ದೊಣ್ಣೆ, ರಾಡ್‌ಗಳಲ್ಲಿ ಬೀದಿಯಲ್ಲಿಯೇ ಹೊಡೆದಾಡಿಕೊಂಡ ಸಂಬಂಧಿಕರು!

ದಿಲ್ಲಿಯ ಈಶಾನ್ಯ ಭಾಗದ ಉಸ್ಮಾನ್ಪುರ ಎಂಬಲ್ಲಿ ಶುಕ್ರವಾರ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರೇ ಬೀದಿಯಲ್ಲಿ ಒಬ್ಬರನ್ನು ಒಬ್ಬರು ಅಡ್ಡಾಡಿಸಿ ಹೊಡೆದಾಡಿದ್ದಾರೆ. ದೊಣ್ಣೆ, ರಾಡುಗಳಿಂದ ಹಲ್ಲೆ ನಡೆಸಿದ್ದಾರೆ. ಹಾಡಹಗಲೇ ನಡೆದ ಈ ಘಟನೆಯಿಂದ ಜನರು ಕಂಗಾಲಾಗಿದ್ದಾರೆ.

ದೊಣ್ಣೆ, ರಾಡ್‌ಗಳಲ್ಲಿ ಬೀದಿಯಲ್ಲಿಯೇ ಹೊಡೆದಾಡಿಕೊಂಡ ಸಂಬಂಧಿಕರು!
Linkup
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಬೀದಿಯೊಂದರಲ್ಲಿ ಶುಕ್ರವಾರ ಭೀಕರ ಹೊಡೆದಾಟವೊಂದು ನಡೆದಿದೆ. ಕೋಲು, ದೊಣ್ಣೆಗಳನ್ನು ಹಿಡಿದುಕೊಂಡ ಎರಡು ಗುಂಪುಗಳು ಎದುರಾಳಿಗಳ ಮೇಲೆ ಪರಸ್ಪರ ಕ್ರೂರವಾಗಿ ನಡೆಸಿವೆ. ಯಾರನ್ನು ಯಾರು ಹೊಡೆಯುತ್ತಿದ್ದಾರೆ ಎನ್ನುವುದೂ ಅರ್ಥವಾಗದಂತಹ ಸ್ವರೂಪದಲ್ಲಿ ಈ ಭಯಾನಕ ಘಟನೆ ನಡೆದಿದೆ. ಅಲ್ಲಿನ ಜನರು ಹೊಡೆದಾಟವನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ಎಲ್ಲವೂ ತಣ್ಣಗಾದ ಬಳಿಕ ಗೊತ್ತಾದ ಸಂಗತಿಯೆಂದರೆ, ಈ ಬಡಿದಾಟ ನಡೆದಿದ್ದು ಆಸ್ತಿ ವಿಚಾರದ ವಿವಾದದ ಕಾರಣ. ಹೊಡೆದಾಡಿಕೊಂಡ ಎರಡೂ ಗುಂಪುಗಳ ಜನರು ಪರಸ್ಪರ ಸಂಬಂಧಿಕರು ಎನ್ನುವುದು! ಈ ಸಂಘರ್ಷದ ವಿಡಿಯೋ ವೈರಲ್ ಆಗಿದ್ದು, ಅದರ ಆಧಾರದಲ್ಲಿ ಪೊಲೀಸರು ಕೆಲವು ಆರೋಪಿಗಳನ್ನು ಗುರುತಿಸಿದ್ದಾರೆ. ಒಬ್ಬನನ್ನು ಬಂಧಿಸಲಾಗಿದೆ. ಈಶಾನ್ಯ ದಿಲ್ಲಿಯ ಉಸ್ಮಾನ್ಪುರ ಪ್ರದೇಶದಲ್ಲಿ ಹಾಡ ಹಗಲೇ ಭೀಕರ ನಡೆಯುತ್ತಿದೆ ಎಂಬ ದೂರು ಬಂದ ಕೂಡಲೇ ತಮ್ಮ ತಂಡವೊಂದು ಅಲ್ಲಿಗೆ ಧಾವಿಸಿತು. ಗಲಾಟೆಯನ್ನು ಕೂಡಲೇ ನಿಲ್ಲಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. ನೆಲದ ಮೇಲೆ ಬಿದ್ದಿದ್ದ ವ್ಯಕ್ತಿಯೊಬ್ಬನಿಗೆ ಇನ್ನು ಇಬ್ಬರು ವ್ಯಕ್ತಿಗಳು ಹಿಗ್ಗಾಮುಗ್ಗ ಥಳಿಸುತ್ತಿರುವುದು ಒಂದು ವಿಡಿಯೋದಲ್ಲಿ ಕಾಣಿಸಿದೆ. ಒಬ್ಬ ವ್ಯಕ್ತಿ ಮುರಿದ ಉರುಗೋಲು ಹಿಡಿದುಕೊಂಡಿದ್ದರೆ, ಇನ್ನೊಬ್ಬ ಮರದ ತುಂಡೊಂದರಿಂದ ಹಲ್ಲೆ ನಡೆಸಿದ್ದಾನೆ. ಇಬ್ಬರೂ ಮನಬಂದಂತೆ ಬಾರಿಸುತ್ತಿದ್ದಾಗ, ವಯಸ್ಕ ಮಹಿಳೆಯೊಬ್ಬರು ಅದನ್ನು ನಿಲ್ಲಿಸುವಂತೆ ಬೇಡಿಕೊಂಡಿದ್ದಾರೆ. ನೆಲಕ್ಕೆ ಬಿದ್ದಿದ್ದ ವ್ಯಕ್ತಿ ನೋವಿನಿಂದ ನರಳುತ್ತಿದ್ದಾಗ, ಇಬ್ಬರ ನಡುವೆ ಮತ್ತೊಂದು ಜಗಳ ಶುರುವಾಗಿದೆ. ಬೀದಿಯಲ್ಲಿ ಸಂಬಂಧಿಕರ ಮಧ್ಯೆ ನಡೆಯುತ್ತಿದ್ದ ಕಾದಾಟವನ್ನು ಜನರು ಬಾಲ್ಕನಿ ಮೇಲೆ ನಿಂತು ಆಘಾತದಿಂದ ವೀಕ್ಷಿಸಿದ್ದಾರೆ. ಶ್ಯಾಮವೀರ್ ಮತ್ತು ಜಗತ್ ಹಾಗೂ ಅವರ ಮಕ್ಕಳ ನಡುವೆ ಜಗಳ ಉಂಟಾಗಿ, ಈ ಅನಾಹುತ ನಡೆದಿದೆ ಎನ್ನುವುದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ. ಆಸ್ತಿ ವಿಚಾರವಾಗಿ ಸಂಬಂಧಿಕರ ಎರಡು ಗುಂಪುಗಳ ನಡುವೆ ದೀರ್ಘ ಸಮಯದಿಂದ ವಿವಾದ ಇತ್ತು. ಒಬ್ಬರ ಮೇಲೊಬ್ಬರು ಪರಸ್ಪರ ದೂರುಗಳನ್ನು ಕೂಡ ದಾಖಲಿಸಿದ್ದರು. ಇಂದು ಜಗತ್ ಹಾಗೂ ಇತರರು ಶ್ಯಾಮವೀರ್ ಮತ್ತು ಆತನ ಸಂಬಂಧಿಕರ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಾವು ವಕೀಲರಾಗಿದ್ದು, ಬಿಜೆಪಿ ಜತೆ ನಂಟು ಇರುವುದಾಗಿ ಆರೋಪಿಗಳು ಹೇಳಿಕೊಂಡಿದ್ದಾರೆ. ಈ ಪ್ರಕರಣವನ್ನು ಬಾರ್ ಕೌನ್ಸಿಲ್ ಮತ್ತು ಬಿಜೆಪಿ ಪದಾಧಿಕಾರಿಗಳ ಮುಂದೆ ಕೊಂಡೊಯ್ಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.