No.1 ಟ್ರೆಂಡಿಂಗ್‌ನಲ್ಲಿ 'ವಿಕ್ರಾಂತ್ ರೋಣ': ಯೂಟ್ಯೂಬ್‌ನಲ್ಲಿ ಸುದೀಪ್ ಲುಕ್ ಸೂಪರ್ ಹಿಟ್!

ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ 'ವಿಕ್ರಾಂತ್ ರೋಣ' ಚಿತ್ರದ ಡೆಡ್ ಮ್ಯಾನ್ಸ್ ಆಂಥೆಮ್ ಯೂಟ್ಯೂಬ್‌ನಲ್ಲಿ ರಿಲೀಸ್ ಆಯ್ತು. ಬಿಡುಗಡೆಯಾಗುತ್ತಿದ್ದ ಹಾಗೆ 'ವಿಕ್ರಾಂತ್ ರೋಣ' ಚಿತ್ರದ ಡೆಡ್ ಮ್ಯಾನ್ಸ್ ಆಂಥೆಮ್ ಎಲ್ಲೆಡೆ ವೈರಲ್ ಆಗಿದೆ. ಅಷ್ಟೇ ಅಲ್ಲ, ಯೂಟ್ಯೂಬ್‌ನಲ್ಲಿ ನಂ.1 ಟ್ರೆಂಡಿಂಗ್ ಆಗಿದೆ.

No.1 ಟ್ರೆಂಡಿಂಗ್‌ನಲ್ಲಿ 'ವಿಕ್ರಾಂತ್ ರೋಣ': ಯೂಟ್ಯೂಬ್‌ನಲ್ಲಿ ಸುದೀಪ್ ಲುಕ್ ಸೂಪರ್ ಹಿಟ್!
Linkup
ಅಭಿನಯ ಚಕ್ರವರ್ತಿ, ಅವರಿಗಿಂದು ಜನ್ಮದಿನದ ಸಂಭ್ರಮ. ಕಿಚ್ಚ ಸುದೀಪ್ ಅವರ ಜನ್ಮದಿನದ ಸಡಗರವನ್ನು ದುಪ್ಪಟ್ಟು ಮಾಡಲು '' ಚಿತ್ರತಂಡ ಸ್ಪೆಷಲ್ ಪ್ಲಾನ್ ಮಾಡಿತ್ತು. ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಬೆಳಗ್ಗೆ ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಚಿತ್ರದ ಡೆಡ್ ಮ್ಯಾನ್ಸ್ ಆಂಥೆಮ್ ಬಿಡುಗಡೆ ಮಾಡಲಾಗಿತ್ತು. ಇದೀಗ 'ವಿಕ್ರಾಂತ್ ರೋಣ' ಚಿತ್ರದ ಡೆಡ್ ಮ್ಯಾನ್ಸ್ ಆಂಥೆಮ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಂ.1 ಟ್ರೆಂಡಿಂಗ್‌ನಲ್ಲಿ 'ವಿಕ್ರಾಂತ್ ರೋಣ' ಇಂದು ಬೆಳಗ್ಗೆಯಷ್ಟೇ 'ವಿಕ್ರಾಂತ್ ರೋಣ' ಚಿತ್ರದ ಡೆಡ್ ಮ್ಯಾನ್ಸ್ ಆಂಥೆಮ್ ಯೂಟ್ಯೂಬ್‌ನಲ್ಲಿ ರಿಲೀಸ್ ಆಯ್ತು. ಬಿಡುಗಡೆಯಾಗುತ್ತಿದ್ದ ಹಾಗೆ 'ವಿಕ್ರಾಂತ್ ರೋಣ' ಚಿತ್ರದ ಡೆಡ್ ಮ್ಯಾನ್ಸ್ ಆಂಥೆಮ್ ಎಲ್ಲೆಡೆ ವೈರಲ್ ಆಗಿದೆ. ಅಷ್ಟೇ ಅಲ್ಲ, ಯೂಟ್ಯೂಬ್‌ನಲ್ಲಿ ನಂ.1 ಟ್ರೆಂಡಿಂಗ್ ಆಗಿದೆ. ಕೆಲವೇ ಗಂಟೆಗಳ ಹಿಂದೆಯಷ್ಟೇ ಬಿಡುಗಡೆಯಾದ 'ವಿಕ್ರಾಂತ್ ರೋಣ' ಚಿತ್ರದ ಡೆಡ್ ಮ್ಯಾನ್ಸ್ ಆಂಥೆಮ್ ಅದಾಗಲೇ ಒಂದು ಮಿಲಿಯನ್ ಅರ್ಥಾತ್ ಹತ್ತು ಲಕ್ಷಕ್ಕೂ ಅಧಿಕ ವ್ಯೂಸ್ ಪಡೆದುಕೊಂಡಿದೆ. 