ಮೂರನೇ ಅಲೆಗೆ ಈಗಲೇ ಸಿದ್ಧತೆ ಮಾಡಿ, ಮಕ್ಕಳಿಗೆ ಬೇಗ ಲಸಿಕೆ ಹಾಕಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

ದೇಶದಲ್ಲಿ ಮೂರನೇ ಅಲೆ ಕೋವಿಡ್ ಬರಲಿದ್ದು, ಇದರಿಂದ ಮಕ್ಕಳಿಗೆ ಹಾನಿಯಾಗಲಿದೆ ಎಂಬ ತಜ್ಞರ ಹೇಳಿಕೆಯನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್, ಮಕ್ಕಳಿಗೆ ಮೊದಲು ಲಸಿಕೆ ನೀಡುವ ಹಾಗೂ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಂಡು ಸಿದ್ಧತೆ ನಡೆಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಮೂರನೇ ಅಲೆಗೆ ಈಗಲೇ ಸಿದ್ಧತೆ ಮಾಡಿ, ಮಕ್ಕಳಿಗೆ ಬೇಗ ಲಸಿಕೆ ಹಾಕಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ
Linkup
ಹೊಸದಿಲ್ಲಿ: ದೇಶದಲ್ಲಿ ದೇಶಕ್ಕೆ ಅಪ್ಪಳಿಸಲಿದೆ ಮತ್ತು ಈ ಬಾರಿ ಚಿಕ್ಕಮಕ್ಕಳಿಗೂ ಸೋಂಕಿನ ಪರಿಣಾಮ ಉಂಟಾಗಲಿದೆ ಎಂದು ಪರಿಣತರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ, ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ಲಸಿಕೆ ನೀಡುವುದು ಸೇರಿದಂತೆ ಮೂರನೇ ಅಲೆ ಎದುರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಗುರುವಾರ ಸೂಚನೆ ನೀಡಿದೆ. 'ಪರಿಣತರ ಪ್ರಕಾರ ಮೂರನೇ ಅಲೆ ಶೀಘ್ರದಲ್ಲಿಯೇ ಬರಲಿದೆ ಮತ್ತು ಅದು ಮಕ್ಕಳಿಗೂ ಹಾನಿಯುಂಟುಮಾಡಲಿದೆ. ಹೀಗಾಗಿ ಮಗು ಆಸ್ಪತ್ರೆಗೆ ಹೋದಾಗ ತಾಯಿ ಮತ್ತು ತಂದೆ ಕೂಡ ಹೋಗಬೇಕಾಗುತ್ತದೆ. ಹೀಗಾಗಿ ಈ ವಯಸ್ಸಿನವರಿಗೆ ಬೇಗನೆ ಲಸಿಕೆ ನೀಡುವುದನ್ನು ಮುಗಿಸಬೇಕು. ನಾವು ವೈಜ್ಞಾನಿಕ ಮಾರ್ಗದಲ್ಲಿ ಆಲೋಚನೆ ನಡೆಸಿ ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು' ಎಂದು ಕೋರ್ಟ್ ಹೇಳಿದೆ. ನಾವು ಇಂದೇ ತಯಾರಿ ಆರಂಭಿಸಿದರೆ ಅದನ್ನು ಎದುರಿಸಲು ಸಮರ್ಥವಾಗಬಹುದು ಎಂದು ಅಭಿಪ್ರಾಯಪಟ್ಟಿತು. ಎಂಬಿಬಿಎಸ್ ಪೂರ್ಣಗೊಳಿಸಿದ ಮತ್ತು ಪಿಜಿ ಕೋರ್ಸ್‌ಗಳ ಪ್ರವೇಶಕ್ಕೆ ಕಾಯುತ್ತಿರುವ ವೈದ್ಯರ ಸೇವೆಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಬೇಕು. ಅವರ ಸೇವೆಯು ಮೂರನೇ ಅಲೆಯಲ್ಲಿ ನಿರ್ಣಾಯಕವಾಗಬಹುದು ಎಂದು ಕೇಂದ್ರ ಸರ್ಕಾರವನ್ನು ಕೋರ್ಟ್ ಕೋರಿತು. 'ಇಂದು ನಾವು ವೈದ್ಯಕೀಯ ಕೋರ್ಸ್ ಮುಗಿಸಿ ನೀಟ್ ಪರೀಕ್ಷೆಗೆ ಕಾಯುತ್ತಿರುವ 1.5 ಲಕ್ಷ ವೈದ್ಯರನ್ನು ಹೊಂದಿದ್ದೇವೆ. ಅವರನ್ನು ಏನು ಮಾಡುತ್ತೀರಿ? 1.5 ಲಕ್ಷ ವೈದ್ಯರು ಮತ್ತು 2.5 ಲಕ್ಷ ನರ್ಸ್‌ಗಳು ಮನೆಯಲ್ಲಿ ಕುಳಿತಿದ್ದಾರೆ. ಮೂರನೇ ಅಲೆಯ ವೇಳೆಗೆ ಅವರು ನಿರ್ಣಾಯಕರಾಗುತ್ತಾರೆ' ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. ಸುಪ್ರೀಂಕೋರ್ಟ್ ಆದೇಶದಂತೆ ದೆಹಲಿಗೆ 700 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸುವ ದೆಹಲಿ ಹೈಕೋರ್ಟ್ ನಡೆಯ ವಿರುದ್ಧ ಕೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಈ ಹೇಳಿಕೆ ನೀಡಿದೆ. ಸುಪ್ರೀಂಕೋರ್ಟ್ ಸೂಚನೆಯಂತೆ ಕೇಂದ್ರ ಸರ್ಕಾರವು ದೆಹಲಿಗೆ ಆಕ್ಸಿಜನ್ ಪೂರೈಸುವ ವಿವರವಾದ ಯೋಜನೆಯನ್ನು ಗುರುವಾರ ಸಲ್ಲಿಸಿತು.