‘ಪುಷ್ಪ’ ನಿರ್ದೇಶಕ ಸುಕುಮಾರ್ ಮುಂದೆ ಅಕ್ಷಯ್ ಕುಮಾರ್ ಇಟ್ಟ ಬೇಡಿಕೆ ಏನು?

ಆದಷ್ಟು ಬೇಗ ತಮಗೊಂದು ಚಿತ್ರವನ್ನು ನಿರ್ದೇಶನ ಮಾಡುವಂತೆ ನಿರ್ದೇಶಕ ಸುಕುಮಾರ್‌ಗೆ ಅಕ್ಷಯ್ ಕುಮಾರ್ ಕೇಳಿಕೊಂಡಿದ್ದಾರಂತೆ. ಹಾಗಂತ ಸ್ವತಃ ನಿರ್ದೇಶಕ ಸುಕುಮಾರ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

‘ಪುಷ್ಪ’ ನಿರ್ದೇಶಕ ಸುಕುಮಾರ್ ಮುಂದೆ ಅಕ್ಷಯ್ ಕುಮಾರ್ ಇಟ್ಟ ಬೇಡಿಕೆ ಏನು?
Linkup
ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘: ದಿ ರೈಸ್’ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿತ್ತು. ರಿಲೀಸ್ ಆದ ಕೆಲವೇ ದಿನಗಳಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಲೆಕ್ಷನ್ ಮಾಡುವಲ್ಲಿ ‘ಪುಷ್ಪ: ದಿ ರೈಸ್’ ಸಿನಿಮಾ ಸಕ್ಸಸ್‌ಫುಲ್ ಆಗಿದೆ. ಹಿಂದಿ ವರ್ಷನ್‌ನಲ್ಲೇ 80 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಲೆಕ್ಷನ್ ಮಾಡಿ ‘ಪುಷ್ಪ: ದಿ ರೈಸ್’ ಸಿನಿಮಾ ಹೊಸ ದಾಖಲೆ ಸೃಷ್ಟಿಸಿದೆ. ಭರ್ಜರಿ ರೆಕಾರ್ಡ್‌ಗಳನ್ನು ಕ್ರಿಯೇಟ್ ಮಾಡುತ್ತಿರುವ ‘ಪುಷ್ಪ: ದಿ ರೈಸ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದವರು ಸುಕುಮಾರ್. ಇಂತಿಪ್ಪ ಸುಕುಮಾರ್‌ಗೆ ಇದೀಗ ಬಾಲಿವುಡ್‌ ನಟ ಒಂದು ಬೇಡಿಕೆ ಇಟ್ಟಿದ್ದಾರೆ. ಆದಷ್ಟು ಬೇಗ ತಮಗೊಂದು ಚಿತ್ರವನ್ನು ನಿರ್ದೇಶನ ಮಾಡುವಂತೆ ನಿರ್ದೇಶಕ ಸುಕುಮಾರ್‌ಗೆ ಅಕ್ಷಯ್ ಕುಮಾರ್ ಕೇಳಿಕೊಂಡಿದ್ದಾರಂತೆ. ಹಾಗಂತ ಸ್ವತಃ ನಿರ್ದೇಶಕ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ನಿರ್ದೇಶಕ ಸುಕುಮಾರ್ ಹೇಳಿದ್ದೇನು? ‘’ಇತ್ತೀಚೆಗಷ್ಟೇ ಅಕ್ಷಯ್ ಸರ್‌ ನನಗೊಂದು ಬಾರಿ ಫೋನ್ ಮಾಡಿದ್ದರು. ನಾನು ಹೇಗಿದ್ದೇನೆ ಎಂದು ಕೇಳಿದ್ದರು. ಅದಾದ ಮೇಲೆ ‘’ನೀವೊಂದು ಬಾರಿ ನನ್ನ ಜೊತೆಗೆ ಕೆಲಸ ಮಾಡಬೇಕು. ಒಮ್ಮೆ ಮಂಬೈಗೆ ಬನ್ನಿ’’ ಅಂತ ಅಕ್ಷಯ್ ಕುಮಾರ್ ಹೇಳಿದ್ದರು’’ ಎಂದು ಸಂದರ್ಶನವೊಂದರಲ್ಲಿ ಸುಕುಮಾರ್ ಬಾಯ್ಬಿಟ್ಟಿದ್ದಾರೆ. ‘’ಅದ್ಭುತ ಸ್ಕ್ರಿಪ್ಟ್ ರೆಡಿಯಾದ ಕೂಡಲೆ ನಾನು ಅಕ್ಷಯ್ ಕುಮಾರ್ ಅವರನ್ನು ಖಂಡಿತ ಭೇಟಿ ಮಾಡುತ್ತೇನೆ’’ ಅಂತಲೂ ಸುಕುಮಾರ್ ಹೇಳಿದ್ದಾರೆ. ‘’ನಾನು ಯಾರೊಂದಿಗೂ ಕೆಲಸ ಮಾಡಲೇಬೇಕು ಅಂತ ಮಾಡಿಲ್ಲ. ಸ್ಕ್ರಿಪ್ಟ್ ಡಿಮ್ಯಾಂಡ್ ಮಾಡಿದ ನಟರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಆದರೆ, ಅಕ್ಷಯ್ ಕುಮಾರ್ ಜೊತೆಗೆ ಒಮ್ಮೆ ಕೆಲಸ ಮಾಡುವ ಇಚ್ಛೆ ಇದೆ’’ ಎಂದಿದ್ದಾರೆ ನಿರ್ದೇಶಕ ಸುಕುಮಾರ್. ಸುಕುಮಾರ್ ಕೈಯಲ್ಲಿ ಈಗ ಯಾವ್ಯಾವ ಚಿತ್ರಗಳಿವೆ? ‘ಪುಷ್ಪ: ದಿ ರೈಸ್’ ಸಕ್ಸಸ್ ಖುಷಿಯಲ್ಲಿರುವ ನಿರ್ದೇಶಕ ಸುಕುಮಾರ್ ಶೀಘ್ರದಲ್ಲೇ ‘ಪುಷ್ಪ: ದಿ ರೂಲ್’ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ವರದಿಗಳ ಪ್ರಕಾರ, ಮಾರ್ಚ್ 2022 ರಲ್ಲಿ ‘ಪುಷ್ಪ: ದಿ ರೂಲ್’ ಸಿನಿಮಾ ಸೆಟ್ಟೇರಲಿದೆ. ‘ಪುಷ್ಪ: ದಿ ರೂಲ್’ ಮುಗಿದ ಬಳಿಕ ‘ಅರ್ಜುನ್ ರೆಡ್ಡಿ’ ಹಾಗೂ ಗೀತ ಗೋವಿಂದಂ’ ಖ್ಯಾತಿಯ ವಿಜಯ್ ದೇವರಕೊಂಡ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಜೊತೆಗೆ ಸುಕುಮಾರ್ ಕೈಜೋಡಿಸಲಿದ್ದಾರೆ. ಅಕ್ಷಯ್ ಕುಮಾರ್ ಯಾವ್ಯಾವ ಚಿತ್ರಗಳಲ್ಲಿ ಬಿಜಿ? ‘ಸೂರ್ಯವಂಶಿ’, ‘ಅತ್ರಂಗಿ ರೇ’ ಚಿತ್ರಗಳ ಬಳಿಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೈಯಲ್ಲಿ ‘ಪೃಥ್ವಿರಾಜ್’, ‘ರಕ್ಷಾ ಬಂಧನ’, ‘ರಾಮ್ ಸೇತು’, ‘ಓ ಮೈ ಗಾಡ್ 2’ ಚಿತ್ರಗಳಿವೆ.