'ವಿಕ್ರಾಂತ್ ರೋಣ' ಚಿತ್ರದ ಡೆಡ್ ಮ್ಯಾನ್ಸ್ ಆಂಥೆಮ್‌ಗೆ ಒಂದುವರೆ ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಆ ಮೂಲಕ ಯೂಟ್ಯೂಬ್‌ನಲ್ಲಿ 'ವಿಕ್ರಾಂತ್ ರೋಣ' ಸೂಪರ್ ಹಿಟ್ ಆಗಿದೆ. ಕಿಚ್ಚನ ಸ್ಟೈಲಿಶ್ ಲುಕ್‌ಗೆ ಅಭಿಮಾನಿಗಳು ಫಿದಾ ಡೆಡ್ ಮ್ಯಾನ್ಸ್ ಆಂಥೆಮ್‌ನಲ್ಲಿ 'ವಿಕ್ರಾಂತ್ ರೋಣ' ಚಿತ್ರದಲ್ಲಿನ ಕಿಚ್ಚ ಸುದೀಪ್ ಅವರ ಲುಕ್ ರಿವೀಲ್ ಮಾಡಲಾಗಿದೆ. ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಲುಕ್ ಸೂಪರ್ ಸ್ಟೈಲಿಶ್ ಆಗಿದೆ. ಕಿಚ್ಚ ಸುದೀಪ್ ಅವರ ಸೂಪರ್ ಸ್ಟೈಲಿಶ್ ಹಾಗೂ ಅಷ್ಟೇ ಖಡಕ್ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನೂ, 'ವಿಕ್ರಾಂತ್ ರೋಣ' ಚಿತ್ರದ ಮೇಕಿಂಗ್ ಚೆನ್ನಾಗಿದೆ. ಹಾಲಿವುಡ್ ಶೈಲಿಯ ಅದ್ಭುತ ವಿಶ್ಯುವಲ್ಸ್ ಇವೆ ಅಂತೆಲ್ಲಾ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. 3Dಯಲ್ಲಿ ಮೂಡಿಬರಲಿದೆ 'ವಿಕ್ರಾಂತ್ ರೋಣ' ಫ್ಯಾಂಟಸಿ, ಆಕ್ಷನ್, ಅಡ್ವೆಂಚರ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ 'ವಿಕ್ರಾಂತ್ ರೋಣ' ಸಿನಿಮಾ 3Dಯಲ್ಲಿ ತೆರೆಗೆ ಬರಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ 14 ಭಾಷೆಗಳಲ್ಲಿ 'ವಿಕ್ರಾಂತ್ ರೋಣ' ರಿಲೀಸ್ ಆಗಲಿದೆ. ಆದರೆ, ಕೋವಿಡ್ ಪರಿಸ್ಥಿತಿಯಿಂದಾಗಿ ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಫೈನಲ್ ಆಗಿಲ್ಲ. 'ವಿಕ್ರಾಂತ್ ರೋಣ' ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ? ಅನೂಪ್ ಭಂಡಾರಿ ನಿರ್ದೇಶನದ ನಿರೂಪ್ ಭಂಡಾರಿ, ಕಿಚ್ಚ ಸುದೀಪ್, ನೀತಾ ಅಶೋಕ್ ಅಭಿನಯದ ಚಿತ್ರ 'ವಿಕ್ರಾಂತ್ ರೋಣ'. ಚಿತ್ರದಲ್ಲಿ ಗಡಂಗ್ ರಕ್ಕಮ್ಮ ಆಗಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಅಭಿನಯಿಸಿದ್ದಾರೆ. ಈ ಸಿನಿಮಾಗೆ ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.