ದೇಶದಲ್ಲಿ ಬಾಂಬ್‌ ಸ್ಪೋಟಕ್ಕೆ ಸಂಚು ಹೆಣೆದಿದ್ದ 6 ಶಂಕಿತ ಉಗ್ರರ ಬಂಧನ: ಪಾಕ್‌ನಿಂದ ಸಿಕ್ಕಿತ್ತು ತರಬೇತಿ

ಸ್ಫೋಟಕ ದಾಳಿಗೆ ಸಂಚು ಹೆಣೆದಿದ್ದ 6 ಶಂಕಿತ ಉಗ್ರರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಪಾಕ್‌ನ ಕುಖ್ಯಾತ ಗುಪ್ತಚರ ಇಲಾಖೆ 'ಐಎಸ್‌ಐ', 26/11 ದಾಳಿಕೋರ ಕಸಬ್‌ಗೆ ಟ್ರೈನಿಂಗ್‌ ನೀಡಿದ್ದ ಕ್ಯಾಂಪ್‌ನಲ್ಲಿಯೇ ಬಂಧಿತರಿಗೂ ತರಬೇತಿ ಸಿಕ್ಕಿದೆ ಎಂದು ತಿಳಿದುಬಂದಿದೆ. ಪೊಲೀಸರ ತನಿಖೆ ವೇಳೆ ಈ ಆರು ಮಂದಿ ಸತ್ಯಬಿಚ್ಚಿಟ್ಟಿದ್ದಾರೆ.

ದೇಶದಲ್ಲಿ ಬಾಂಬ್‌ ಸ್ಪೋಟಕ್ಕೆ ಸಂಚು ಹೆಣೆದಿದ್ದ 6 ಶಂಕಿತ ಉಗ್ರರ ಬಂಧನ: ಪಾಕ್‌ನಿಂದ ಸಿಕ್ಕಿತ್ತು ತರಬೇತಿ
Linkup
ಹೊಸದಿಲ್ಲಿ: ಹಬ್ಬದ ಋುತುವಿನಲ್ಲಿ ದೇಶದ ಮಹಾನಗರಗಳಲ್ಲಿ ಸ್ಫೋಟಕ ದಾಳಿಗೆ ಸಂಚು ಹೆಣೆದಿದ್ದ 6 ಶಂಕಿತ ಉಗ್ರರನ್ನು ದಿಲ್ಲಿ ಪೊಲೀಸರ ವಿಶೇಷ ವಿಭಾಗ ಬಂಧಿಸಿರುವ ಬೆನ್ನಿಗೇ, ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಬಂಧಿತರಲ್ಲಿ ಇಬ್ಬರಿಗೆ ಪಾಕಿಸ್ತಾನದ ಉಗ್ರರ ಶಿಬಿರದಲ್ಲಿ ತರಬೇತಿ ನೀಡಲಾಗಿತ್ತು. ಪಾಕ್‌ನ ಕುಖ್ಯಾತ ಗುಪ್ತಚರ ಇಲಾಖೆ '', 26/11 ದಾಳಿಕೋರ ಕಸಬ್‌ಗೆ ಟ್ರೈನಿಂಗ್‌ ನೀಡಿದ್ದ ಕ್ಯಾಂಪ್‌ನಲ್ಲಿಯೇ ಬಂಧಿತರಿಗೂ ತರಬೇತಿ ಸಿಕ್ಕಿದೆ. ಬಂಗಾಳಿ ಭಾಷೆ ಮಾತನಾಡುವ ಇಬ್ಬರು ಬಂಧಿತರನ್ನು ತೀವ್ರ ವಿಚಾರಣೆಗೆ ಪೊಲೀಸರು ಗುರಿಪಡಿಸಿದಾಗ ಪಾಕ್‌ ಕೈವಾಡ ಬಯಲಾಗಿದೆ. ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸೋದರ ಅನೀಸ್‌ ಮೂಲಕ ದಾಳಿಗೆ ಅಗತ್ಯವಾದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ಹೊಂದಿಸಿದ್ದರು ಎಂಬ ಸುಳಿವು ಈ ಮೊದಲೇ ಪೊಲೀಸರಿಗೆ ಸಿಕ್ಕಿದೆ. ಬಂಧಿತರ ಪೈಕಿ ಅಲಹಾಬಾದ್‌ ನಿವಾಸಿ ಜೀಶಾನ್‌ ಖ್ವಾಮರ್‌ ಮತ್ತು ದಿಲ್ಲಿಯ ಜಾಮಿಯಾ ನಗರ ನಿವಾಸಿ ಒಸಾಮ ಅಲಿಯಾಸ್‌ ಸಮಿಯನ್ನು ವಿಮಾನದಲ್ಲಿ ಮಸ್ಕತ್‌ಗೆ, ಅಲ್ಲಿಂದ ಮುಂದೆ ದೋಣಿಯ ಮೂಲಕ ಪಾಕಿಸ್ತಾನದ ಗ್ವಾದರ್‌ ಬಂದರಿಗೆ ಕರೆದೊಯ್ದು ಉಗ್ರ ಶಿಬಿರಕ್ಕೆ ತಲುಪಿಸಲಾಗಿತ್ತು. ಬಳಿಕ ಅವರಿಗೆ ಕಸಬ್‌ಗೆ ತರಬೇತಿ ಪಡೆದ ಥಟ್ಟಾದಲ್ಲಿನ ನೆಲೆಯಲ್ಲಿ ಟ್ರೈನಿಂಗ್‌ ನೀಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಮುಖವಾಗಿ ಸುಧಾರಿತ ಸ್ಫೋಟಕ ಸಾಧನ (ಐಇಡಿ), ಟೈಮ್‌ ಬಾಂಬ್‌ಗಳನ್ನು ತಯಾರಿಸುವ ಪರಿಣತಿಯನ್ನು ಶಂಕಿತ ಉಗ್ರರು ಪಡೆದಿದ್ದಾರೆ. ಗಣಪತಿ ವಿಸರ್ಜನೆಯೇ ಗುರಿ?!ಮೂಲತಃ ಮುಂಬಯಿನ ಸಿಯೊನ್‌ ಮೂಲದವನಾದ ಬಂಧಿತ ಉಗ್ರ ಜಾನ್‌ ಮೊಹಮ್ಮದ್‌ ಶೇಖ್‌ (47) ಹಲವು ವರ್ಷಗಳಿಂದ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡಿದ್ದ ಹಿನ್ನೆಲೆಯಲ್ಲಿ ಮರೀನ್‌ ಡ್ರೈವ್‌ ರಸ್ತೆಯನ್ನು ಚೆನ್ನಾಗಿ ಬಲ್ಲವನಾಗಿದ್ದ. ಈ ಬಾರಿ ಇದೇ ಮಾರ್ಗದಲ್ಲಿ ಗಣಪತಿ ವಿಸರ್ಜನೆಗೆ ಜನಜಂಗುಳಿ ಏರ್ಪಟ್ಟಾಗ ಬಾಂಬ್‌ ಸ್ಫೋಟಿಸುವ ಸಂಚು ಹೆಣೆದಿದ್ದ. ಬಳಿಕ ಬಾಡಿಗೆ ಟ್ಯಾಕ್ಸಿಯಲ್ಲಿ ತಾನೇ ಚಾಲನೆ ಮಾಡಿಕೊಂಡು ಸಹ ಉಗ್ರರನ್ನು ಮಹಾನಗರ ದಾಟಿಸುವ ಹೊಣೆ ಹೊತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಆತನ ಪತ್ನಿಗೆ ಅನುಮಾನ ಬಂದು ನಗರದಿಂದ ಹೊರಹೋಗುತ್ತಿರುವ ಕಾರಣದ ಬಗ್ಗೆ ಪ್ರಶ್ನೆ ಎತ್ತಿದ್ದಳು. ಆ ವೇಳೆ ಶೇಖ್‌, ಸ್ನೇಹಿತರೊಂದಿಗೆ ಉತ್ತರಪ್ರದೇಶಕ್ಕೆ ತೆರಳುತ್ತಿರುವ ಉತ್ತರ ನೀಡಿ ಕೆಲವು ಟಿಕೆಟ್‌ಗಳನ್ನು ಕೂಡ ತೋರಿಸಿದ್ದ ಎನ್ನಲಾಗಿದೆ. ಈ ಎಲ್ಲ ವಿಚಾರಗಳನ್ನು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್‌ ವಲ್ಸೆ ಪಾಟೀಲ್‌ ಅವರಿಗೆ ಉನ್ನತ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಅವರು, ಮುಂಬಯಿನಲ್ಲಿ ಬೀಡುಬಿಟ್ಟಿರಬಹು-ದಾದ ಸ್ಲೀಪರ್‌ ಸೆಲ್‌ಗಳ ಪತ್ತೆಗೆ ಶೋಧ ತೀವ್ರಗೊಳಿಸಲು ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.