ಚಿರತೆ ಜತೆ ಕಾದಾಡಿ ಕಂದನನ್ನು ರಕ್ಷಿಸಿದ ಮಹಿಳೆ..! ತಾಯಿಯ ಧೈರ್ಯಕ್ಕೆ ಬೆಚ್ಚಿದ ಚಿರತೆ

ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬರು ಚಿರತೆ ವಿರುದ್ಧ ಕಾದಾಡಿ ತನ್ನ ಆರು ವರ್ಷದ ಕಂದನನ್ನು ರಕ್ಷಣೆ ಮಾಡಿದ ಸಾಹಸದ ಘಟನೆ ನಡೆದಿದೆ. ತಾಯಿಯ ಸಾಹಸಕ್ಕೆ ಚಿರತೆಯೇ ಬೆಚ್ಚಿಬಿದ್ದು, ಮಗುವನ್ನು ಬಿಟ್ಟು ಹೋಗಿದೆ. ಈ ಘಟನೆಯನ್ನು ಅಲ್ಲಿನ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಚಿರತೆ ಜತೆ ಕಾದಾಡಿ ಕಂದನನ್ನು ರಕ್ಷಿಸಿದ ಮಹಿಳೆ..! ತಾಯಿಯ ಧೈರ್ಯಕ್ಕೆ ಬೆಚ್ಚಿದ ಚಿರತೆ
Linkup
ಭೋಪಾಲ್‌: ಆದಿವಾಸಿ ಮಹಿಳೆಯೊಬ್ಬರು ಹಸಿದ ಚಿರತೆ (Leopard) ವಿರುದ್ಧ ಕಾದಾಟ ಮಾಡಿ ತನ್ನ ಆರು ವರ್ಷದ ಕಂದನನ್ನು ರಕ್ಷಣೆ ಮಾಡಿದ ಸಾಹಸದ ಘಟನೆ ಮಧ್ಯಪ್ರದೇಶದ () ಸಿಂಧಿ ಜಿಲ್ಲೆಯ ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದ ಸಮೀಪ ನಡೆದಿದೆ. ಬೈಗಾ ಬುಡಕಟ್ಟಿಗೆ ಸೇರಿದ ಕಿರಣ್‌ ಎಂಬ ಮಹಿಳೆ ಕಳೆದ ರಾತ್ರಿ ಕಾಡಿನ ಮಧ್ಯದ ತನ್ನ ಗುಡಿಸಲಿನ ಮುಂದೆ ಮಕ್ಕಳೊಂದಿಗೆ ಬೆಂಕಿ ಕಾಯಿಸುತ್ತಾ ಕುಳಿತಿದ್ದರು. ದುಡಿಮೆಗೆ ಹೋಗಿದ್ದ ಪತಿ ಬರುವುದನ್ನು ಕಾಯುತ್ತಾ ನಾಲ್ವರು ಪುಟ್ಟ ಮಕ್ಕಳೊಂದಿಗೆ ಕುಳಿತಿದ್ದರು. ಆ ವೇಳೆ ಆರು ವರ್ಷದ ಮಗ ರಾಹುಲ್‌ ತನ್ನ ಸೋದರಿಯರ ಜತೆಗೂಡಿ ಅಮ್ಮನ ಹತ್ತಿರ ಬಂದು ಆಟವಾಡುತ್ತಿದ್ದ. ಕತ್ತಲಲ್ಲಿಅಡಗಿ ಕುಳಿತಿದ್ದ ಹಸಿದ ಚಿರತೆಯೊಂದು ಚೆಂಗನೆ ನೆಗೆದು ರಾಹುಲ್‌ನನ್ನು ಎಳೆದುಕೊಂಡು ಕಾಡಿನೊಳಗೆ ಪೇರಿ ಕಿತ್ತಿತು. ಕ್ಷಣಾರ್ಧದಲ್ಲಿ ನಡೆದ ಈ ಅನಾಹುತ ಅರಿತ ಅಮ್ಮ ಕಿರಣ್‌, ತನ್ನ ತೊಡೆ ಮೇಲಿದ್ದ ತಿಂಗಳ ಹಸುಗೂಸನ್ನು ದೊಡ್ಡ ಮಗುವಿನ ಕೈಗಿತ್ತು, ತಾವು ಹಸ್ತಾಂತರಿಸಿ, ಗುಡಿಸಿಲಿನ ಒಳಗೆ ಹೋಗುವಂತೆ ತಿಳಿಸಿದರು. ಚಿರತೆಯನ್ನು ಬೆನ್ನಟ್ಟಿದರು. ಸ್ವಲ್ಪ ದೂರದ ಪೊದೆಯೊಂದರಲ್ಲಿ ಚಿರತೆ ರಾಹುಲ್‌ನನ್ನು ಕಚ್ಚಿ ರಕ್ತ ಹೀರುವ ಯತ್ನ ನಡೆಸಿತ್ತು. ಭಾವಾವೇಶದಿಂದ ಅದರ ಮೇಲೆ ಎರಗಿದ ಕಿರಣ್‌, ದವಡೆಗೆ ಕೈಹಾಕಿ ಮಗನನ್ನು ಕಿತ್ತಿಕೊಂಡು ಎದ್ದು ನಿಂತರು. ಅವರ ಆವೇಶದಿಂದ ಬೆಚ್ಚಿ ಬಿದ್ದ ಚಿರತೆ, ಗುರುಗುಟ್ಟುತ್ತ ಪರಾರಿಯಾತು. ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಾಯಗೊಂಡಿರುವ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ''ಇದು ಮೈನವಿರೇಳಿಸುವ ಸಾಹಸದ ಘಟನೆ,'' ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಶಿವರಾಜ್‌ ಸಿಂಗ್‌ ಚೌಹಾಣ್‌ ಮೆಚ್ಚುಗೆಚಿರತೆಯಿಂದ ತನ್ನ ಮಗನನ್ನು ಕಾಪಾಡಿಕೊಂಡ ಮಹಿಳೆಯ ಸಾಹಸವನ್ನು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ (Shivaraj Singh Chouhan) ಕೊಂಡಾಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಶಿವರಾಜ್‌ ಸಿಂಗ್‌ ಚೌಹಾಣ್‌, ಚಿರತೆಯ ಬಾಯಿಯಿಂದ ತನ್ನ ಮಗುವನ್ನು ರಕ್ಷಿಸಿ ಆ ಮಗುವಿಗೆ ನವಜೀವನ ನೀಡಿದ ತಾಯಿಗೆ ನಮನ. ಸಿಂಧಿ ಜಿಲ್ಲೆಯಲ್ಲಿ ಒಂದು ಕಿಲೋ ಮೀಟರ್ ದೂರ ಚಿರತೆಯನ್ನು ಬೆನ್ನಟ್ಟಿ ತನ್ನ ಕರುಳಿನ ಕುಡಿಗಾಗಿ ಹೋರಾಟ ನಡೆಸಿದ್ದಾಳೆ. ಸಾವನ್ನೇ ಎದುರಿಸುವ ಈ ಧೈರ್ಯ ಮಮತೆಯ ಅದ್ಭುತ ರೂಪ. ಕಿರಣ್ ಬೈಗಾ ಅವರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ತಾಯಿ ಧೈರ್ಯಕ್ಕೆ ಹೆದರಿದ ಚಿರತೆ..!ತಾಯಿ ತೋರಿದ ಧೈರ್ಯಕ್ಕೆ ಹೆದರಿದ ಚಿರತೆ ಮಗುವನ್ನು ಅಲ್ಲಿಯೇ ಬಿಟ್ಟು ಹೋಗಿದೆ. ಆಗ ತಕ್ಷಣ ತನ್ನ ಮಗುವನ್ನು ಕಿರಣ್‌ ಎತ್ತಿಕೊಂಡಿದ್ದಾರೆ. ಅದಾದ ಬಳಿಕ ಚಿರತೆ ಆಕೆ ಮೇಲೆಯೂ ದಾಳಿ ನಡೆಸಿದೆ. ಆದರೆ, ಚಿರತೆ ದಾಳಿಯಿಂದ ಕಿರಣ್‌ ತಪ್ಪಿಸಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.