ಗಾಜಾಪಟ್ಟಿ ವಶಕ್ಕೆ ಪಡೆದ ಇಸ್ರೇಲ್ ಸೇನೆ; ಪ್ಯಾಲೆಸ್ತೀನ್ ಬೆನ್ನಲ್ಲೇ ಲೆಬನಾನ್, ಸಿರಿಯಾದಿಂದಲೂ ದಾಳಿ!

ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಪ್ಯಾಲೆಸ್ತೀನ್ ಮೇಲೆ ಮುಗಿಬಿದ್ದಿರುವ ಇಸ್ರೇಲ್ ಸೇನೆ ಯುದ್ಧ ಆರಂಭವಾದ 5 ದಿನಗಳಲ್ಲೇ ಗಾಜಾಪಟ್ಟಿಯನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಟೆಲ್ ಅವೀವ್: ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಪ್ಯಾಲೆಸ್ತೀನ್ ಮೇಲೆ ಮುಗಿಬಿದ್ದಿರುವ ಇಸ್ರೇಲ್ ಸೇನೆ ಯುದ್ಧ ಆರಂಭವಾದ 5 ದಿನಗಳಲ್ಲೇ ಗಾಜಾಪಟ್ಟಿಯನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ದಾಳಿಯಿಂದ ಕಂಗೆಟ್ಟಿರುವ ಇಸ್ರೇಲ್ ಮೇಲೆ ಇದೀಗ ಬಹು ರಾಷ್ಟ್ರೀಯ ದಾಳಿ ನಡೆಯುತ್ತಿದ್ದು, ಪ್ಯಾಲೆಸ್ತೀನ್ ನೊಂದಿಗಿನ ಯುದ್ಧ ಚಾಲ್ತಿಯಲ್ಲಿರುವಂತೆ ಮತ್ತೊಂದು ಬದಿಯಲ್ಲಿ ಲೆಬನಾನ್ ಮತ್ತು ಸಿರಿಯಾ ದೇಶಗಳೂ ಕೂಡ ಗಡಿಯಲ್ಲಿ ಇಸ್ರೇಲ್ ಸೇನೆ ಮೇಲೆ ದಾಳಿ ನಡೆಸಿವೆ. ಇದನ್ನೂ ಓದಿ: ಹಮಾಸ್ ಉಗ್ರಗಾಮಿಗಳಿಂದ ಕನಿಷ್ಠ 14 ಮಂದಿ ಅಮೆರಿಕನ್ನರ ಸಾವು, ಇಸ್ರೇಲ್ ನಲ್ಲಿ ಒತ್ತೆಯಾಳಾಗಿರುವ ಅಮೆರಿಕ ಪ್ರಜೆಗಳು ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು ದಿನೇದಿನೆ (Israel Palestine War) ಕಾವೇರುತ್ತಿದೆ. ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ ಉಗ್ರರು, ಗಾಜಾಪಟ್ಟಿ ಮೇಲೆ ಇಸ್ರೇಲ್‌ ಸೇನೆಯು ನಿರಂತರವಾಗಿ ದಾಳಿ ನಡೆಸುತ್ತಿದೆ. ಹಮಾಸ್‌ ಉಗ್ರರನ್ನು (Hamas Terrorists) ನಿರ್ನಾಮ ಮಾಡಿಯೇ ತೀರುತ್ತೇವೆ ಎಂದು ಪಣ ತೊಟ್ಟಿರುವ ಇಸ್ರೇಲ್‌ ಈಗ ತನ್ನ ದಾಳಿ ತೀವ್ರಗೊಳಿಸಿದೆ. What happens when you handover your leadership in the hands of Terr0rist$ Media 1: Gaza before Terr0rist Attack on #Israel Media 2: Gaza after Israel Attack#Pakistanis must watch it & take LESSON! TODAY'S Bharat is As Lethal As Israel....in Political Will! Militarily तो पहले… pic.twitter.com/BxIa1PhegU — BhikuMhatre (@MumbaichaDon) October 11, 2023 ಹಮಾಸ್ ಉಗ್ರರಿಂದ ಗಡಿ ತೆಕ್ಕೆಗೆ ಪಡೆದ ಇಸ್ರೇಲ್ ಸೇನೆ ಇದೀಗ ತಾಜಾ ಬೆಳವಣಿಗೆಯಲ್ಲಿ ಗಾಜಾಪಟ್ಟಿಯನ್ನು ನಾವು ವಶಪಡಿಸಿಕೊಂಡಿದ್ದೇವೆ ಎಂದು ಇಸ್ರೇಲ್ ಘೋಷಿಸಿದೆ. ರಾತ್ರೋರಾತ್ರಿ ಸುಮಾರು 200 ಕಟ್ಟಡಗಳನ್ನು ಗುರಿಯಾಗಿಸಿ ಇಸ್ರೇಲ್‌ನ ಯುದ್ಧವಿಮಾನಗಳು ಗಾಜಾಪಟ್ಟಿ ಮೇಲೆ ದಾಳಿ ನಡೆಸಿದ್ದು, ಇಡೀ ಗಾಜಾ ನಮ್ಮ ವಶವಾಗಿದೆ ಎಂದು ಇಸ್ರೇಲ್‌ ತಿಳಿಸಿದೆ. ಹಮಾಸ್‌ ಉಗ್ರರ ಕಟ್ಟಡಗಳು ಸೇರಿ ಪ್ರಮುಖ ಕಟ್ಟಡಗಳನ್ನು ಇಸ್ರೇಲೆ ಧರೆಗುರುಳಿಸಿದೆ. ಮತ್ತೊಂದೆಡೆ, ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಡೆಸಿದ ದಾಳಿಗೆ 1.8 ಲಕ್ಷ ನಾಗರಿಕರು ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇದು ಇಸ್ರೇಲ್‌ ದಾಳಿಯ ತೀವ್ರತೆಗೆ ಸಾಕ್ಷಿಯಾಗಿದೆ.  ಇದನ್ನೂ ಓದಿ: ಇಸ್ರೇಲ್ ನಲ್ಲಿ 40 ಶಿಶುಗಳ ಶಿರಚ್ಛೇದ ಮಾಡಿದ ಹಮಾಸ್ ಉಗ್ರರು 3 ಸಾವಿರ ದಾಟಿದ ಸಾವಿನ ಸಂಖ್ಯೆ ಎರಡೂ ದೇಶಗಳಲ್ಲಿ ನಡೆಯುತ್ತಿರುವ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 3 ಸಾವಿರ ದಾಟಿದೆ ಎಂದು ತಿಳಿದುಬಂದಿದೆ. ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾರಣ ಸಾವಿನ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ ಎನ್ನಲಾಗಿದೆ. ಇಸ್ರೇಲ್‌ನಲ್ಲೂ ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. “ನಾವು ಯುದ್ಧ ಆರಂಭಿಸಿಲ್ಲ. ಆದರೆ ಮುಗಿಸುತ್ತೇವೆ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈಗಾಗಲೇ ಘೋಷಿಸಿದ್ದಾರೆ.  ಲೆಬನಾನ್, ಸಿರಿಯಾದಿಂದಲೂ ಇಸ್ರೇಲ್ ಮೇಲೆ ದಾಳಿ ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ಮೇಲಿನ ಇಸ್ರೇಲ್ ಸೇನಾದಾಳಿ ಮುಂದುವರೆದಿರುವಂತೆಯೇ ಇತ್ತ ನಿನ್ನೆ ಸಂಜೆ ಸಿರಿಯಾ ಮತ್ತು ಲೆಬನಾನ್ ಪಡೆಗಳ ನಡುವೆಯೂ ತೀವ್ರ ಗುಂಡಿನ ಚಕಮಕಿ ನಡೆದಿದೆ. ಅಂತೆಯೇ ಸಿರಿಯಾದಿಂದ ಇಸ್ರೇಲಿ ಭೂಪ್ರದೇಶದ ಮೇಲೆ ಹಲವು ರಾಕೆಟ್ ದಾಳಿಗಳು ಕೂಡ ನಡೆಯುತ್ತಿದ್ದು, ಸಿರಿಯಾ ದಾಳಿಗೆ ಇಸ್ರೇಲ್ ಸೇನೆ ಕೂಡ ತನ್ನ ಫಿರಂಗಿ ಮತ್ತು ಮಾರ್ಟರ್ ಶೆಲ್‌ಗಳೊಂದಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ಇಸ್ರೇಲಿ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಗಾಜಾಪಟ್ಟಿ ವಶಕ್ಕೆ ಪಡೆದ ಇಸ್ರೇಲ್ ಸೇನೆ; ಪ್ಯಾಲೆಸ್ತೀನ್ ಬೆನ್ನಲ್ಲೇ ಲೆಬನಾನ್, ಸಿರಿಯಾದಿಂದಲೂ ದಾಳಿ!
Linkup
ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಪ್ಯಾಲೆಸ್ತೀನ್ ಮೇಲೆ ಮುಗಿಬಿದ್ದಿರುವ ಇಸ್ರೇಲ್ ಸೇನೆ ಯುದ್ಧ ಆರಂಭವಾದ 5 ದಿನಗಳಲ್ಲೇ ಗಾಜಾಪಟ್ಟಿಯನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಟೆಲ್ ಅವೀವ್: ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಪ್ಯಾಲೆಸ್ತೀನ್ ಮೇಲೆ ಮುಗಿಬಿದ್ದಿರುವ ಇಸ್ರೇಲ್ ಸೇನೆ ಯುದ್ಧ ಆರಂಭವಾದ 5 ದಿನಗಳಲ್ಲೇ ಗಾಜಾಪಟ್ಟಿಯನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ದಾಳಿಯಿಂದ ಕಂಗೆಟ್ಟಿರುವ ಇಸ್ರೇಲ್ ಮೇಲೆ ಇದೀಗ ಬಹು ರಾಷ್ಟ್ರೀಯ ದಾಳಿ ನಡೆಯುತ್ತಿದ್ದು, ಪ್ಯಾಲೆಸ್ತೀನ್ ನೊಂದಿಗಿನ ಯುದ್ಧ ಚಾಲ್ತಿಯಲ್ಲಿರುವಂತೆ ಮತ್ತೊಂದು ಬದಿಯಲ್ಲಿ ಲೆಬನಾನ್ ಮತ್ತು ಸಿರಿಯಾ ದೇಶಗಳೂ ಕೂಡ ಗಡಿಯಲ್ಲಿ ಇಸ್ರೇಲ್ ಸೇನೆ ಮೇಲೆ ದಾಳಿ ನಡೆಸಿವೆ. ಇದನ್ನೂ ಓದಿ: ಹಮಾಸ್ ಉಗ್ರಗಾಮಿಗಳಿಂದ ಕನಿಷ್ಠ 14 ಮಂದಿ ಅಮೆರಿಕನ್ನರ ಸಾವು, ಇಸ್ರೇಲ್ ನಲ್ಲಿ ಒತ್ತೆಯಾಳಾಗಿರುವ ಅಮೆರಿಕ ಪ್ರಜೆಗಳು ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು ದಿನೇದಿನೆ (Israel Palestine War) ಕಾವೇರುತ್ತಿದೆ. ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ ಉಗ್ರರು, ಗಾಜಾಪಟ್ಟಿ ಮೇಲೆ ಇಸ್ರೇಲ್‌ ಸೇನೆಯು ನಿರಂತರವಾಗಿ ದಾಳಿ ನಡೆಸುತ್ತಿದೆ. ಹಮಾಸ್‌ ಉಗ್ರರನ್ನು (Hamas Terrorists) ನಿರ್ನಾಮ ಮಾಡಿಯೇ ತೀರುತ್ತೇವೆ ಎಂದು ಪಣ ತೊಟ್ಟಿರುವ ಇಸ್ರೇಲ್‌ ಈಗ ತನ್ನ ದಾಳಿ ತೀವ್ರಗೊಳಿಸಿದೆ. ಹಮಾಸ್ ಉಗ್ರರಿಂದ ಗಡಿ ತೆಕ್ಕೆಗೆ ಪಡೆದ ಇಸ್ರೇಲ್ ಸೇನೆ ಇದೀಗ ತಾಜಾ ಬೆಳವಣಿಗೆಯಲ್ಲಿ ಗಾಜಾಪಟ್ಟಿಯನ್ನು ನಾವು ವಶಪಡಿಸಿಕೊಂಡಿದ್ದೇವೆ ಎಂದು ಇಸ್ರೇಲ್ ಘೋಷಿಸಿದೆ. ರಾತ್ರೋರಾತ್ರಿ ಸುಮಾರು 200 