ಯಾಸ್ ಚಂಡಮಾರುತದ ಭೀತಿ: 20 ಲಕ್ಷ ಜನರು ಸ್ಥಳಾಂತರ, ಕಚೇರಿಯಲ್ಲಿಯೇ ರಾತ್ರಿ ಕಳೆಯಲಿರುವ ಮಮತಾ

ಯಾಸ್ ಚಂಡಮಾರುತವು ಬಂಗಾಳ ಕೊಲ್ಲಿಯಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿಗಳಿಗೆ ಬುಧವಾರ ಅಪ್ಪಳಿಸಲಿದ್ದು, ಈವರೆಗೂ 20 ಲಕ್ಷ ಜನರನ್ನು ಸ್ಥಳಾಂತರ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.

ಯಾಸ್ ಚಂಡಮಾರುತದ ಭೀತಿ: 20 ಲಕ್ಷ ಜನರು ಸ್ಥಳಾಂತರ, ಕಚೇರಿಯಲ್ಲಿಯೇ ರಾತ್ರಿ ಕಳೆಯಲಿರುವ ಮಮತಾ
Linkup
ಕೋಲ್ಕತಾ: ಭಾರತದ ಪೂರ್ವ ಕರಾವಳಿ ಭಾಗದತ್ತ ಮಂಗಳವಾರ ಶಕ್ತಿಶಾಲಿ ಸಾಗಿದೆ. ಒಂದೇ ವಾರದ ಅಂತರದಲ್ಲಿ ಎರಡನೆಯ ಭೀಕರ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿರುವುದರಿಂದ ಸುಮಾರು 20 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಬಂಗಾಳ ಕೊಲ್ಲಿಯಲ್ಲಿನ ಸೈಕ್ಲೋನ್ ಯಾಸ್, ಬುಧವಾರ ಮಧ್ಯಾಹ್ನದ ವೇಳೆಗೆ ಮತ್ತು ಒಡಿಶಾಕ್ಕೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಗಂಟೆಗೆ ಸುಮಾರು 165 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಹವಾಮಾನ ಬದಲಾವಣೆಯಿಂದ ಸಮುದ್ರದ ನೀರು ಬೆಚ್ಚಗಾಗುತ್ತಿರುವುದು ಒತ್ತಡ ಹೆಚ್ಚಲು ಮತ್ತು ಅಂತಹ ಬಿರುಗಾಳಿಯನ್ನು ತೀವ್ರಗೊಳ್ಳಲು ಕಾರಣವಾಗುತ್ತಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಪಶ್ಚಿಮ ಬಂಗಾಳದ ಪೂರ್ವ ಕರಾವಳಿಯಲ್ಲಿ ವಾಸಿಸುವ ಸುಮಾರು 20 ಲಕ್ಷ ಜನರನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈ ಚಂಡಮಾರುತವು ದೇಶದ ಕೋವಿಡ್ ವಿರುದ್ಧದ ಹೋರಾಟಕ್ಕೆ ಅಪಾರ ಅಡ್ಡಿಯುಂಟುಮಾಡಿದೆ. ಒಡಿಶಾದಲ್ಲಿಯೂ ಯಾಸ್ ಚಂಡಮಾರುತದ ಅಬ್ಬರ ತೀವ್ರವಾಗಿರಲಿದೆ ಎನ್ನಲಾಗಿದೆ. ಕೇಂದ್ರಪರ, ಭದ್ರಕ್, ಜಗತ್ಸಿಂಗ್‌ಪುರ ಮತ್ತು ಬಾಲಸೋರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ವಿಪರೀತ, ಗಾಳಿ ದರ್ಶನವಾಗಲಿದ್ದು, ಅಪಾರ ಹಾನಿಯ ಭೀತಿ ಎದುರಾಗಿದೆ. ಜತೆಗೆ ಗಂಟೆಗೆ 15-160 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಇಡೀ ದಿನ ಕಚೇರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಭಾರಿ ಹಾನಿ ಮಾಡುವ ಆತಂಕ ಉಂಟಾಗಿದೆ. ತಾವು ಇಡೀ ರಾತ್ರಿ ರಾಜ್ಯ ಕಾರ್ಯಾಲಯದಲ್ಲಿ ಕಳೆಯಲಿದ್ದು, ಸೈಕ್ಲೋನ್ ಯಾಸ್‌ಗೆ ಸಂಬಂಧಿಸಿದ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಚಂಡಮಾರುತದಿಂದ ಉಂಟಾಗಲಿರುವ ಹಾನಿಯನ್ನು ಸರಿಪಡಿಸಲು 54,000 ಅಧಿಕಾರಿಗಳು ಮತ್ತು ಪರಿಹಾರ ಕೆಲಸಗಾರರು, ಎರಡು ಲಕ್ಷ ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್ ಎಫ್) ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.