ಪಕ್ಷದ ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಮಂಗಳವಾರ ಕೆಂಚೇನಹಳ್ಳಿ ಕ್ರಾಸ್‌ನಿಂದ ಅರಬಿಂದೋ ಜಂಕ್ಷನ್ ಹಾಗೂ 46ನೇ ಅಡ್ಡ ರಸ್ತೆಯ 2ನೇ ಮುಖ್ಯ ರಸ್ತೆಯವರೆಗೆ ಸಾಗಲಿದೆ. ಪಾದಯಾತ್ರೆಯಲ್ಲಿಸಾವಿರಾರು ಮಂದಿ ಪಾಲ್ಗೊಳ್ಳುವುದರಿಂದ ಸಂಚಾರ ಪೊಲೀಸರು ವಾಹನ ಬದಲಿಸಿದ್ದಾರೆ.
ನಗರದ ಮೈಸೂರು ರಸ್ತೆಯಲ್ಲಿ ಪಾದಯಾತ್ರೆ ಸಾಗಿ ಬರುತ್ತಿರುವುದರಿಂದ ಸವಾರರು ತಮಗೆ ಅನುಕೂಲವಾಗುವ ಪರ್ಯಾಯ ಮಾರ್ಗ ಆಯ್ಕೆ ಮಾಡಿಕೊಳ್ಳಲು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಪಾದಯಾತ್ರೆ ಸಾಗುವ ಮಾರ್ಗಕೆಂಚೇನಹಳ್ಳಿ ಕ್ರಾಸ್, ಜೈರಾಂದಾಸ್ ರೈಲ್ವೆ ಗೇಟ್ ಜಂಕ್ಷನ್, ಜ್ಞಾನಭಾರತಿ ಜಂಕ್ಷನ್, ಆರ್.ಆರ್. ಆರ್ಚ್ ಜಂಕ್ಷನ್ ಮೂಲಕ ನಾಯಂಡಹಳ್ಳಿ ಜಂಕ್ಷನ್ ಬಳಿ ಬಲ ತಿರುವು ಪಡೆದು ದೇವೇಗೌಡ ವೃತ್ತ- ಪಿ.ಇ.ಎಸ್ ಕಾಲೇಜ್ ಜಂಕ್ಷನ್, ಇಟ್ಟಮಡು ಜಂಕ್ಷನ್-ಕತ್ರಿಗುಪ್ಪೆ ಜಂಕ್ಷನ್ ಬಳಿ ಕಾಮಾಕ್ಯ ಜಂಕ್ಷನ್ ಎಡತಿರುವು ಪಡೆಯಲಿದೆ.
ಬಳಿಕ ವಿದ್ಯಾಪೀಠ ಪಾರ್ಕ್ ಬಲ ತಿರುವು-ವೆಂಕಟಾದ್ರಿ ಕಲ್ಯಾಣ ಮಂಟಪ-ಬಲ ತಿರುವು ಪಡೆದು ರಿಂಗ್ ರಸ್ತೆ, ಚನ್ನಮ್ಮ ಜಂಕ್ಷನ್ ಮೂಲಕ ರಾಜಲಕ್ಷಿತ್ರ್ಮಜಂಕ್ಷನ್-ಅರಬಿಂದೋ ಜಂಕ್ಷನ್- 46ನೇ ಅಡ್ಡ ರಸ್ತೆ 2ನೇ ಮುಖ್ಯ ರಸ್ತೆಗೆ ಬರಲಿದೆ. (ಮಾರೇನಹಳ್ಳಿ ಜಂಕ್ಷನ್ ಹೊರತುಪಡಿಸಿ)ಜಯನಗರ 5ನೇ ಬ್ಲಾಕ್ ಮಾರೇನಹಳ್ಳಿ ಜಂಕ್ಷನ್, ರಾಗಿಗುಡ್ಡ ಜಂಕ್ಷನ್, ಜಯನಗರ 9ನೇ ಬ್ಲಾಕ್ 28ನೇ ಮುಖ್ಯ ರಸ್ತೆ ಜಂಕ್ಷನ್ ಮೂಲಕ ಈಸ್ಟ್ ಎಂಡ್ ಜಂಕ್ಷನ್ ಪ್ರವೇಶಿಸಿ ಜಯದೇವ ಜಂಕ್ಷನ್ - ಬಿಟಿಎಂ 16ನೇ ಮುಖ್ಯ ರಸ್ತೆ ಜಂಕ್ಷನ್ - ಬಿಟಿಎಂ 1ನೇ ಹಂತ 20ನೇ ಮುಖ್ಯ ರಸ್ತೆಗೆ ತಲುಪಲಿದೆ.
