'ಮಾಲ್ಡೀವ್ಸ್-ಭಾರತದ್ದು ಶತಮಾನಗಳ ದೋಸ್ತಿ' ಎಂದು ಮಾಲ್ಡೀವ್ಸ್ ಅಧ್ಯಕ್ಷರ ಅಚ್ಚರಿ ಸಂದೇಶ

ಇಂಡಿಯಾ ಔಟ್ ಎಂಬ ಭಾರತ ವಿರೋಧಿ ಪ್ರಚಾರದ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Maldives President Mohamed Muizzu) 'ಮಾಲ್ಡೀವ್ಸ್-ಭಾರತದ್ದು ಶತಮಾನಗಳ ದೋಸ್ತಿ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನವದೆಹಲಿ: ಇಂಡಿಯಾ ಔಟ್ ಎಂಬ ಭಾರತ ವಿರೋಧಿ ಪ್ರಚಾರದ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Maldives President Mohamed Muizzu) 'ಮಾಲ್ಡೀವ್ಸ್-ಭಾರತದ್ದು ಶತಮಾನಗಳ ದೋಸ್ತಿ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಭಾರತದ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಮೊಹಮ್ಮದ್ ಮುಯಿಜ್ಜು ಅವರು ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತ್ಯೇಕ ಸಂದೇಶಗಳಲ್ಲಿ, ಅಧ್ಯಕ್ಷ ಮುಯಿಝು ಅವರು ಭಾರತದ 75 ನೇ ಗಣರಾಜ್ಯೋತ್ಸವವನ್ನು ಸ್ಮರಿಸಿದ್ದಾರೆ ಮತ್ತು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. Warmest greetings and sincere good wishes to Minister of External Affairs @DrSJaishankar and the friendly people of India, on the joyous occasion of the 75th Republic Day of India. I am confident that the close bonds of friendship and cooperation between Maldives and India will continue… — Moosa Zameer (@MoosaZameer) January 26, 2024 ಇದನ್ನೂ ಓದಿ: 'ಏರ್ ಲಿಫ್ಟ್ ಗೆ ಭಾರತದ ವಿಮಾನ ಬೇಡ': ಮಾಲ್ಡೀವ್ಸ್ ಅಧ್ಯಕ್ಷರ ಹಠಮಾರಿತನಕ್ಕೆ 14 ವರ್ಷದ ಬಾಲಕ ಬಲಿ ಭಾರತದ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶುಭಾಶಯ ಕೋರಿರುವ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು, ಮಾಲ್ಡೀವ್ಸ್ ಮತ್ತು ಭಾರತದ್ದು ಶತಮಾನಗಳ ಸ್ನೇಹ (Centuries of Friendship) ಎಂದು ಹೇಳಿದ್ದು, ಪರಸ್ಪರ ಗೌರವ ಮತ್ತು ರಕ್ತಸಂಬಂಧದ ಆಳವಾದ ಅರ್ಥದಲ್ಲಿ ಸ್ಥಾಪಿಸಲಾದ ಎರಡು ರಾಷ್ಟ್ರಗಳ ನಡುವಿನ ಶತಮಾನಗಳ ಹಳೆಯ ಸ್ನೇಹ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂತೆಯೇ ಮುಂಬರುವ ವರ್ಷಗಳಲ್ಲಿ ಭಾರತ ಸರ್ಕಾರ ಮತ್ತು ಜನರಿಗೆ ನಿರಂತರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ದೊರೆಯಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಾರ್ಚ್ 15 ರೊಳಗೆ ಭಾರತೀಯ ಸೇನೆ ವಾಪಸ್ ಗೆ ಮಾಲ್ಡೀವ್ಸ್ ಅಧ್ಯಕ್ಷರ ಕೋರಿಕೆ! ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ, ಇದೊಂದು ಅತ್ಯುತ್ತಮ ಪ್ರವಾಸಿತಾಣವಾಗಲಿದೆ ಎಂದು ಹೇಳಿದ್ದರು. ಈ ಹೇಳಿಕೆ ಕುರಿತು ಮಾಲ್ಡೀವ್ಸ್ ಕೆಲವು ಸಚಿವರು ಮೋದಿ ಅವರು ವಿರುದ್ಧ ನಿಂದನಾತ್ಮಕ ಭಾಷೆ ಬಳಸಿ ಟೀಕಿಸಿದ್ದರು. ಇದರಿಂದಾಗಿ ಮಾಲ್ಡೀವ್ಸ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ ಈ ಶತಮಾನದ ದೋಸ್ತಿ ಎಂಬ ಹೇಳಿಕೆ ಮಹತ್ವದ ಪಡೆದುಕೊಂಡಿದೆ.

