ಬೆಂಗಳೂರಿನಲ್ಲಿ ಮನೆಯಿಂದ ಮನೆಗೆ ಜಿಗಿಯುವಾಗ ಕೆಳಕ್ಕೆ ಬಿದ್ದು ಮನೆಗಳ್ಳ ಸ್ಥಳದಲ್ಲೇ ಸಾವು!

ಮನೆಗಳ್ಳನೊಬ್ಬ ಕಳ್ಳತನ ನಡೆಸುತ್ತಿರುವ ವೇಳೆ ಶೀಟ್‌ ಮನೆಯ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ವಿಲ್ಸನ್‌ ಗಾರ್ಡನ್‌ನ ನಾರಾಯಣಪುರದಲ್ಲಿ ನಡೆದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಮನೆಯಿಂದ ಮನೆಗೆ ಜಿಗಿಯುವಾಗ ಕೆಳಕ್ಕೆ ಬಿದ್ದು ಮನೆಗಳ್ಳ ಸ್ಥಳದಲ್ಲೇ ಸಾವು!
Linkup
: ಶೀಟ್‌ ಮನೆಯ ಮೇಲಿಂದ ವೃತ್ತಿಪರ ಮನೆಗಳ್ಳನೊಬ್ಬ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಲ್ಸನ್‌ ಗಾರ್ಡನ್‌ನ ನಾರಾಯಣಪುರದಲ್ಲಿ ನಡೆದಿದೆ. ವಿಲ್ಸನ್‌ ಗಾರ್ಡನ್‌ ನಿವಾಸಿ ಥಾಮಸ್‌(26) ಮೃತಪಟ್ಟ ಖದೀಮ. ಸಿದ್ದಾಪುರ, ಮಡಿವಾಳ ಕಮರ್ಷಿಯಲ್‌ ಸ್ಟ್ರೀಟ್‌, ಮೈಕೋ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆಗಳ್ಳತನ ಪ್ರಕರಣದಲ್ಲಿ ಈತ ಭಾಗಿಯಾಗಿ ಹಲವು ಬಾರಿ ಜೈಲು ಸೇರಿದ್ದ. ಆದರೆ, ಜೈಲಿನಿಂದ ಹೊರಬಂದ ಬಳಿಕ ಮತ್ತೆ ಮನೆ ಸೇರಿರಲಿಲ್ಲ. ಶನಿವಾರ ಬೆಳಗ್ಗೆ 9.30ರಲ್ಲಿ ವಿಲ್ಸನ್‌ ಗಾರ್ಡನ್‌ನ ನಾರಾಯಣಪುರದಲ್ಲಿರುವ ಮನೆಯೊಂದರ ಶೀಟ್‌ನ ಮೇಲೆ ಹತ್ತಿದ್ದ. ಇದನ್ನು ಕಂಡ ಮನೆಯ ಆಸು-ಪಾಸಿನಲ್ಲಿದ್ದ ಮಹಿಳೆಯರು, ಆತನಿಗೆ ಕೆಳಗೆ ಇಳಿಯಲು ಸೂಚಿಸಿದ್ದರು. ಆ ವೇಳೆ ಪಕ್ಕದಲ್ಲಿದ್ದ ಥಾಮಸ್‌ ಮತ್ತೊಂದು ಮನೆಯ ಮಹಡಿಗೆ ಜಿಗಿದಿದ್ದ. ಜಿಗಿಯುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಪೆಟ್ಟುಬಿದ್ದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಲ್ಸನ್‌ ಗಾರ್ಡನ್‌ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಥಾಮಸ್‌ ಏಕೆ ಮನೆಯ ಶೀಟ್‌ನ ಮೇಲೆ ಹತ್ತಿದ್ದ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕಾರ್ಟನ್‌ ಬಾಕ್ಸ್‌ ಅಂಗಡಿಯಲ್ಲಿಅಗ್ನಿ ಅವಘಡಬೆಂಗಳೂರು : ಕಾಟನ್‌ಪೇಟೆಯ ಸುಲ್ತಾನ್‌ಪೇಟೆ ವೃತ್ತದಲ್ಲಿ ಈಶ್ವರಿ ಕಾರ್ಟನ್‌ ಬಾಕ್ಸ್‌ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡು ಬಾಕ್ಸ್‌ಗಳು ಸಂಪೂರ್ಣವಾಗಿ ಸುಟ್ಟು ಪಕ್ಕದ ಹಣ್ಣಿನ ಅಂಗಡಿಗೂ ಬೆಂಕಿ ತಗಲಿದೆ.ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳಕ್ಕೆ ದೌಡಾಯಿಸಿದ್ದ ಕಾಟನ್‌ಪೇಟೆ ಪೊಲೀಸರು ತಿಳಿಸಿದರು. ಕಾಟನ್‌ಪೇಟೆಯ ಮೋಹನ್‌ರಾಜ್‌ ಎಂಬುವರ ಮಾಲೀಕತ್ವದ ಕಾಟನ್‌ಪೇಟೆಯ ಸುಲ್ತಾನ್‌ ಪೇಟೆ ವೃತ್ತದಲ್ಲಿರುವ ಈಶ್ವರಿ ಪೇಪರ್ಸ್ ಅಂಗಡಿ ಬೆಂಕಿಗಾಹುತಿಯಾಗಿದೆ. ಈಶ್ವರಿ ಕಾರ್ಟನ್‌ ಬಾಕ್ಸ್‌ ಅಂಗಡಿಯಲ್ಲಿಹಣ್ಣುಗಳು, ತರಕಾರಿಗಳು, ಇತರೆ ವಸ್ತುಗಳನ್ನು ತುಂಬಿಕೊಂಡು ಬರುವ ಕಾರ್ಟನ್‌ ಬಾಕ್ಸ್‌ (ಮರದ ಪೆಟ್ಟಿಗೆ)ಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಲಾಗಿತ್ತು. ಈ ಬಾಕ್ಸ್‌ಗಳ ಕೆಳಗೆ ಒಣಗಿದ ತೆಂಗಿನ ಕಾಯಿಯನ್ನು ನಾರಿನ ಸಮೇತ ಎರಡು ಚೀಲಗಳಲ್ಲಿ ತುಂಬಿಡಲಾಗಿತ್ತು. ಹೀಗಾಗಿ, ಬಾಕ್ಸ್‌ ಹಾಗೂ ತೆಂಗಿನಕಾಯಿಗೆ ಒಂದಕ್ಕೊಂದು ಹೊತ್ತಿಕೊಂಡ ಕಾವಿಗೆ ಬೆಂಕಿ ಹೊತ್ತಿಕೊಂಡಿದೆ. ಬಾಕ್ಸ್‌ಗಳಲ್ಲಿ ಪೇಪರ್‌ ಹಾಗೂ ಕಸವಿದ್ದ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಪಕ್ಕದಲ್ಲಿ ವಿದ್ಯುತ್‌ ಕಂಬವಿದ್ದರಿಂದ ಅದರಿಂದಲೂ ಶಾರ್ಟ್‌ ಸಕ್ರ್ಯೂಟ್‌ ಉಂಟಾಗಿದೆ. ಈ ಎಲ್ಲ ಬೆಂಕಿ ಪ್ರಮಾಣದಿಂದ ಅಷ್ಟೂ ಬಾಕ್ಸ್‌ ಸುಟ್ಟು ಕರಕಲಾಗಿವೆ. ಬೆಂಕಿಯ ತೀವ್ರತೆಗೆ ಪಕ್ಕದಲ್ಲಿದ್ದ ಕಾರ್ತಿಕ್‌ ಅವರ ಹಣ್ಣಿನ ಅಂಗಡಿಗೂ ಬೆಂಕಿ ತಗಲಿದ್ದು, ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದರು. ‘ಬೆಂಕಿ ಹೊತ್ತಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಎರಡು ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಸ್ಥಧಿಳಕ್ಕೆ ತೆರಳಿ ಬೆಂಕಿ ನಂದಿಸಿದವು. ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ. ಈ ಸಂಬಂಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ,’ ಎಂದು ಪೊಲೀಸರು ತಿಳಿಸಿದರು.