ಜೊಮ್ಯಾಟೋ, ಎಲ್‌ಐಸಿ ಬಳಿಕ ಇದೀಗ ಶೀಘ್ರವೇ ಬಿಕಾಜಿ ಫುಡ್ಸ್‌ ಐಪಿಒಗೆ: ₹ 1000 ಕೋಟಿ ಸಂಗ್ರಹಿಸುವ ಗುರಿ

ಒಂದು ಬಿಲಿಯನ್‌ ಡಾಲರ್‌ ಮೌಲ್ಯದಲ್ಲಿ 1000 ಸಾವಿರ ಕೋಟಿ ರೂಪಾಯಿಯಷ್ಟು ಬಂಡವಾಳವನ್ನು ಐಪಿಒ ಮೂಲಕ ಸಂಗ್ರಹಿಸಲು ಬಿಕಾಜಿ ಫುಡ್ಸ್‌ ಸಿದ್ಧತೆ ಮಾಡಿಕೊಂಡಿದೆ. ಐಪಿಒ ಹಂಚಿಕೆ ಮಾಡಲು ಈಗಾಗಲೇ ಜೆಎಂ ಫಿನಾನ್ಷಿಯಲ್‌, ಐಐಎಫ್‌ಎಲ್‌ ಸೆಕ್ಯೂರಿಟೀಸ್‌ ಹಾಗೂ ಇಂಟೆನ್ಸೀವ್‌ ಕಂಪನಿಗಳನ್ನು ತನ್ನ ಬ್ಯಾಂಕರ್‌ಗಳನ್ನಾಗಿ ನೇಮಕ ಮಾಡಿದೆ.

ಜೊಮ್ಯಾಟೋ, ಎಲ್‌ಐಸಿ ಬಳಿಕ ಇದೀಗ ಶೀಘ್ರವೇ ಬಿಕಾಜಿ ಫುಡ್ಸ್‌ ಐಪಿಒಗೆ: ₹ 1000 ಕೋಟಿ ಸಂಗ್ರಹಿಸುವ ಗುರಿ
Linkup
ಹೊಸದಿಲ್ಲಿ: ಜೋಮ್ಯಾಟೋ, ಎಲ್‌ಐಸಿ ಬಳಿಕ ಇದೀಗ ದೇಶದ ಅತೀ ದೊಡ್ಡ ಬೇಕರಿ ಉತ್ಪಾದಕ ಕಂಪನಿ ಬಿಕಾಜಿ ಫುಡ್ಸ್‌ () ಕೂಡ ಐಪಿಒಗೆ () ತೆರೆದುಕೊಳ್ಳಲು ಸಜ್ಜಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಇನ್ನೊಂದು ವಾರದಲ್ಲಿ ಸೆಬಿಗೆ ಕರಡು ಪ್ರತಿ ಸಲ್ಲಿಸಲಾಗುತ್ತದೆ ಎಂದು ಈ ಬಗ್ಗೆ ಮಾಹಿತಿ ಇರುವವರಿಂದ ವಿಷಯ ಗೊತ್ತಾಗಿದೆ. ಒಂದು ಬಿಲಿಯನ್‌ ಡಾಲರ್‌ ಮೌಲ್ಯದಲ್ಲಿ 1000 ಕೋಟಿ ರೂಪಾಯಿಯಷ್ಟು ಬಂಡವಾಳವನ್ನು ಮೂಲಕ ಸಂಗ್ರಹಿಸಲು ಬಿಕಾಜಿ ಫುಡ್ಸ್‌ ಸಿದ್ಧತೆ ಮಾಡಿಕೊಂಡಿದೆ. ಐಪಿಒ ಹಂಚಿಕೆ ಮಾಡಲು ಈಗಾಗಲೇ ಜೆಎಂ ಫಿನಾನ್ಷಿಯಲ್‌, ಐಐಎಫ್‌ಎಲ್‌ ಸೆಕ್ಯೂರಿಟೀಸ್‌ ಹಾಗೂ ಇಂಟೆನ್ಸೀವ್‌ ಕಂಪನಿಗಳನ್ನು ತನ್ನ ಬ್ಯಾಂಕರ್‌ಗಳನ್ನಾಗಿ ನೇಮಕ ಮಾಡಿದೆ. ಈ ಬಗೆಗಿನ ಹೆಚ್ಚಿನ ಮಾಹಿತಿಗಳು ಕಂಪನಿ ಕಡೆಯಿಂದ ಇನ್ನಷ್ಟೇ ಬರಬೇಕಿದೆ. ದೇಶದ ಅತೀ ದೊಡ್ಡ ಬೇಕರಿ ಉತ್ಪನ್ನ ಹಾಗೂ ದೇಸಿ ತಿಂಡಿಗಳ ಉತ್ಪಾದಕ ಕಂಪನಿಯಾಗಿರುವ ಬಿಕಾಜಿಗೆ ಲೈಟ್‌ ಹೌಸ್‌ ಫಂಡ್ಸ್‌, ಐಐಎಫ್‌ಎಲ್‌, ಅವೆಂಡಸ್‌ ಹಾಗೂ ಆಕ್ಸಿಸ್‌ ಮುಂತಾದ ಕಂಪನಿಗಳು ಬಂಡವಾಳ ಹಾಕಿದ್ದವು. 2012ರಲ್ಲಿ ಲೈಟ್‌ಹೌಸ್‌ ಶೇ. 