ಭಾರತದ 35 ನಗರಗಳಲ್ಲಿ ಒಟ್ಟು 8 ಸಾವಿರ ನೇರ ನೇಮಕಾತಿಗೆ ಅಮೆಜಾನ್ ನಿರ್ಧಾರ..!

2025ರ ವೇಳೆ ನೇರ ಅಥವಾ ಪರೋಕ್ಷವಾಗಿ ಭಾರತದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ ಮಾಡೋದು ಅಮೆಜಾನ್ ಸಂಸ್ಥೆಯ ಗುರಿ ಎಂದು ಹೇಳಿದ್ದು, ಈಗಾಗಲೇ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡಿರೋದಾಗಿ ಸಂಸ್ಥೆ ಹೇಳಿಕೊಂಡಿದೆ.

ಭಾರತದ 35 ನಗರಗಳಲ್ಲಿ ಒಟ್ಟು 8 ಸಾವಿರ ನೇರ ನೇಮಕಾತಿಗೆ ಅಮೆಜಾನ್ ನಿರ್ಧಾರ..!
Linkup
: ಅಮೆರಿಕ ಮೂಲಕ ರೀಟೇಲ್ ದೈತ್ಯ ಅಮೇಜಾನ್ ಸಂಸ್ಥೆಯು ಭಾರತದಲ್ಲಿ 8 ಸಾವಿರ ಹೊಸ ಸೃಷ್ಟಿಗೆ ಮುಂದಾಗಿದೆ. ದೇಶಾದ್ಯಂತ 35 ನಗರಗಳಲ್ಲಿ ಒಟ್ಟು 8 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳೋದಾಗಿ ಸಂಸ್ಥೆ ಪ್ರಕಟಿಸಿದೆ. ಕಾರ್ಪೊರೇಟ್, ತಂತ್ರಜ್ಞಾನ ಹಾಗೂ ಗ್ರಾಹಕ ಸೇವಾ ವಿಭಾಗ ಸೇರಿದಂತೆ ಹಲವು ವಿಭಾಗಗಳಲ್ಲಿ ನಡೆಯಲಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಗುರುಗಾಂವ್, ಮುಂಬೈ, ಕೋಲ್ಕತ್ತಾ, ನೋಯ್ಡಾ, ಅಮೃತಸರ, ಅಹಮದಾಬಾದ್, ಭೋಪಾಲ್, ಕೊಯಮತ್ತೂರು, ಜೈಪು, ಕಾನ್ಪುರ, ಲೂಧಿಯಾನಾ, ಪುಣೆ ಹಾಗೂ ಸೂರತ್ ನಗರ ಸೇರಿದಂತೆ ದೇಶದ ಒಟ್ಟು 35 ನಗರಗಳಲ್ಲಿ ಒಟ್ಟು 8 ಸಾವಿರ ಮಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳಲಿದ್ದೇವೆ ಎಂದು ಅಮೇಜಾನ್ ಸಂಸ್ಥೆಯ ಎಚ್‌ ಆರ್ ಮುಖ್ಯಸ್ಥೆ ದೀಪ್ತಿ ವರ್ಮಾ ತಿಳಿಸಿದ್ದಾರೆ. ಯಾಂತ್ರಿಕ ಕಲಿಕೆ ಹಾಗೂ ಅನ್ವಯಿಕ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಉದ್ಯೋಗಾಕಾಂಕ್ಷಿಗಳನ್ನು ಅಮೇಜಾನ್ ಸಂಸ್ಥೆಯ ಎಚ್‌ ಆರ್, ಹಣಕಾಸು ಹಾಗೂ ಕಾನೂನು ವಿಭಾಗ ಸೇರಿದಂತೆ ಹಲವು ವಿಭಾಗಗಳಿಗೆ ನೇಮಕ ಮಾಡಿಕೊಳ್ಳೋದಾಗಿ ವರ್ಮಾ ತಿಳಿಸಿದ್ದಾರೆ. 2025ರ ವೇಳೆ ನೇರ ಅಥವಾ ಪರೋಕ್ಷವಾಗಿ ಭಾರತದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ ಮಾಡೋದು ಸಂಸ್ಥೆಯ ಗುರಿ ಎಂದು ವರ್ಮಾ ಹೇಳಿದ್ದು. ಈಗಾಗಲೇ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡಿರೋದಾಗಿ ಸಂಸ್ಥೆ ಹೇಳಿಕೊಂಡಿದೆ. ಕೊರೊನಾ ಸಾಂಕ್ರಾಮಿಕದ ಅಬ್ಬರದಲ್ಲೂ ವರ್ಚ್ಯುಯಲ್ ಆಗಿ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಿದ್ದು, ನೇರ ಹಾಗೂ ಪರೋಕ್ಷವಾಗಿ 3 ಲಕ್ಷ ಮಂದಿ ಉದ್ಯೋಗ ಗಿಟ್ಟಿಸಿದ್ದಾರೆ ಎಂದು ಅಮೇಜಾನ್ ಸಂಸ್ಥೆ ತಿಳಿಸಿದೆ. ಸೆಪ್ಟೆಂಬರ್ 16ರಂದು ಅಮೇಜಾನ್ ಸಂಸ್ಥೆ ಮೊಟ್ಟ ಮೊದಲ ಬಾರಿಗೆ ಔದ್ಯೋಗಿಕ ದಿನ ಆಚರಿಸಲಿದ್ದು, ಭಾರತದಲ್ಲಿ ತನ್ನ ಬೆಳವಣಿಗೆಯ ಹಾದಿಯನ್ನು ಬಿಚ್ಚಿಡಲಿದೆ. ವರ್ಚ್ಯುಯಲ್ ಆಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಮೆಜಾನ್ ಸಂಸ್ಥೆಯ ನಾಯಕತ್ವ, ನೌಕರರು, ಷೇರುಗಳು ಸೇರಿದಂತೆ ಹಲವು ವಿಚಾರಗಳ ಕುರಿತಾಗಿ ಸಂಸ್ಥೆಯನ್ನು ಬಿಂಬಿಸಿಕೊಳ್ಳಿದೆ. ಅಮೆಜಾನ್ ಸಂಸ್ಥೆಯ ಬೆಳವಣಿಗೆಯ ಮಟ್ಟಿಗೆ ಹೇಳೋದಾದ್ರೆ, ಭಾರತವು ಅಮೆಜಾನ್ ಸಂಸ್ಥೆಯ 2ನೇ ಅತಿದೊಡ್ಡ ತಾಂತ್ರಿಕ ಮಾರುಕಟ್ಟೆ ಹಾಗೂ ಅಭಿವೃದ್ಧಿಯ ತಾಣವಾಗಿದೆ. ಕೊರೊನಾ ಸಾಂಕ್ರಾಮಿಕದ ವೇಳೆ ಬಹುತೇಕ ಜನರು ಮನೆಯಲ್ಲೇ ಉಳಿದಿದ್ದ ಕಾರಣ, ಮನೆಗೆ ವಸ್ತುಗಳನ್ನು ತರಿಸಿಕೊಳ್ಳುವ ಮೂಲಕ ಸಂಸ್ಥೆಯ ವಹಿವಾಟು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಇದಕ್ಕಾಗಿ ಸಂಸ್ಥೆ 5 ಲಕ್ಷ ಜನರನ್ನು ನೇಮಕ ಮಾಡಿಕೊಂಡಿತ್ತು. ಇದೀಗ ಅಮೆಜಾನ್ ಸಂಸ್ಥೆ ವಿಶ್ವಾದ್ಯಂತ 55 ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದು, ಅಮೆರಿಕವೊಂದರಲ್ಲೇ 40 ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲಿದೆ.