ರಾಜಧಾನಿ ದಿಲ್ಲಿಯಲ್ಲಿ ಕೋವಿಡ್ ಮತ್ತಷ್ಟು ಏರಿಕೆ: ಆರು ತಿಂಗಳಲ್ಲೇ ಅತ್ಯಧಿಕ ಪ್ರಕರಣ ದಾಖಲು

ದಿಲ್ಲಿಯಲ್ಲಿ ಮಂಗಳವಾರ 5,481 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಆರು ಮಂದಿ ವೈರಸ್‌ನಿಂದ ಮರಣ ಹೊಂದಿದ್ದಾರೆ. 2020ರ ಮೇ ತಿಂಗಳ ಬಳಿಕ ದಿಲ್ಲಿಯಲ್ಲಿ ಅತ್ಯಧಿಕ ಪಾಸಿಟಿವಿಟಿ ದರ ದಾಖಲಾಗಿದೆ.

ರಾಜಧಾನಿ ದಿಲ್ಲಿಯಲ್ಲಿ ಕೋವಿಡ್ ಮತ್ತಷ್ಟು ಏರಿಕೆ: ಆರು ತಿಂಗಳಲ್ಲೇ ಅತ್ಯಧಿಕ ಪ್ರಕರಣ ದಾಖಲು
Linkup
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮಂಗಳವಾರ 5,481 ಹೊಸ ಪ್ರಕರಣಗಳು ದಾಖಲಾಗಿವೆ. ಇದು ದೈನಂದಿನ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದ್ದು, ಕಳೆದ ಆರು ತಿಂಗಳಲ್ಲಿಯೇ ಅತ್ಯಧಿಕ ಸಂಖ್ಯೆಯಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಕೋವಿಡ್ ವರದಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ಮೂವರು ಸೋಂಕಿತರು ವೈರಸ್‌ಗೆ ಬಲಿಯಾಗಿದ್ದಾರೆ. ಇದರಿಂದ ಒಟ್ಟಾರೆ ಮರಣ ಪ್ರಮಾಣ 25,113ಕ್ಕೆ ತಲುಪಿದೆ. ಮಂಗಳವಾರದ ಭಾರಿ ಏರಿಕೆಯೊಂದಿಗೆ ದಿಲ್ಲಿಯ ಒಟ್ಟು ಪಾಸಿಟಿವಿಟಿ ದರ ಶೇ 8.37 ರಷ್ಟಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಶೇ 8.42ರಷ್ಟು ಪಾಸಿಟಿವಿಟಿ ದರ ದಾಖಲಾಗಿದ್ದು, ಈವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು. ದಿಲ್ಲಿಯಲ್ಲಿ ಪ್ರಸ್ತುತ 14,889 ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಕೋವಿಡ್ ಪ್ರಕರಣಗಳು 14,63,701ಕ್ಕೆ ಮುಟ್ಟಿದೆ. ಮರಣ ಪ್ರಮಾಣ ಶೇ 1.72ರಷ್ಟು ಇದೆ ಎಂದು ಸರ್ಕಾರದ ದಾಖಲೆಗಳು ತಿಳಿಸಿವೆ. 531 ರೋಗಿಗಳು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇವರಲ್ಲಿ 14 ಮಂದಿ ವೆಂಟಿಲೇಟರ್ ನೆರವು ಪಡೆದಿದ್ದಾರೆ. ಇನ್ನು ಮಧ್ಯಮ ಪ್ರಮಾಣದ ರೋಗ ಲಕ್ಷಣಗಳನ್ನು ಹೊಂದಿರುವ 168 ಮಂದಿ ಆಕ್ಸಿಜನ್ ನೆರವಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 308 ರೋಗಿಗಳಲ್ಲಿ ರೋಗ ಲಕ್ಷಣವಿಲ್ಲ ಅಥವಾ ಲಘು ಲಕ್ಷಣಗಳನ್ನು ಹೊಂದಿದ್ದಾರೆ. ಕಳೆದ ಎರಡು ವಾರಗಳಿಂದ ದಿಲ್ಲಿಯಲ್ಲಿ ಕೋವಿಡ್ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಅದರಲ್ಲಿ ಬಹುಪಾಲು, ಶೇ 81ಕ್ಕಿಂತ ಅಧಿಕ ತಳಿಯ ಕೇಸ್‌ಗಳೇ ಇವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಕೂಡ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಅದರ ಬೆನ್ನಲ್ಲೇ ದಿಲ್ಲಿ ಸರ್ಕಾರ ಮತ್ತಷ್ಟು ಕೋವಿಡ್ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದೆ. ವಾರಾಂತ್ಯದ ಕರ್ಫ್ಯೂ ಜಾರಿಗೆ ತರಲಾಗಿದೆ. ಅಗತ್ಯ ಸೇವೆ ಹೊರತು ಪಡಿಸಿ ಉಳಿದ ಎಲ್ಲಾ ಸರ್ಕಾರಿ ನೌಕರರಿಗೆ ವರ್ಕ್‌ ಫ್ರಂ ಹೋಮ್‌ ಮಂಜೂರು ಮಾಡಲಾಗಿದೆ. ಖಾಸಗಿ ಕಂಪನಿಗಳು ಶೇ 50 ರಷ್ಟು ಸಾಮರ್ಥ್ಯದೊಂದಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಮುಂಜಾನೆ 5 ಗಂಟೆ ವರೆಗೆ ನೈಟ್‌ ಕರ್ಫ್ಯೂ ಇರಲಿದ್ದು, ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ನಿರ್ಬಂಧ ಇಲ್ಲ. ದಿಲ್ಲಿಯಲ್ಲಿ ಸೋಮವಾರ 4,099 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಶೇ 6.46ರಷ್ಟು ಪಾಸಿಟಿವಿಟಿ ದರ ದಾಖಲಾಗಿತ್ತು. 1509 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದು, ಒಬ್ಬರು ಮೃತಪಟ್ಟಿದ್ದರು. 6,288 ಕೋವಿಡ್ ರೋಗಿಗಳು ಮತ್ತು ಶಂಕಿತ ಕೋವಿಡ್ 19 ಪ್ರಕರಣಗಳನ್ನು ಹೋಮ್ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಒಂದೇ ದಿನ ಸುಮಾರು ಶೇ ಎರಡರಷ್ಟು ಪಾಸಿಟಿವಿಟಿ ದರ ಹೆಚ್ಚಳವಾಗಿದೆ.