ಬೆಂಗಳೂರು: ಐಟಿ ಅಧಿಕಾರಿಗಳ ಸೋಗಿನಲ್ಲಿಈರುಳ್ಳಿ ವ್ಯಾಪಾರಿ ಅಪಹರಣ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ದುಷ್ಕರ್ಮಿಗಳು, ಈರುಳ್ಳಿ ವ್ಯಾಪಾರಿ ಒಬ್ಬರನ್ನು ಅಪಹರಿಸಿ, ಅವರನ್ನು ಬೆದರಿಸಿ ಹಣ ಸುಲಿಗೆ ಮಾಡಲು ಪ್ರಯತ್ನಿಸಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು: ಐಟಿ ಅಧಿಕಾರಿಗಳ ಸೋಗಿನಲ್ಲಿಈರುಳ್ಳಿ ವ್ಯಾಪಾರಿ ಅಪಹರಣ
Linkup
ಬೆಂಗಳೂರು: (ಐಟಿ) ಅಧಿಕಾರಿಗಳ ಸೋಗಿನಲ್ಲಿಈರುಳ್ಳಿ ವ್ಯಾಪಾರಿಯನ್ನು ಅಪಹರಿಸಿದ ಆರೋಪಿಗಳು, 50 ಲಕ್ಷ ರೂ.ಗೆ ಬೇಡಿಕೆಯಿಟ್ಟು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಸವೇಶ್ವರನಗರದ ಶ್ರೀನಿವಾಸನ್‌ (58) ಅಪಹರಣಕ್ಕೆ ಒಳಗಾದವರು. ಸೆ.30ರಂದು ಶ್ರೀನಿವಾಸ್‌ ಅವರು ಚಾಲಕ ಆರ್ಮುಗಂ ಜತೆ ಇನ್ನೋವಾ ಕಾರಿನಲ್ಲಿ ಕೆಲಸದ ನಿಮಿತ್ತ ಬಸವೇಶ್ವರನಗರದಿಂದ ಆರ್‌ಎಂಸಿ ಯಾರ್ಡ್‌ ಕಡೆ ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಮಹಾಲಕ್ಷ್ಮಿ ಲೇಔಟ್‌ನ ಅಶೋಕಪುರ ಮುಖ್ಯರಸ್ತೆ ಬಳಿ ಪೊಲೀಸ್‌ ಸಮವಸ್ತ್ರದಲ್ಲಿದ್ದ ವ್ಯಕ್ತಿ ಅವರ ಕಾರನ್ನು ತಡೆದು ಪಕ್ಕದಲ್ಲಿ ನಿಲ್ಲಿಸುವಂತೆ ಸೂಚಿಸಿದ್ದ. ಚಾಲಕ ಕಾರನ್ನು ರಸ್ತೆ ಪಕ್ಕದಲ್ಲಿ ನಿಲುಗಡೆ ಮಾಡುತ್ತಿದ್ದಂತೆಯೇ ಅವರ ಬಳಿ ಬಂದ ಇಬ್ಬರು ಅಪರಿಚಿತರು, ತಮ್ಮನ್ನು ಆದಾಯ ತೆರಿಗೆ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು. 'ಸಾಹೇಬರು ಕಾರಿನಲ್ಲಿ ಕುಳಿತಿದ್ದಾರೆ. ನಿಮ್ಮನ್ನು ವಿಚಾರಣೆ ಮಾಡಬೇಕು' ಎಂದು ಹೇಳಿ ಆರೋಪಿಗಳ ಕಾರಿನಲ್ಲಿ ಶ್ರೀನಿವಾಸ್‌ನನ್ನು ಬಲವಂತವಾಗಿ ಕೂರಿಸಿ ಏರ್‌ಪೋರ್ಟ್‌ ರಸ್ತೆ ಕಡೆ ಕರೆದುಕೊಂಡು ಹೋಗಿದ್ದರು. ಆ ವೇಳೆ ಕೆಲ ಬ್ಯಾಂಕ್‌ ಸ್ಟೇಟ್‌ಮೆಂಟ್‌ ತೋರಿಸಿ 'ನೀವು ಇಷ್ಟೆಲ್ಲಾ ವ್ಯವಹಾರ ಮಾಡಿ, ಕಡಿಮೆ ತೆರಿಗೆ ಪಾವತಿಸಿದ್ದೀರಿ' ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ್‌ 'ನೀವು ನೋಟಿಸ್‌ ಕೊಟ್ಟರೆ ವಕೀಲರ ಮೂಲಕ ಉತ್ತರ ಕೊಡುತ್ತೇನೆ' ಎಂದಿದ್ದರು. ಅದಕ್ಕೆ ಆಕ್ರೋಶಗೊಂಡ ಆರೋಪಿಗಳು, ಶ್ರೀನಿವಾಸ್‌ ಕಪಾಳಕ್ಕೆ ಹೊಡೆದು 50 ಲಕ್ಷ ರೂ. ಕೊಟ್ಟರೆ ಈ ಪ್ರಕರಣ ಮುಚ್ಚಿ ಹಾಕುವುದಾಗಿ ಬೆದರಿಸಿದ್ದರು. ಕನಿಷ್ಠ 20 ಲಕ್ಷ ರೂ. ಕೊಡಲೇಬೇಕು ಎಂದು ಆರೋಪಿಗಳು ಬೇಡಿಕೆಯಿಟ್ಟಿದ್ದರು. ಒಂದು ದಿನ ಸಮಯಾವಕಾಶ ಕೊಟ್ಟರೆ 5 ಲಕ್ಷ ರೂ. ನೀಡುವುದಾಗಿ ಶ್ರೀನಿವಾಸ್‌ ಹೇಳಿದ್ದರು. ಬಳಿಕ ಶ್ರೀನಿವಾಸ್‌ನ್ನು ಮೇಖ್ರಿ ಸರ್ಕಲ್‌ ಬಳಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್‌ ಪೊಲೀಸರಿಗೆ ಶ್ರೀನಿವಾಸ್‌ ದೂರು ನೀಡಿದ್ದರು. ಸಿನಿಮಾ ನಿರ್ಮಾಪಕರೊಬ್ಬರು ಈ ಮತ್ತು ಬೆದರಿಕೆ ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.