ಫಿಫಾ U-17: ಭಾರತೀಯ ತಂಡವನ್ನು ಮುನ್ನಡೆಸಲಿರುವ ದಿನಗೂಲಿ ಕಾರ್ಮಿಕನ ಮಗಳು

2022ರ ಫಿಫಾ U-17 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಫುಟ್ಬಾಲ್ ತಂಡವನ್ನು ದಿನಗೂಲಿ ಕಾರ್ಮಿಕರೊಬ್ಬರ ಮಗಳು ಮುನ್ನಡೆಸಲಿದ್ದಾರೆ. ರಾಂಚಿ: 2022ರ ಫಿಫಾ U-17 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಫುಟ್ಬಾಲ್ ತಂಡವನ್ನು ದಿನಗೂಲಿ ಕಾರ್ಮಿಕರೊಬ್ಬರ ಮಗಳು ಮುನ್ನಡೆಸಲಿದ್ದಾರೆ.
ಜಾರ್ಖಂಡ್‌ನ ಗುಮ್ಲಾದ ಹಳ್ಳಿಯ ನಿವಾಸಿ ಅಷ್ಟಮ್ ಓರಾನ್ ಅಕ್ಟೋಬರ್ 11ರಿಂದ ಪ್ರಾರಂಭವಾಗುವ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಾರೆ.
ಇನ್ನು ರಾಜ್ಯದಿಂದ ಆರು ಕ್ರೀಡಾಪಟುಗಳನ್ನು ಕಳುಹಿಸಿದ ವಿಶಿಷ್ಟ ಹಿರಿಮೆಯನ್ನು ಜಾರ್ಖಂಡ್ ಹೊಂದಿದೆ. ಆ ಕ್ರೀಡಾಪಟುಗಳು ಎಂದರೆ ಅಷ್ಟಮ್ ಓರಾನ್, ನೀತು ಲಿಂಡಾ, ಅಂಜಲಿ ಮುಂಡಾ, ಅನಿತಾ ಕುಮಾರಿ, ಪೂರ್ಣಿಮಾ ಕುಮಾರಿ ಮತ್ತು ಸುಧಾ ಅಂಕಿತಾ ಟಿರ್ಕೆ. ಜಾರ್ಖಂಡ್‌ನ ಆಟಗಾರ್ತಿಯೊಬ್ಬರು ಬಹುರಾಷ್ಟ್ರೀಯ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು.
ಅಷ್ಟಮ್ ಅವರದ್ದು ಬಡ ಕುಟುಂಬವಾಗಿದೆ. ಇಂತಹ ಸ್ಥಿತಿಯಲ್ಲೂ ನಮ್ಮ ಮಗಳು ಕ್ರೀಡಾಪಟುವಾಗಿರುವು ಅದ್ಭುತ ವಿಷಯವಾಗಿದೆ ಎಂದು ಅಷ್ಟಮ್‌ನ ತಾಯಿ ತಾರಾ ದೇವಿ ಹೇಳಿದ್ದಾರೆ. ಪರಿಸ್ಥಿತಿ ನಮಗೆ ಮಗಳಿಗೆ ಪೌಷ್ಠಿಕಾಂಶದ ಆಹಾರದ ಬದಲು ಅವರಿಗೆ ಅನ್ನವನ್ನು ಮಾತ್ರ ಉಣಬಡಿಸಲು ಸಾಧ್ಯವಾಗಿತ್ತು ಎಂದು ಐದು ಮಕ್ಕಳ ತಾಯಿ ಹೇಳಿದ್ದು ಇದೇ ವೇಳೆ ಅಷ್ಟಮ್ ಜಾರ್ಖಂಡ್‌ಗೆ ಹೆಮ್ಮೆ ತಂದಿದೆ ಎಂದು ಹೇಳಿದರು.
