ಟೂರಿಸಂ ತೆರಿಗೆ ರಿಯಾಯಿತಿ; ಪ್ರವಾಸೋದ್ಯಮ ಪುನರುಜ್ಜೀವನಗೊಳಿಸಲು ಪ್ಯಾಕೇಜ್‌ಗಳ ಪಟ್ಟಿ!

ಪ್ರಸ್ತಾವನೆ ಆಧರಿಸಿ 2021-22 ನೇ ಹಣಕಾಸು ವರ್ಷದಲ್ಲಿ ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮತ್ತು ಮನರಂಜನ ಪಾರ್ಕ್ಗಳು ಪಾವತಿಸುವ ಆಸ್ತಿ ತೆರಿಗೆಯಿಂದ ಶೇ. 50 ರಷ್ಟು ರಿಯಾಯಿತಿ ನೀಡಿದೆ. ರಿಯಾಯಿತಿ ಪಡೆಯಲು ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮತ್ತು ಮನರಂಜನ ಪಾರ್ಕ್ಗಳ ಮಾಲೀಕರು ಶೇ. 50 ರಷ್ಟು ಆಸ್ತಿ ತೆರಿಗೆ ಪಾವತಿಸಬೇಕು.

ಟೂರಿಸಂ ತೆರಿಗೆ ರಿಯಾಯಿತಿ; ಪ್ರವಾಸೋದ್ಯಮ ಪುನರುಜ್ಜೀವನಗೊಳಿಸಲು ಪ್ಯಾಕೇಜ್‌ಗಳ ಪಟ್ಟಿ!
Linkup
ಗಂಗಾಧರ ಬಂಡಿಹಾಳ ಕೊಪ್ಪಳ ಕೊಪ್ಪಳ: ಕೋವಿಡ್‌ ಹಿನ್ನೆಲೆಯಲ್ಲಿ 2021-22 ನೇ ಆರ್ಥಿಕ ವರ್ಷದಲ್ಲಿ ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮತ್ತು ಮನರಂಜನ ಪಾರ್ಕ್ ಗಳ ಆಸ್ತಿ ತೆರಿಗೆಯಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಿದೆ. ಕೋವಿಡ್‌- 19 ಸೋಂಕಿನ ಹೊಡೆತಕ್ಕೆ ಪ್ರವಾಸೋದ್ಯಮದಲ್ಲಿ ಉಂಟಾಗಿರುವ ಸಂಕಷ್ಟದಿಂದಾಗಿ ರಾಜ್ಯದ ಸೊಸೈಟಿಯವರು ಪ್ರವಾಸೋದ್ಯಮ ಚಾಲನೆಗಾಗಿ ಪುನರುಜ್ಜೀವನ ಪ್ಯಾಕೇಜ್‌ಗಳ ಪಟ್ಟಿ ಸರಕಾರಕ್ಕೆ ಸಲ್ಲಿಸಿದ್ದರು. 2021-22 ನೇ ಸಾಲಿನ ಹೋಟೆಲ್‌, ರೆಸಾರ್ಟ್‌, ಮನರಂಜನಾ ಪಾರ್ಕ್ ಮೇಲಿನ ಆಸ್ತಿ ಪಾವತಿಸುವುದನ್ನು ಮನ್ನಾ ಮಾಡಬೇಕು. ಅಬಕಾರಿ ಪರವಾನಗಿ ಶುಲ್ಕದ ಪಾವತಿ, ವಿದ್ಯುತ್‌ ಬಿಲ್‌ ಮನ್ನಾ, ವಾಹನ ತ್ರೈಮಾಸಿಕ ರಸ್ತೆ ತೆರಿಗೆ 6 ತಿಂಗಳವರೆಗೆ ಪಾವತಿಸುವುದರ ವಿನಾಯಿತಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಸಂಘಟಿತ ಉದ್ಯೋಗಿಗಳಿಗೆ ಪ್ಯಾಕೇಜ್‌, ಪ್ರವಾಸೋದ್ಯಮ ವ್ಯಾಪಾರ ವಿಭಾಗಗಳಿಗೆ ಸಾಲ ಹಾಗೂ ಪ್ರವಾಸೊದ್ಯಮ ವ್ಯಾಪಾರ ವರ್ಗಗಳಿಗೆ ಬೆಂಬಲ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಶೇ.50 ರಷ್ಟು ಆಸ್ತಿ ತೆರಿಗೆ ಮತ್ತು ಮೂರು ತಿಂಗಳ ವಿದ್ಯುಚ್ಛಕ್ತಿ ಡಿಮ್ಯಾಂಡ್‌ ಮನ್ನಾ ಸೌಲಭ್ಯವನ್ನು ಪ್ರವಾಸೋದ್ಯಮ ವಲಯಕ್ಕೆ ತಲುಪಿಸಲು ಜಿಲ್ಲಾಮಟ್ಟ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮಿತಿ ರಚಿಸುವುದು ಮತ್ತು ಸಮಿತಿಯು ಅನುಷ್ಠಾನ ಮೇಲ್ವಿಚಾರಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸಮಿತಿಯಲ್ಲಿ ಯಾರ್ಯಾರು? ಜಿಲ್ಲಾಮಟ್ಟದಲ್ಲಿ ಜಿಲ್ಲಾಪಂಚಾಯಿತಿ ಸಿಇಒ ಅಧ್ಯಕ್ಷತೆಯಲ್ಲಿ ಜಿ.ಪಂ. ಉಪ ಕಾರ್ಯದರ್ಶಿ, ತಾ.ಪಂ.ಇಒ, ಗ್ರಾ.