಎಂದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್, ಈ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಪರಸ್ಪರ ಬೇರ್ಪಟ್ಟಿರುವ ದಂಪತಿಯ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಇಂದಿನ ಆಧುನಿಕ ಭಾರತೀಯ ಸಮಾಜವು ಕ್ರಮೇಣವಾಗಿ ಏಕರೂಪವಾಗುತ್ತಿದೆ. ಧರ್ಮ, ಸಮುದಾಯ ಮತ್ತು ಜಾತಿಯ ಸಾಂಪ್ರದಾಯಿಕ ಬೇಲಿಗಳು ನಿಧಾನವಾಗಿ ಮರೆಯಾಗುತ್ತಿವೆ' ಎಂದು ಅವರು ಹೇಳಿದ್ದಾರೆ. 'ಮದುವೆ ಹಾಗೂ ವಿಚ್ಚೇದನಕ್ಕೆ ಸಂಬಂಧಿಸಿದಂತಹ ವಿಚಾರಗಳಲ್ಲಿ ವಿವಿಧ ವೈಯಕ್ತಿಕ ಕಾನೂನುಗಳಲ್ಲಿನ ಸಂಘರ್ಷ ಮತ್ತು ವಿರೋಧಾಭಾಸಗಳಿಂದಾಗಿ ನಾಗರಿಕರು ಒದ್ದಾಡುವಂತಾಗಬಾರದು. ವೈಯಕ್ತಿಕ ವಿಚಾರ ಬಂದಾಗ ನ್ಯಾಯಾಲಯಗಳು ನಿರಂತರವಾಗಿ ಸಂಘರ್ಷಕ್ಕೆ ಎದುರಾಗುತ್ತವೆ. ವಿವಿಧ ಸಮುದಾಯಗಳು, ಜಾತಿಗಳು ಹಾಗೂ ಧರ್ಮಗಳಿಗೆ ಸೇರಿದ, ವೈವಾಹಿಕ ಬಾಂಧವ್ಯಕ್ಕೆ ಒಳಪಟ್ಟ ಜನರು ಅಂತಹ ಸಂಘರ್ಷಗಳಿಂದ ಹೆಣಗಾಡುತ್ತಾರೆ' ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ. 'ಮದುವೆ, ವಿಚ್ಚೇದನ, ಉತ್ತರಾಧಿಕಾರ ಮುಂತಾದ ವಿವಿಧ ಅಂಶಗಳಲ್ಲಿ ಸಮಾನ ನೀತಿಗಳು ಅನ್ವಯಿಸಬೇಕು. ಇದರಿಂದ ತತ್ವಗಳು, ಸುರಕ್ಷತೆಗಳು ಮತ್ತು ಪ್ರಕ್ರಿಯೆಗಳನ್ನು ಅಳವಡಿಸಬಹುದು ಎಂದು ಸುಪ್ರೀಂಕೋರ್ಟ್ ಪದೇ ಪದೇ ಪ್ರತಿಪಾದಿಸಿದೆ' ಎಂದು ಶಾ ಬಾನೊ ತೀರ್ಪನ್ನು ಉಲ್ಲೇಖಿಸಿ ಹೈಕೋರ್ಟ್ ಹೇಳಿದೆ. ಈ ನಿರ್ಧಾರಗಳನ್ನು 1985ರಲ್ಲಿ ತೆಗೆದುಕೊಳ್ಳಲಾಗಿತ್ತು. 35 ವರ್ಷಕ್ಕೂ ಹೆಚ್ಚು ಸಮಯ ಕಳೆದರೂ ಅದು ಜಾರಿಯಾಗಿಲ್ಲ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. 'ಈ ಸಂಬಂಧ ಇದುವರೆಗೂ ಯಾವ ಕ್ರಮಗಳನ್ನೆಲ್ಲ ತೆಗೆದುಕೊಳ್ಳಲಾಗಿದೆ ಎಂದು ಅಸ್ಪಷ್ಟವಾಗಿದೆ' ಎಂದ ಹೈಕೋರ್ಟ್, ತನ್ನ ಆದೇಶವನ್ನು ಅಗತ್ಯ ಕ್ರಮ ತೆಗೆದುಕೊಳ್ಳುವ ಸಲುವಾಗಿ ಕಾನೂನು ಮತ್ತು ನ್ಯಾಯ ಸಚಿವಾಲಯ, ಕಾರ್ಯದರ್ಶಿಗೆ ತಲುಪಬೇಕು ಎಂದು ಸೂಚಿಸಿದೆ.