'ಮಾಲ್ಡೀವ್ಸ್-ಭಾರತದ್ದು ಶತಮಾನಗಳ ದೋಸ್ತಿ' ಎಂದು ಮಾಲ್ಡೀವ್ಸ್ ಅಧ್ಯಕ್ಷರ ಅಚ್ಚರಿ ಸಂದೇಶ
Linkup
ಇಂಡಿಯಾ ಔಟ್ ಎಂಬ ಭಾರತ ವಿರೋಧಿ ಪ್ರಚಾರದ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Maldives President Mohamed Muizzu) 'ಮಾಲ್ಡೀವ್ಸ್-ಭಾರತದ್ದು ಶತಮಾನಗಳ ದೋಸ್ತಿ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನವದೆಹಲಿ: ಇಂಡಿಯಾ ಔಟ್ ಎಂಬ ಭಾರತ ವಿರೋಧಿ ಪ್ರಚಾರದ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Maldives President Mohamed Muizzu) 'ಮಾಲ್ಡೀವ್ಸ್-ಭಾರತದ್ದು ಶತಮಾನಗಳ ದೋಸ್ತಿ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಭಾರತದ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಮೊಹಮ್ಮದ್ ಮುಯಿಜ್ಜು ಅವರು ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತ್ಯೇಕ ಸಂದೇಶಗಳಲ್ಲಿ, ಅಧ್ಯಕ್ಷ ಮುಯಿಝು ಅವರು ಭಾರತದ 75 ನೇ ಗಣರಾಜ್ಯೋತ್ಸವವನ್ನು ಸ್ಮರಿಸಿದ್ದಾರೆ ಮತ್ತು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: 'ಏರ್ ಲಿಫ್ಟ್ ಗೆ ಭಾರತದ ವಿಮಾನ ಬೇಡ': ಮಾಲ್ಡೀವ್ಸ್ ಅಧ್ಯಕ್ಷರ ಹಠಮಾರಿತನಕ್ಕೆ 14 ವರ್ಷದ ಬಾಲಕ ಬಲಿ ಭಾರತದ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶುಭಾಶಯ ಕೋರಿರುವ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು, ಮಾಲ್ಡೀವ್ಸ್ ಮತ್ತು ಭಾರತದ್ದು ಶತಮಾನಗಳ ಸ್ನೇಹ (Centuries of Friendship) ಎಂದು ಹೇಳಿದ್ದು, ಪರಸ್ಪರ ಗೌರವ ಮತ್ತು ರಕ್ತಸಂಬಂಧದ ಆಳವಾದ ಅರ್ಥದಲ್ಲಿ ಸ್ಥಾಪಿಸಲಾದ ಎರಡು ರಾಷ್ಟ್ರಗಳ ನಡುವಿನ ಶತಮಾನಗಳ ಹಳೆಯ ಸ್ನೇಹ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂತೆಯೇ ಮುಂಬರುವ ವರ್ಷಗಳಲ್ಲಿ ಭಾರತ ಸರ್ಕಾರ ಮತ್ತು ಜನರಿಗೆ ನಿರಂತರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ದೊರೆಯಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಾರ್ಚ್ 15 ರೊಳಗೆ ಭಾರತೀಯ ಸೇನೆ ವಾಪಸ್ ಗೆ ಮಾಲ್ಡೀವ್ಸ್ ಅಧ್ಯಕ್ಷರ ಕೋರಿಕೆ! ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ, ಇದೊಂದು ಅತ್ಯುತ್ತಮ ಪ್ರವಾಸಿತಾಣವಾಗಲಿದೆ ಎಂದು ಹೇಳಿದ್ದರು. ಈ ಹೇಳಿಕೆ ಕುರಿತು ಮಾಲ್ಡೀವ್ಸ್ ಕೆಲವು ಸಚಿವರು ಮೋದಿ ಅವರು ವಿರುದ್ಧ ನಿಂದನಾತ್ಮಕ ಭಾಷೆ ಬಳಸಿ ಟೀಕಿಸಿದ್ದರು. ಇದರಿಂದಾಗಿ ಮಾಲ್ಡೀವ್ಸ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ ಈ ಶತಮಾನದ ದೋಸ್ತಿ ಎಂಬ ಹೇಳಿಕೆ ಮಹತ್ವದ ಪಡೆದುಕೊಂಡಿದೆ. 'ಮಾಲ್ಡೀವ್ಸ್-ಭಾರತದ್ದು ಶತಮಾನಗಳ ದೋಸ್ತಿ' ಎಂದು ಮಾಲ್ಡೀವ್ಸ್ ಅಧ್ಯಕ್ಷರ ಅಚ್ಚರಿ ಸಂದೇಶ