ಎಲೆಕ್ಟ್ರಾನಿಕ್‌ ವಾಹನಗಳ ಮಾರುಕಟ್ಟೆಯಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ನಂ.1

2021ರ ಜುಲೈ 19ರ ತನಕ ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ನೋಂದಣಿಯಾಗಿರುವ ಒಟ್ಟು ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ 5.20 ಲಕ್ಷ. ಇದರಲ್ಲಿ 26,209 ಇವಿಗಳು ಕರ್ನಾಟಕದಲ್ಲಿವೆ. ಬೆಂಗಳೂರಿನಲ್ಲಿ 9,591 ಎಲೆಕ್ಟ್ರಿಕ್‌ ವಾಹನಗಳಿವೆ.

ಎಲೆಕ್ಟ್ರಾನಿಕ್‌ ವಾಹನಗಳ ಮಾರುಕಟ್ಟೆಯಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ನಂ.1
Linkup
: ಭಾರತದ ಎಲೆಕ್ಟ್ರಾನಿಕ್‌ ವಾಹನಗಳ ಮಾರುಕಟ್ಟೆಯಲ್ಲಿ ಶೇ.21.9ರಷ್ಟು ಪಾಲು ಕರ್ನಾಟಕದಲ್ಲಿದೆ..! ವಿದ್ಯುತ್‌ ಚಾಲಿತ ವಾಹನಗಳನ್ನು (ಇವಿ) ಉತ್ತೇಜಿಸುವ ನಿಟ್ಟಿನಲ್ಲಿ ಫಾಸ್ಟರ್‌ ಅಡಾಪ್ಷನ್‌ ಆ್ಯಂಡ್‌ ಮಾನ್ಯುಫಾಕ್ಷರಿಂಗ್‌ ಆಫ್‌ ಹೈಬ್ರಿಡ್‌ ಆ್ಯಂಡ್‌ ಎಲೆಕ್ಟ್ರಿಕ್‌ ವೆಹಿಕಲ್ಸ್‌ (ಎಫ್‌ಎಎಂಇ) ನೀತಿಯ ಎರಡನೇ ಹಂತದಲ್ಲಿ 2021ರ ಜುಲೈ 20ರ ತನಕ 87,659 ಎಲೆಕ್ಟ್ರಿಕ್‌ ವಾಹನಗಳ ಮಾರಾಟಕ್ಕೆ ಹಣಕಾಸು ನೆರವು ನೀಡಲಾಗಿದೆ. ಈ ಪೈಕಿ 19,270 ವಾಹನಗಳು ಒಂದರಲ್ಲೇ ಮಾರಾಟವಾಗಿದ್ದು, ದೇಶದ ಎಲೆಕ್ಟ್ರಿಕ್‌ ವಾಹನಗಳ ಪ್ರಮುಖ ತಾಣವಾಗಿ ಹೊರಹೊಮ್ಮಿದೆ. ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು, 13,515 ಇವಿಗಳು ಮಾರಾಟವಾಗಿವೆ. ಮಹಾರಾಷ್ಟ್ರದಲ್ಲಿ 9,393 ಇವಿಗಳು ಮಾರಾಟವಾಗಿವೆ. ಕೇಂದ್ರ ಸರಕಾರವು ಈ ಎಫ್‌ಎಎಂಇ ಯೋಜನೆಗೆ 10,000 ಕೋಟಿ ರೂ. ನೆರವು ನೀಡಿದ್ದು, ಇದರ ಅವಧಿ ಮೂರು ವರ್ಷ. 2019ರ ಏಪ್ರಿಲ್‌ 1ರಿಂದ ಜಾರಿಯಾಗಿದೆ. 