ದಿಲ್ಲಿಯಲ್ಲಿ ಭಾರೀ ಅಗ್ನಿ ದುರಂತ; 7 ಮಂದಿ ಸಾವು, 60 ಗುಡಿಸಲುಗಳು ಸಂಪೂರ್ಣ ಭಸ್ಮ!

‘ರಾತ್ರಿ ಒಂದು ಗಂಟೆ ಸುಮಾರಿಗೆ ಗೋಕಲ್ಪುರಿ ಪಿಎಸ್‌ ಪ್ರದೇಶದಲ್ಲಿ ಅಗ್ನಿ ದುರಂತ ಸಂಭವಿಸಿದ ಬಗ್ಗೆ ಕರೆ ಬಂತು. ತಕ್ಷಣ ಎಲ್ಲ ರಕ್ಷಣಾ ಸಾಧನಗಳೊಂದಿಗೆ ನಮ್ಮ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ನಾವು ಅಗ್ನಿ ಶಾಮಕ ಸಿಬ್ಬಂದಿಯನ್ನು ಕೂಡ ಸಂಪರ್ಕಿಸಿದೆವು. ಅವರು ಉತ್ತಮವಾಗಿ ಸ್ಪಂದಿಸಿದರು. ನಿರಂತರ ಕಾರ್ಯಾಚರಣೆ ನಡೆಸಿದ್ದರಿಂದ ಬೆಳಗ್ಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಬೆಂಕಿ ನಂದಿಸಲ್ಪಟ್ಟಿತು. ಘಟನೆಯಲ್ಲಿ 60 ಗುಡಿಸಲುಗಳು ಸುಟ್ಟು ಬೂದಿಯಾಗಿದೆ’ ಎಂದು ಈಶಾನ್ಯ ದಿಲ್ಲಿಯ ಹೆಚ್ಚುವರಿ ಡಿಸಿಪಿ ಮಾಹಿತಿ ನೀಡಿದ್ದಾರೆ.

ದಿಲ್ಲಿಯಲ್ಲಿ ಭಾರೀ ಅಗ್ನಿ ದುರಂತ; 7 ಮಂದಿ ಸಾವು, 60 ಗುಡಿಸಲುಗಳು ಸಂಪೂರ್ಣ ಭಸ್ಮ!
Linkup
ಹೊಸದಿಲ್ಲಿ: ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಏಳು ಮಂದಿ ಸಜೀವ ದಹನವಾಗಿದ್ದು ಮಾತ್ರವಲ್ಲದೇ 60 ಗುಡಿಸಲುಗಳು ಸುಟ್ಟು ಕರಕಲಾದ ಘಟನೆ ಹೊಸದಿಲ್ಲಿಯ ಗೋಕಲ್‌ಪುರಿ ಭಾಗದ ಕೊಳಗೇರಿ ಪ್ರದೇಶದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಈ ಅವಘಡ ಸಂಭವಿಸಿದ್ದು, ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಒಟ್ಟು ಹದಿಮೂರು ಅಗ್ನಿಶಾಮಕ ವಾಹನ ಸ್ಥಳದಲ್ಲಿದ್ದು, ನಿರಂತರ ಕಾರ್ಯಾಚರಣೆ ನಡೆಸಿದ ಬಳಿಕ ಕೊನೆಗೂ ಸಿಬ್ಬಂದಿ ಅಗ್ನಿ ನಂದಿಸಲು ಯಶಸ್ವಿಯಾಗಿದ್ದಾರೆ. ಬೆಂಕಿ ನಂದಿಸಿದ ಬಳಿಕ ಅಲ್ಲಿದ್ದ ಮೃತದೇಹಗಳನ್ನು ಸಿಬ್ಬಂದಿ ಹೊರ ತೆಗೆದಿದ್ದಾರೆ ಎಂದು ದಿಲ್ಲಿ ಅಗ್ನಿ ಶಾಮಕ ದಳ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ದಿಲ್ಲಿ ಈಶಾನ್ಯ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ದೇವೇಶ್ ಕುಮಾರ್ ಮಹ್ಲಾ, ರಾತ್ರಿ ಒಂದು ಗಂಟೆಯ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಧಾವಿಸುವಂತೆ ತಿಳಿಸಿದೆವು ಎಂದರು. ಈಶಾನ್ಯ ದಿಲ್ಲಿಯ ಹೆಚ್ಚುವರಿ ಡಿಸಿಪಿ ಮಾಹಿತಿ ನೀಡಿ, ‘ರಾತ್ರಿ ಒಂದು ಗಂಟೆ ಸುಮಾರಿಗೆ ಗೋಕಲ್ಪುರಿ ಪಿಎಸ್‌ ಪ್ರದೇಶದಲ್ಲಿ ಅಗ್ನಿ ದುರಂತ ಸಂಭವಿಸಿದ ಬಗ್ಗೆ ಕರೆ ಬಂತು. ತಕ್ಷಣ ಎಲ್ಲ ರಕ್ಷಣಾ ಸಾಧನಗಳೊಂದಿಗೆ ನಮ್ಮ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ನಾವು ಅಗ್ನಿ ಶಾಮಕ ಸಿಬ್ಬಂದಿಯನ್ನು ಕೂಡ ಸಂಪರ್ಕಿಸಿದೆವು. ಅವರು ಉತ್ತಮವಾಗಿ ಸ್ಪಂದಿಸಿದರು. ನಿರಂತರ ಕಾರ್ಯಾಚರಣೆ ನಡೆಸಿದ್ದರಿಂದ ಬೆಳಗ್ಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಬೆಂಕಿ ನಂದಿಸಲ್ಪಟ್ಟಿತು. ಘಟನೆಯಲ್ಲಿ 60 ಗುಡಿಸಲುಗಳು ಸುಟ್ಟು ಬೂದಿಯಾಗಿದೆ’ ಎಂದು ಹೇಳಿದ್ದಾರೆ. ಅಗ್ನಿ ದುರಂತ ಸಂಭವಿಸಿದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ಬೆಳಗ್ಗೆಯೇ ದುಃಖದ ಸುದ್ದಿ ಕೇಳಿದೆ. ನಾನು ಸ್ಥಳಕ್ಕೆ ತೆರಳಿ ಸಂತ್ರಸ್ತರನ್ನು ಭೇಟಿಯಾಗುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.