ಇದನ್ನೂ ಓದಿ: ಎಎಫ್‌ಸಿ ಅಂಡರ್-17 ಫುಟ್ಬಾಲ್ ಏಷ್ಯನ್ ಕಪ್ ಅರ್ಹತಾ ಪಂದ್ಯ: ಕುವೈತ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಅಷ್ಟಮ್ ತಂದೆ ಹೀರಾಲಾಲ್ ಓರಾನ್ ಮಗಳ ಸಾಧನೆಯನ್ನು ಕೇಳಿ ದಿಗ್ಭ್ರಮೆಗೊಂಡರು. ಅಷ್ಟಮ್ ಫುಟ್‌ಬಾಲ್‌ನ ಅಭಿಮಾನಿಯಾಗಿದ್ದಳು. ಮನೆಯಲ್ಲಿ, ಹೊರಗೆ ಮತ್ತು ಭತ್ತದ ಗದ್ದೆಗಳಿಗೆ ಹೋಗುವ ದಾರಿಯಲ್ಲಿ ಮಗಳು ತನ್ನ ಸ್ನೇಹಿತರೊಂದಿಗೆ ಬಹುತೇಕ ಎಲ್ಲೆಡೆ ಆಟ ಅಭ್ಯಾಸ ಮಾಡುತ್ತಿದ್ದಳು. ಇನ್ನು 'ಜನರು ನನ್ನನ್ನು ಗೇಲಿ ಮಾಡಿದ್ದರು. ನಾನು ಮಗಳು ಫುಟ್ಬಾಲ್ ಆಡದಂತೆ ತಡೆಯುವಂತೆ ಹೇಳುತ್ತಿದ್ದರು ಎಂದರು. ಇನ್ನು ಮಗಳ ಧೈರ್ಯವನ್ನು ನೋಡಿ ನಾನು ಅವಳಿಗೆ ಏನನ್ನೂ ಹೇಳಲಿಲ್ಲ. ಆಕೆಯ ಮೊಂಡುತನವೇ ಆಕೆಯನ್ನು ಈ ಹಂತಕ್ಕೆ ತಲುಪಿಸಿದೆ ಎಂದು ಹೀರಾಲಾಲ್ ಹೇಳುತ್ತಾರೆ.
ಹೀರಾಲಾಲ್ ಗ್ರಾಮದಲ್ಲಿ ಸ್ವಲ್ಪ ಕೃಷಿ ಭೂಮಿಯನ್ನು ಹೊಂದಿದ್ದು ಅದು ಅವರ ಕುಟುಂಬವನ್ನು ನಡೆಸಲು ನೆರವಾಗುತ್ತದೆ. ಆಗಾಗ ದಿನಗೂಲಿ ಕೆಲಸಕ್ಕೆ ಹೊರ ಹೋಗಬೇಕಾಗುತ್ತದೆ ಎನ್ನುತ್ತಾರೆ. ಅಷ್ಟಮ್ ಜಾರ್ಖಂಡ್‌ನ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದಾದ ಗುಮ್ಲಾದ ಬಿಶುನ್‌ಪುರ್ ಬ್ಲಾಕ್‌ನ ಅಡಿಯಲ್ಲಿ ಗೋರಾ ಟೋಲಿ ಗ್ರಾಮಕ್ಕೆ ಸೇರಿದ್ದು, ಯಾವುದೇ ಮೊಬೈಲ್ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲ. ಅಷ್ಟಮ್ ಸ್ಥಳೀಯ 'ಖಾಸಿ' ಪಂದ್ಯಾವಳಿಯಲ್ಲಿ (ವಿಜೇತರಿಗೆ ಮೇಕೆ ಸಿಗುತ್ತದೆ) ತನ್ನ ಸಾಮರ್ಥ್ಯವನ್ನು ತೋರಿಸಿದ್ದಳು. ಇನ್ನು ಅಂತಿಮವಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತು. ಭಾರತ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರನ್ನು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅಭಿನಂದಿಸಿದ್ದಾರೆ.