ಸಂಚಾರ ಮಾರ್ಗ ಬದಲಾವಣೆಯನ್ನು ಗಮನಿಸಿ!
ಮೈಸೂರು ಕಡೆಯಿಂದ ನಗರದ ಕಡೆಗೆ
* ನೈಸ್ ರಸ್ತೆ ಟೋಲ್ ಮುಖಾಂತರ ಬೆಂಗಳೂರು ಪ್ರವೇಶ, ನೈಸ್ ಆಫೀಸ್ ಕಡೆಯಿಂದ ಹೊಸಕೆರೆಹಳ್ಳಿ ಟೋಲ್ ಕಡೆಗೆ ಸಾಗುವುದು.
* ಸೋಂಪುರ ಟೋಲ್ ನಿರ್ಗಮನದ ಮುಖಾಂತರ ಉತ್ತರಹಳ್ಳಿ ಕಡೆಗೆ ಸಾಗುವುದು ಹಾಗೂ ಬೆಂಗಳೂರು ಕಡೆಗೂ ಸಾಗಬಹುದು.
* ರೈನ್-ಬೋ ಬ್ರಿಡ್ಜ್ ಕಡೆಯಿಂದ: ಹೊಯ್ಸಳ ಸರ್ಕಲ್ ಬಳಿ ಬಲ ತಿರುವು ಪಡೆದು ರೈಲ್ವೆ ಪ್ಯಾರಲಲ್ ಮುಖಾಂತರ ದುಬಾಸಿಪಾಳ್ಯ ( ಪ್ರವೇಶಿಸಬಹುದು)
ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ
* ನಾಯಂಡಹಳ್ಳಿ ಜಂಕ್ಷನ್‌ನಿಂದ ಎಡ ತಿರುವು ಪಡೆದು ನೈಸ್ ರಸ್ತೆ ಮುಖಾಂತರ ಕೆಂಗೇರಿಯ ಕೆಂಪಮ್ಮ ಟೋಲ್ ಮೂಧಿಲಕ ಸಾಗಿ ಮೈಸೂರು ರಸ್ತೆ ತಲುಪುವುದು.
* ಆರ್.ಆರ್.ಆರ್ಚ್ ಬಳಿ ಎಡ ತಿರುವು ಪಡೆದು ಆರ್.ಆರ್.ನಗರ ಮುಖ್ಯ ರಸ್ತೆ ಮುಖಾಂತರ ಉತ್ತರಹಳ್ಳಿ ಮುಖ್ಯ ರಸ್ತೆಗೆ ಸಾಗಿ ಪುನಃ ನೈಸ್ ರಸ್ತೆ ಪ್ರವೇಶಿಸಿ ಮೈಸೂರು ರಸ್ತೆ ಕಡೆಗೆ ಸಾಗುವುದು.
* ಪಾದಯಾತ್ರೆಯು ಮಧು ಜಂಕ್ಷನ್ ದಾಟಿದ ನಂತರ ಆರ್.ಆರ್. ಚರ್ಚ್ ಬಳಿ ಎಡ ತಿರುವು ಪಡೆದು ಆರ್.ಆರ್. ನಗರ ಮುಖ್ಯ ರಸ್ತೆ ಮುಖಾಂತರ ಉತ್ತರಹಳ್ಳಿ ಮುಖ್ಯ ರಸ್ತೆಗೆ ಸಾಗಿ ಮಧು ಜಂಕ್ಷನ್ ಮುಖಾಂತರ ಮೈಸೂರು ಕಡೆಗೆ ಸಾಗುವುದು.
* ಸುಮನಹಳ್ಳಿ ಜಂಕ್ಷನ್ ಬಳಿ ವಾಹನಗಳ ಮಾರ್ಗ ಬದಲಾವಣೆ ಮಾಡಿ ಶ್ರೀಗಂಧದಕಾವಲು ಮುಖಾಂತರ ಮೈಸೂರು ರಸ್ತೆ ಕಡೆಗೆ ಸಾಗುವುದು.