12 ರಷ್ಟು ಬಂಡವಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇದರಲ್ಲಿ ಐಐಎಫ್‌ ಪಾಲು ಇರುವ ಸಲುವಾಗಿ ಲೈಟ್‌ ಹೌಸ್ ತನ್ನ ಪಾಲಿನಲ್ಲಿ ಭಾಗಶಃ ಕಡಿತಗೊಳಿಸಿತ್ತು. ಬಳಿಕ 2019ರಲ್ಲಿ ಅವೆಂಡಸ್‌ ಹಾಗೂ ಆಕ್ಸಿಸ್‌ ತಲಾ ಶೇ.1 ರಂದು ಪಾಲನ್ನು ತಮ್ಮದಾಗಿಸಿಕೊಂಡಿತ್ತು.ಇದಾದ ಬಳಿಕ ಕಂಪನಿ ಸಾಲ ಮುಕ್ತವಾಗಿತ್ತು. ರಾಜಸ್ಥಾನ, ಅಸ್ಸಾಂ, ಕರ್ನಾಟಕ ಸೇರಿ ಸೇರಿ ಬಿಕಾಜಿಗೆ ಒಟ್ಟು ಆರು ಉತ್ಪಾದನಾ ಘಟಕಗಳಿದ್ದು, ಪ್ರತಿದಿನ 400 ಟನ್‌ಗಳಷ್ಟುಸಿಹಿ ತಿಂಡಿ ಹಾಗೂ ಕುರುಕಲು ತಿಂಡಿಗಳನ್ನು ಉತ್ಪಾನೆ ಮಾಡುತ್ತದೆ. ಭುಜಿಯಾ, ನಮ್‌ಕೀನ್‌, ಸಿಹಿ ತಿಂಡಿ, ಪಾಪಡ್‌, ಶೀತಲೀಕರಿಸಿದ ಆಹಾರೋತ್ಪನ್ನಗಳು ಸೇರಿ ಒಟ್ಟು 300 ಬಗೆಯ ಉತ್ಪನ್ನಗಳನ್ನು ಬಿಕಾಜಿ ಉತ್ಪಾದಿಸುತ್ತದೆ. ದೇಶದ ಎಲ್ಲಾ ಭಾಗಗಳಲ್ಲೂ ಬಿಕಾಜಿ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಕೂಡ ಇದೆ. ಈಗ ಐಪಿಒ ಮೂಲಕ ಶೇರು ವಿಕ್ರಯಕ್ಕೆ ಮುಂದಾಗಿದ್ದು, ಹೆಚ್ಚಿನ ಬಂಡವಾಳ ಶೇಖರಣೆಗೆ ಮುಂದಾಗಿದೆ. 2016-2020ರ ಅವಧಿಯಲ್ಲಿ ಬಿಕಾಜಿಯ ಮಾರಾಟ ಗಾತ್ರ 74.7 ಮಿಲಿಯನ್‌ ಕಿಲೋ ಗ್ರಾಂ ಅಂದರೆ ವಾರ್ಷಿಕವಾಗಿ ಶೇ, 13.85 ರಷ್ಟು ಹಿಗ್ಗಿದೆ. ಇದೇ ಅವಧಿಯಲ್ಲಿ ಕಂಪನಿಯ ಲಾಭ ಕೂಡ ಶೇ. 14.2 ರಷ್ಟು ಅಂದರೆ ₹ 1,073 ಕೋಟಿ ಹೆಚ್ಚಳವಾಗಿದೆ. ಬಿಕಾಜಿ ಅವರ ನಮ್‌ಕೀನ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಒಟ್ಟು ಮಾರಾಟದ ಶೇ. 37 ರಷ್ಟು ಪಾಲ್ ನಮಕೀನ್‌ನದ್ದೇ ಇದೆ. ಶೇ. 32 ರಷ್ಟು ಪಾಲು ಭುಜಿಯಾ, ಶೇ.14 ರಷ್ಟು ಪಾಲು ಸಿಹಿತಿಂಡಿಗಳು, ಶೇ. 10 ರಷ್ಟು ಪಾಲುಗಳು ಪಾಪಡ್‌ನದ್ದು ಇವೆ. ತನ್ನ ಉದ್ದಿಮೆಯನ್ನ ಇನ್ನಷ್ಟು ವಿಸ್ತರಿಸುವ ಯೋಜನೆಯಲ್ಲಿ ಬಿಕಾಜಿ ಇದ್ದು, ಇನ್ನಷ್ಟು ವಿಭಾಗಗಳಲ್ಲಿ ಉತ್ಪನ್ನಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿದೆ. ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.