ಪ್ರೇಯಸಿಯ ಕೊಲೆಗೆ ಯತ್ನಿಸಿದ್ದ ಪ್ರಕರಣ; ಮಾಜಿ ಪೊಲೀಸ್ ಪೇದೆಗೆ 5 ವರ್ಷ ಜೈಲು ಶಿಕ್ಷೆ

ಅನಿಲ್‌ ಕುಮಾರ್‌ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕರ್ತವ್ಯದಿಂದ ವಜಾಗೊಂಡಿದ್ದ. ಅಲ್ಲದೆ ಆತ ಮೊದಲ ಪತ್ನಿಗೂ ವಿಚ್ಛೇದನ ನೀಡಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಆತನಿಗೆ ಮತ್ತೊಮ್ಮೆ ಮಾತನಾಡಿಸದಂತೆ ಎಚ್ಚರಿಕೆ ನೀಡಿದ್ದಳು. ಜತೆಗೆ 2011ರ ನ. 20ರಂದು ತನ್ನ ತಂಟೆಗೆ ಬರದಂತೆ ಎಚ್ಚರಿಕೆ ನೀಡಲು ಸ್ನೇಹಿತ ನವೀನ್‌ ಎಂಬುವವರ ಜತೆ ಅನಿಲ್‌ ಮನೆಗೆ ಹೋಗಿದ್ದಳು. ಅದೇ ವಿಚಾರವಾಗಿ ಚರ್ಚಿಸೋಣ ಎಂದು ಮನೆಯ ಟೆರೇಸ್‌ ಮೇಲೆ ಕರೆದೊಯ್ದ ಅನಿಲ್‌, ಯುವತಿಯ ಎದೆ, ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ 10 ಬಾರಿ ಇರಿದು ಕೊಲ್ಲಲು ಯತ್ನಿಸಿದ್ದ.

ಪ್ರೇಯಸಿಯ ಕೊಲೆಗೆ ಯತ್ನಿಸಿದ್ದ ಪ್ರಕರಣ; ಮಾಜಿ ಪೊಲೀಸ್ ಪೇದೆಗೆ 5 ವರ್ಷ ಜೈಲು ಶಿಕ್ಷೆ
Linkup
ಬೆಂಗಳೂರು: ಪ್ರೇಯಸಿಯನ್ನು ಕೊಲೆಗೈಯ್ಯಲು ಯತ್ನಿಸಿದ ಮಾಜಿ ಪೊಲೀಸ್‌ ಪೇದೆಯೊಬ್ಬನಿಗೆ ನಗರದ ಸೆಷನ್ಸ್‌ ಕೋರ್ಟ್‌ ಐದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ. ಕೊಡಗಿನ ಕುಶಾಲನಗರದ ಅನಿಲ್‌ ಕುಮಾರ್‌ ಅಲಿಯಾಸ್‌ ರಾಹುಲ್‌ ಶಿಕ್ಷೆಗೊಳಗಾದ ಮಾಜಿ ಪೊಲೀಸ್‌ ಪೇದೆ. ಈತನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನಗರದ 66ನೇ ಹೆಚ್ಚುವರಿ ಸಿಸಿಎಚ್‌ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಮದುವೆಯಾಗಿ ಒಂದು ಮಗುವಿನ ತಂದೆಯಾಗಿದ್ದ ಅನಿಲ್‌ ಕುಮಾರ್‌ 2008ರಲ್ಲಿ ಬ್ಯೂಟಿಷಿಯನ್‌ವೊಬ್ಬರ ಜತೆ ಸ್ನೇಹ ಬೆಳೆಸಿದ್ದ. ಈ ಮಧ್ಯೆ ಆಕೆಗೆ, ಅನಿಲ್‌ಕುಮಾರ್‌ಗೆ ಮದುವೆಯಾಗಿದ್ದು, ಒಂದು ಮಗುವಿದೆ ಎಂಬ ವಿಚಾರ ತಿಳಿದಿತ್ತು. ಹಾಗಾಗಿ, ಯುವತಿ, ಆತನಿಂದ ಅಂತರ ಕಾಯ್ದುಕೊಂಡಿದ್ದಳು. ನಂತರ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದೇನೆ ಎಂದು ಸುಳ್ಳು ಹೇಳಿ ನಂಬಿಸಿದ್ದ. ಕೆಲ ದಿನಗಳ ಬಳಿಕ ಅನಿಲ್‌ ಕುಮಾರ್‌ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕರ್ತವ್ಯದಿಂದ ವಜಾಗೊಂಡಿದ್ದ. ಅಲ್ಲದೆ ಆತ ಮೊದಲ ಪತ್ನಿಗೂ ವಿಚ್ಛೇದನ ನೀಡಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಆತನಿಗೆ ಮತ್ತೊಮ್ಮೆ ಮಾತನಾಡಿಸದಂತೆ ಎಚ್ಚರಿಕೆ ನೀಡಿದ್ದಳು. ಜತೆಗೆ 2011ರ ನ. 20ರಂದು ತನ್ನ ತಂಟೆಗೆ ಬರದಂತೆ ಎಚ್ಚರಿಕೆ ನೀಡಲು ಸ್ನೇಹಿತ ನವೀನ್‌ ಎಂಬುವವರ ಜತೆ ಅನಿಲ್‌ ಮನೆಗೆ ಹೋಗಿದ್ದಳು. ಅದೇ ವಿಚಾರವಾಗಿ ಚರ್ಚಿಸೋಣ ಎಂದು ಮನೆಯ ಟೆರೇಸ್‌ ಮೇಲೆ ಕರೆದೊಯ್ದ ಅನಿಲ್‌, ಯುವತಿಯ ಎದೆ, ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ 10 ಬಾರಿ ಇರಿದು ಕೊಲ್ಲಲು ಯತ್ನಿಸಿದ್ದ. ರಕ್ಷಣೆಗೆ ಮುಂದಾದ ನವೀನ್‌ ಮೇಲೂ ಹಲ್ಲೆ ಮಾಡಿದ್ದ. ಈ ವಿಚಾರ ತಿಳಿದ ಯಲಹಂಕ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿ, ಯುವತಿ ಮತ್ತು ಆಕೆಯ ಸ್ನೇಹಿತ ನವೀನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇಬ್ಬರೂ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. 2012 ರಲ್ಲಿ ಜಾಮೀನು ಪಡೆದು ಹೊರ ಬಂದ ನಂತರ ಮತ್ತೊಮ್ಮೆ ಯುವತಿಗೆ ಬೆದರಿಕೆ ಹಾಕಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಇದೀಗ ವಿಚಾರಣೆ ಪೂರ್ಣಗೊಳಿಸಿರುವ ಕೋರ್ಟ್‌ ಆರೋಪಿಗೆ 5 ವರ್ಷ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿದೆ.