ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಿದೆಯೇ? ಇಲ್ಲಿದೆ ಸಂಪೂರ್ಣ ವಿವರ.

Today Petrol Diesel Price: ಕಳೆದ ಕೆಲ ಸಮಯದಿಂದ ದೇಶದಲ್ಲಿ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಬಂದಿದೆ. ಈಗಾಗಲೇ ಪೆಟ್ರೋಲ್​, ಡೀಸೆಲ್​ ಬೆಲೆ ಶತಕದ ಗಡಿ ದಾಟಿದೆ. ದಿನನಿತ್ಯ ಬೆಲೆ ಏರಿಕೆಯ ನೋವು ಅನುಭವಿಸ್ತಿರೋ ಗ್ರಾಹಕರು ‘ಹಿಂಗಾದ್ರೆ ಜೀವ್ನ ಹೆಂಗೆ ಗುರೂ’ ಅಂತಾನೆ ಸರ್ಕಾರಕ್ಕೆ ಉಗಿಯುತ್ತಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ​​ಬೆಲೆ ಪರಿಷ್ಕರಣೆಗೊಂಡ ಬಳಿಕ ಇಂದು ಪೆಟ್ರೋಲ್​, ಡೀಸೆಲ್​ ದರದ ವಿವರ ಇಲ್ಲಿ ಕೊಡಲಾಗಿದೆ.

ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಿದೆಯೇ? ಇಲ್ಲಿದೆ ಸಂಪೂರ್ಣ ವಿವರ.
Linkup
ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ದರ ಕಂಡು ಜನ ಸಾಮಾನ್ಯರು ನಿಗಿ ನಿಗಿ ಕೆಂಡವಾಗುತ್ತಿರುವ ಮಧ್ಯೆ ದೇಶದಲ್ಲಿ ಇಂದು ಇಂಧನ ದರದಲ್ಲಿ ಬೆಳಗಿನ ವೇಳೆಗೆ ಏರಿಕೆಯಾಗಿಲ್ಲ. ಕಳೆದ ಅನೇಕ ಸಮಯದಿಂದ ದಿನ ನಿತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಕಾಣುತ್ತಿದ್ದು, ಅಕ್ಟೋಬರ್‌ 25ನೆಯ ದಿನವಾದ ಇಂದು (ಮಂಗಳವಾರ) ಮಾತ್ರ ಅನೇಕ ನಗರಗಳಲ್ಲಿ ತೈಲ ದರ ಏರಿಕೆಯಾಗಿಲ್ಲ. ಅಂದಹಾಗೆ ಬೆಲೆ ಏರಿಕೆ ಆಗದೆ ಹಿಂದಿನ ಬೆಲೆಯೇ ಮುಂದುವರಿದಿರೋದು ಇದು ಎರಡನೇ ದಿನವಾಗಿದೆ. ಜನರ ಅತ್ಯವಶ್ಯಕ ವಸ್ತುವಾಗಿರುವ ಇಂಧನ ದರ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರಗಳು ಪೆಟ್ರೋಲ್‌, ಡೀಸೆಲ್‌ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಸುಂಕ ಕಡಿತಗೊಳಿಸುವುದಿಲ್ಲ ಎಂದು ಈಗಾಗಲೇ ಕೇಂದ್ರ ಸ್ಪಷ್ಟನೆ ನೀಡಿದೆ. ಈ ಮಧ್ಯೆ ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ನೂರರ ಗಡಿ ದಾಟಿರುವುದರಿಂದ ಅಸಮಾಧಾನಗೊಂಡ ಜನಸಾಮಾನ್ಯರು ಇದೇನಾ ನಿಮ್ಮ ‘ಅಚ್ಛೇದಿನ್’ ಅಂತಾ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ. ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಪ್ರಮುಖ ಮಹಾ ನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಪೆಟ್ರೋಲ್: ₹107.59, ಡೀಸೆಲ್: ₹96.32 ಪಶ್ಚಿಮ ಬಂಗಾಳದ ಕೋಲ್ಕೊತ್ತಾ ಪೆಟ್ರೋಲ್ : ₹108.11, ಡೀಸೆಲ್ : ₹99.43 ಮಹಾರಾಷ್ಟ್ರ ರಾಜಧಾನಿ ಮುಂಬಯಿ ಪೆಟ್ರೋಲ್ : ₹113.46, ಡೀಸೆಲ್ : ₹104.38 ತಮಿಳುನಾಡು ರಾಜಧಾನಿ ಚೆನ್ನೈ ಪೆಟ್ರೋಲ್ : ₹104.62, ಡೀಸೆಲ್ : ₹100.66 ಸಿಲಿಕಾನ್ ಸಿಟಿ ಬೆಂಗಳೂರು ಪೆಟ್ರೋಲ್: ₹111.34, ಡೀಸೆಲ್: ₹102.23 ಕಡಲನಗರಿ ಮಂಗಳೂರು ಪೆಟ್ರೋಲ್: ₹110.49, ಡೀಸೆಲ್: ₹101.42 ಅರಮನೆ ನಗರಿ ಮೈಸೂರು ಪೆಟ್ರೋಲ್: ₹111.32, ಡೀಸೆಲ್: ₹102.21 ದೇಶದಲ್ಲಿ ನಿರಂತರವಾಗಿ ಹೆಚ್ಚಳ ಕಾಣುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸದ್ಯಕ್ಕೆ ಇಳಿಯುವ ಲಕ್ಷಣಗಳಿಲ್ಲ. ಪೂರೈಕೆ ಹಾಗೂ ಬೇಡಿಕೆಗೆ ಸಂಬಂಧಿಸಿದ ಸಮಸ್ಯೆಗಳ ವಿಚಾರದಲ್ಲಿ ವಿವಿಧ ತೈಲ ರಫ್ತು ದೇಶಗಳೊಂದಿಗೆ ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ. ಆದರೆ ದರದಲ್ಲಿ ಇಳಿಕೆಯ ಸಾಧ್ಯತೆ ಇಲ್ಲ. ಕಚ್ಚಾ ತೈಲದ ಬೆಲೆ ಕಡಿಮೆ ಇದ್ದಾಗಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ಕಡಿತದ ಔದಾರ್ಯ ಪ್ರದರ್ಶಿಸಿರಲಿಲ್ಲ. ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 32.9 ರೂ ಹಾಗೂ ಡೀಸೆಲ್ ಮೇಲೆ 31.8 ರೂ ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರಗಳು ರಾಜ್ಯಗಳ ಸುಂಕ ಹಾಗೂ ತೆರಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಪ್ರದೇಶದಿಂದ ಪ್ರದೇಶಕ್ಕೆ ತೈಲ ದರದಲ್ಲಿ ಬದಲಾವಣೆ ಇರುತ್ತದೆ.