ಪಂ. ಪಿಡಿಒ, ಜೆಸ್ಕಾಂ, ಎಸ್ಕಾಂ ಸೇರಿದಂತೆ ಇತರೆ ನಿಗಮದ ಅಧೀಕ್ಷಕ ಎಂಜಿನಿಯರ್‌, ಹೋಟೆಲ್‌ ಮಾಲೀಕ ಸಂಘದ ಜಿಲ್ಲಾಧ್ಯಕ್ಷರು ಸದಸ್ಯರಾಗಿದ್ದು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಕಾರ್ಯದರ್ಶಿಗಳಾಗಿದ್ದಾರೆ. ಈ ಸಮಿತಿ ಅನುಷ್ಠಾನ, ಪರಿವೀಕ್ಷಣೆ ಮತ್ತು ಮೇಲ್ವಿಚಾರಣೆ ನಡೆಸಲಿದೆ. ಪ್ರಸ್ತಾವನೆಗೆ ತೀರ್ಮಾನ ಒಂದು ವೇಳೆ ಈಗಾಗಲೇ ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮತ್ತು ಮನರಂಜನಾ ಪಾರ್ಕ್ ಗಳು ವಿದ್ಯುಚ್ಛಕ್ತಿ ಡಿಮ್ಯಾಂಡ್‌ ಅಥವಾ ಫಿಕ್ಸೆಡ್‌ ಶುಲ್ಕ ಪಾವತಿಸಿದ್ದರೆ ಮುಂದಿನ ತಿಂಗಳುಗಳ ಶುಲ್ಕಗಳ ಹೊಂದಾಣಿಕೆ ಮಾಡಿಕೊಳ್ಳಲು ಹಾಗೂ ರಿಲೀಫ್‌ ಪ್ಯಾಕೇಜ್‌ ಅನುಷ್ಠಾನ ಸಂಬಂಧ ಆಯಾ ಇಲಾಖೆ ಸರಕಾರಿ ಆದೇಶ ಹೊರಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಇಂಧನ ಇಲಾಖೆಗೆ ಪ್ರಸ್ತಾವನೆಗಳನ್ನು ಪ್ರವಾಸೋದ್ಯಮ ಇಲಾಖೆ ಮೂಲಕ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಿದೆ. ಅರ್ಜಿ ನಮೂನೆ ಸಲ್ಲಿಸಿ ಪ್ರಸ್ತಾವನೆ ಆಧರಿಸಿ 2021-22 ನೇ ಹಣಕಾಸು ವರ್ಷದಲ್ಲಿ ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮತ್ತು ಮನರಂಜನ ಪಾರ್ಕ್ಗಳು ಪಾವತಿಸುವ ಆಸ್ತಿ ತೆರಿಗೆಯಿಂದ ಶೇ. 50 ರಷ್ಟು ರಿಯಾಯಿತಿ ನೀಡಿದೆ. ರಿಯಾಯಿತಿ ಪಡೆಯಲು ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮತ್ತು ಮನರಂಜನ ಪಾರ್ಕ್ಗಳ ಮಾಲೀಕರು ಶೇ. 50 ರಷ್ಟು ಆಸ್ತಿ ತೆರಿಗೆ ಪಾವತಿಸಬೇಕು. ಶೇ. 50 ರಷ್ಟು ಆಸ್ತಿ ತೆರಿಗೆ ಪಾವತಿಸುವುದು ಹಾಗೂ ಶೇ. 50 ರಷ್ಟು ಆಸ್ತಿ ತೆರಿಗೆಯಿಂದ ರಿಯಾಯಿತಿ ನೀಡಲು ನಿಗದಿತ ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕು. ಅರ್ಜಿಗಳು ಪರಿಶೀಲನೆಗೊಳ್ಳಲಿ ಎಲ್ಲ ಅರ್ಜಿಗಳು ಸಂಬಂಧಿಸಿದ ಪಿಡಿಒಗಳಿಂದ ಪರಿಶೀಲನೆಗೊಳ್ಳಬೇಕು. ವಿವರವಾದ ವರದಿ ಉಪಕಾರ್ಯದರ್ಶಿ ಅವರಿಂದ ಪರಿಶೀಲಿಸಬೇಕಾಗಿದ್ದು, ಜಿಲ್ಲಾಮಟ್ಟದ ಸಮಿತಿಯಿಂದ ಪರಿಶೀಲನೆಗೊಳಿಸಬೇಕು. ಆಸ್ತಿ ತೆರಿಗೆಯಲ್ಲಿ ನೀಡಿರುವ ರಿಯಾಯಿತಿ ಮೊತ್ತವನ್ನು ಸರಕಾರದಿಂದ ಹಿಂಬರಿಸಲು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧೀನ ಕಾರ್ಯದರ್ಶಿ ಚೇತನ್‌ ಎಂ. ಆದೇಶದಲ್ಲಿ ತಿಳಿಸಿದ್ದಾರೆ. ರಿಯಾಯಿತಿ ಪಡೆಯಲು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಪಿಡಿಒಗಳು ಪರಿಶೀಲನೆ ನಡೆಸಿ ವಿವರವಾದ ವರದಿ ಉಪಕಾರ್ಯದರ್ಶಿಗಳು ಪರಿಶೀಲಿಸಬೇಕು. ಜಿಲ್ಲಾಮಟ್ಟದ ಸಮಿತಿಯಿಂದ ಪರಿಶೀಲನೆಗೊಳಿಸಿ ಸರಕಾರದಿಂದ ಶುಲ್ಕ ಹಿಂಬರಿಸಲು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು. ಚೇತನ್‌ ಎಂ., ಅಧೀನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕೊಪ್ಪಳ