7,000 ಇ-ಬಸ್‌, 5 ಲಕ್ಷ ಇ-ತ್ರಿಚಕ್ರ ವಾಹನ, 55,000 ಇ-ನಾಲ್ಕು ಚಕ್ರಗಳ ವಾಹನ, 10 ಲಕ್ಷ ಇ-ದ್ವಿಚಕ್ರ ವಾಹನಗಳಿಗೆ ಬೇಡಿಕೆ ಸೃಷ್ಟಿಸುವುದು ಇದರ ಗುರಿ. ಚಾರ್ಜಿಂಗ್‌ ಸ್ಟೇಶನ್‌ಗಳ ಕೊರತೆ: ಹೀಗಿದ್ದರೂ ಕರ್ನಾಟಕದಲ್ಲಿ ಚಾರ್ಜಿಂಗ್‌ ಸ್ಟೇಶನ್‌ಗಳ ತೀವ್ರ ಕೊರತೆ ಇದೆ. ಇದುವರೆಗೆ ಭಾರಿ ಕೈಗಾರಿಕೆ ಇಲಾಖೆಯು 2,877 ಎಲೆಕ್ಟ್ರಿಕ್‌ ವೆಹಿಕಲ್‌ ಚಾರ್ಜಿಂಗ್‌ ಸ್ಟೇಶನ್‌ಗಳನ್ನು 500 ಕೋಟಿ ರೂ. ವೆಚ್ಚದಲ್ಲಿ 25 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 68 ನಗರಗಳಿಗೆ ಮಂಜೂರು ಮಾಡಿದೆ. ಈ ಪೈಕಿ 350 ಚಾರ್ಜಿಂಗ್‌ ಸ್ಟೇಶನ್‌ಗಳು ಅಸ್ತಿತ್ವಕ್ಕೆ ಬಂದಿದ್ದು, ಕರ್ನಾಟಕದಲ್ಲಿ ಕೇವಲ 45 ಮಾತ್ರ ಇದೆ. ಅದೂ ಬಹುತೇಕ ಬೆಂಗಳೂರಿಗೆ ಸೀಮಿತ. ದಿಲ್ಲಿಯಲ್ಲಿ 94 ಇದೆ. ಹೆದ್ದಾರಿಗಳಲ್ಲಿ 77 ಇದ್ದರೂ ಬೆಂಗಳೂರಿಗೆ ಅವುಗಳ ಸಂಪರ್ಕ ಇಲ್ಲ. ದಿಲ್ಲಿ- ಚಂಡಿಗಢ ಮಾರ್ಗದಲ್ಲಿ 24, ಮುಂಬಯಿ - ಪುಣೆ ಹೈವೇಯಲ್ಲಿ 15, ದಿಲ್ಲಿ-ಜೈಪುರ-ಆಗ್ರಾ ಹೆದ್ದಾರಿಯಲ್ಲಿ 29 ಮತ್ತು ಜೈಪುರ-ದಿಲ್ಲಿ ವ್ಯಾಪ್ತಿಯಲ್ಲಿ 9 ಚಾರ್ಜಿಂಗ್‌ ಸ್ಟೇಶನ್‌ಗಳು ಇವೆ. ಬೆಂಗಳೂರು ಮತ್ತು ಇತರ ಕಡೆಗಳನ್ನು ಸಂಪರ್ಕಿಸುವ ಹೆದ್ದಾರಿ ಬದಿಗಳಲ್ಲಿ ಚಾರ್ಜಿಂಗ್‌ ಸ್ಟೇಶನ್‌ಗಳನ್ನು ಸ್ಥಾಪಿಸಬೇಕಾಗಿದೆ. ಭಾರಿ ಕೈಗಾರಿಕೆ ಮತ್ತು ಹೆದ್ದಾರಿ ಇಲಾಖೆಯ ಸಹಾಯಕ ಸಚಿವ ಕೃಶನ್‌ ಪಾಲ್‌ ಗುರ್ಜಾರ್‌ ಅವರು ಲೋಕಸಭೆಯಲ್ಲಿ ನೀಡಿರುವ ಇ-ವಾಹನ್‌ ಪೋರ್ಟಲ್‌ನ ಮಾಹಿತಿಯ ಪ್ರಕಾರ, 2021ರ ಜುಲೈ 19ರ ತನಕ ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ನೋಂದಣಿಯಾಗಿರುವ ಒಟ್ಟು ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ 5.20 ಲಕ್ಷ. ಇದರಲ್ಲಿ 26,209 ಇವಿಗಳು ಕರ್ನಾಟಕದಲ್ಲಿವೆ. ಬೆಂಗಳೂರಿನಲ್ಲಿ 9,591 ಎಲೆಕ್ಟ್ರಿಕ್‌ ವಾಹನಗಳಿವೆ.