ಮಾರೇನಹಳ್ಳಿ ಜಂಕ್ಷನ್‌ನಿಂದ ಜಯದೇವ ಜಂಕ್ಷನ್‌ವರೆಗೆ:
*ಜಯನಗರ ರಾಘವೇಂದ್ರ ಮಠ ಜಂಕ್ಷನ್‌ನಲ್ಲಿಎಡ ತಿರುವು ಪಡೆದು ಜಯನಗರ 39ನೇ ಅಡ್ಡ ರಸ್ತೆಯಲ್ಲಿ ಬಲ ತಿರುವು ಪಡೆದು 39ನೇ ಅಡ್ಡ ರಸ್ತೆಯಲ್ಲಿ ಸಂಚರಿಸಿ ಬನ್ನೇರುಘಟ್ಟ ಮುಖ್ಯ ರಸ್ತೆ ಗುರಪ್ಪನ ಪಾಳ್ಯ ಜಂಕ್ಷನ್ ಅಥವಾ ಸಾಗರ್ ಜಂಕ್ಷನ್ ಸಂಪರ್ಕಿಸಿ ಸಂಪರ್ಕಿಸಿ ಬೆಂಗಳೂರು ಡೇರಿ ಕಡೆಗೆ ಹಾಗೂ ಬನ್ನೇರುಘಟ್ಟ ಕಡೆಗೆ ಸಂಚರಿಸಬಹುದಾಗಿದೆ.
ಜಯದೇವ ಜಂಕ್ಷನ್‌ನಿಂದ ಬಿಟಿಎಂ 20ನೇ ಮುಖ್ಯರಸ್ತೆವರೆಗೆ:
* ಬನ್ನೇರುಘಟ್ಟ ಮುಖ್ಯ ರಸ್ತೆ ಗುರಪ್ಪನಪಾಳ್ಯ ಜಂಕ್ಷನ್‌ನಲ್ಲಿಬಲ ತಿರುವು ಪಡೆದು, ಜಯದೇವ ಅಂಡರ್‌ಪಾಸ್, ಜೆ.ಡಿ. ಮರ ಜಂಕ್ಷನ್ ರೂಬಿ-1 ಜಂಕ್ಷನ್, ಎಡ ತಿರುವು, ಎನ್.ಎಸ್.ಪಾಳ್ಯ 6ನೇ ಅಡ್ಡ ರಸ್ತೆ - ಬಿಟಿಎಂ 29ನೇ ಮುಖ್ಯ ರಸ್ತೆ (ಮಡಿವಾಳ ಕೆರೆ ರಸ್ತೆ) ಮೂಲಕ ರಿಂಗ್ ರಸ್ತೆ ಸಂಪರ್ಕಿಸಿ ಸಿಲ್ಕ್ ಬೋರ್ಡ್ ಕಡೆಗೆ ಸಂಚರಿಸಬಹುದು ಅಥವಾ ಕಲ್ಪವೃಕ್ಷ ಜಂಕ್ಷನ್‌ನಲ್ಲಿಎಡ ತಿರುವು ಸಿಲ್ಕ್ ಬೋರ್ಡ್ ಕಡೆಗೆ ಸಂಚರಿಸಬಹುದಾಗಿದೆ.
* ಸಿಲ್ಕ್ ಬೋರ್ಡ್ ಕಡೆಯಿಂದ ಬರುವ ವಾಹನಗಳು 29ನೇ ಮುಖ್ಯ ರಸ್ತೆ ಜಂಕ್ಷನ್‌ನಲ್ಲಿಎಡ ತಿರುವು ಪಡೆದು ಲೇಕ್ ರಸ್ತೆ, ರೂಬಿ-2 ಜಂಕ್ಷನ್ ಮುಖಾಂತರ ಬನ್ನೇರುಘಟ್ಟ ಮುಖ್ಯ ರಸ್ತೆಯನ್ನು ಸೇರಿ ಜೆ.ಡಿ. ಮರ ಜಂಕ್ಷನ್‌ನಲ್ಲಿಎಡ ತಿರುವು ಪಡೆದು ಜೆ.ಪಿ.ನಗರ ಮತ್ತು ಜಯನಗರ ಕಡೆಗೆ ಸಂಚರಿಸಬಹುದಾಗಿದೆ.