ಭವಿಷ್ಯದಲ್ಲಿ ಬಿಜೆಪಿ ನಾಯಕರ ಪಾಡೇನು? ಮನೀಶ್ ಬಂಧನಕ್ಕೆ ಸಿಬಿಐ ಅಧಿಕಾರಿಗಳಿಗೂ ವಿರೋಧವಿತ್ತು: ಯಾರೆಲ್ಲ ಏನಂತಿದ್ದಾರೆ?

ಹೊಸದಿಲ್ಲಿ: ದಿಲ್ಲಿ ಪೊಲೀಸರು ಭಾನುವಾರದಿಂದ ಆಮ್‌ ಆದ್ಮಿ ಪಾರ್ಟಿಯ ಶೇಕಡ 80ರಷ್ಟು ಮುಖಂಡರನ್ನು ಬಂಧಿಸಿರುವುದಾಗಿ ಎಎಪಿ ಆರೋಪಿಸಿದೆ. ಅದರ ಬೆನ್ನಲ್ಲೇ ಅಬಕಾರಿ ನೀತಿ ಜಾರಿ ಪ್ರಕರಣದಲ್ಲಿ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಐದು ದಿನಗಳ ವರೆಗೂ ಸಿಬಿಐ ವಶಕ್ಕೆ ನೀಡಲಾಗಿದೆ. ದಿಲ್ಲಿಯ ರೋಸ್‌ ಅವೆನ್ಯೂ ಕೋರ್ಟ್‌ ಸೋಮವಾರ ಸಿಸೋಡಿಯಾ ಅವರನ್ನು ಮಾರ್ಚ್‌ 4ರವರೆಗೂ ಸಿಬಿಐ ಕಸ್ಟಡಿಗೆ ನೀಡಿದೆ. ಭಾನುವಾರ ಮನೀಶ್‌ ಸಿಸೋಡಿಯಾ ಅವರನ್ನು ವಿಚಾರಣೆಗೆ ಕರೆದಿದ್ದ ಸಿಬಿಐ ರಾತ್ರಿ ವೇಳೆಗೆ ಅವರನ್ನು ಬಂಧಿಸಿತ್ತು. ಸಿಬಿಐ ಕಚೇರಿಯ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ಎಎಪಿಯ ಸಂಸದ ಸಂಜಯ್‌ ಸಿಂಗ್‌ ಹಾಗೂ ಸಚಿವ ಗೋಪಾಲ್‌ ರಾಯ್‌ ಸೇರಿದಂತೆ ಸುಮಾರು 50 ಜನರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಸೋಮವಾರ ಅವರನ್ನು ಬಿಡುಗಡೆ ಮಾಡಲಾಯಿತು.''ಹತ್ತಾರು ಗಂಟೆಗಳ ಕಾಲ ಬಂಧನದಲ್ಲಿಡುವುದು ಕಾನೂನು ಬಾಹಿರವಾದ ಕ್ರಮವಾಗಿದೆ. ಪೊಲೀಸರನ್ನು ಕೇಳಿದರೆ, ನಾವು ಬಂಧಿಸಿಲ್ಲ, ವಶಕ್ಕೆ ಪಡೆದಿರುವುದಾಗಿ ಹೇಳುತ್ತಾರೆ. ಆದರೆ, ದೊಡ್ಡ ನಾಯಕರನ್ನು 24 ಗಂಟೆಗಳು ವಶಕ್ಕೆ ಪಡೆಯಬಹುದೇ? ಕಾನೂನಿನಲ್ಲಿ ಅಂಥ ಅವಕಾಶವಿಲ್ಲ. ಅವರನ್ನು ಕೋರ್ಟ್‌ಗೆ ಹಾಜರುಪಡಿಸಬೇಕಿತ್ತು. ಇದು ತುರ್ತು ಪರಿಸ್ಥಿತಿಯ ಸೂಚನೆಯಾಗಿದೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ 1975ರಲ್ಲಿ ಮಾಡಿದ್ದಂತೆ ಈಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡುತ್ತಿದೆ'' ಎಂದು ಎಎಪಿ ರಾಷ್ಟ್ರೀಯ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದರು.

Linkup