ಕಟ್ಟಡಗಳನ್ನು ಗುರಿಯಾಗಿಸಿ ಇಸ್ರೇಲ್‌ನ ಯುದ್ಧವಿಮಾನಗಳು ಗಾಜಾಪಟ್ಟಿ ಮೇಲೆ ದಾಳಿ ನಡೆಸಿದ್ದು, ಇಡೀ ಗಾಜಾ ನಮ್ಮ ವಶವಾಗಿದೆ ಎಂದು ಇಸ್ರೇಲ್‌ ತಿಳಿಸಿದೆ. ಹಮಾಸ್‌ ಉಗ್ರರ ಕಟ್ಟಡಗಳು ಸೇರಿ ಪ್ರಮುಖ ಕಟ್ಟಡಗಳನ್ನು ಇಸ್ರೇಲೆ ಧರೆಗುರುಳಿಸಿದೆ. ಮತ್ತೊಂದೆಡೆ, ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಡೆಸಿದ ದಾಳಿಗೆ 1.8 ಲಕ್ಷ ನಾಗರಿಕರು ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇದು ಇಸ್ರೇಲ್‌ ದಾಳಿಯ ತೀವ್ರತೆಗೆ ಸಾಕ್ಷಿಯಾಗಿದೆ.  ಇದನ್ನೂ ಓದಿ: ಇಸ್ರೇಲ್ ನಲ್ಲಿ 40 ಶಿಶುಗಳ ಶಿರಚ್ಛೇದ ಮಾಡಿದ ಹಮಾಸ್ ಉಗ್ರರು 3 ಸಾವಿರ ದಾಟಿದ ಸಾವಿನ ಸಂಖ್ಯೆ ಎರಡೂ ದೇಶಗಳಲ್ಲಿ ನಡೆಯುತ್ತಿರುವ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 3 ಸಾವಿರ ದಾಟಿದೆ ಎಂದು ತಿಳಿದುಬಂದಿದೆ. ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾರಣ ಸಾವಿನ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ ಎನ್ನಲಾಗಿದೆ. ಇಸ್ರೇಲ್‌ನಲ್ಲೂ ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. “ನಾವು ಯುದ್ಧ ಆರಂಭಿಸಿಲ್ಲ. ಆದರೆ ಮುಗಿಸುತ್ತೇವೆ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈಗಾಗಲೇ ಘೋಷಿಸಿದ್ದಾರೆ.  ಲೆಬನಾನ್, ಸಿರಿಯಾದಿಂದಲೂ ಇಸ್ರೇಲ್ ಮೇಲೆ ದಾಳಿ ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ಮೇಲಿನ ಇಸ್ರೇಲ್ ಸೇನಾದಾಳಿ ಮುಂದುವರೆದಿರುವಂತೆಯೇ ಇತ್ತ ನಿನ್ನೆ ಸಂಜೆ ಸಿರಿಯಾ ಮತ್ತು ಲೆಬನಾನ್ ಪಡೆಗಳ ನಡುವೆಯೂ ತೀವ್ರ ಗುಂಡಿನ ಚಕಮಕಿ ನಡೆದಿದೆ. ಅಂತೆಯೇ ಸಿರಿಯಾದಿಂದ ಇಸ್ರೇಲಿ ಭೂಪ್ರದೇಶದ ಮೇಲೆ ಹಲವು ರಾಕೆಟ್ ದಾಳಿಗಳು ಕೂಡ ನಡೆಯುತ್ತಿದ್ದು, ಸಿರಿಯಾ ದಾಳಿಗೆ ಇಸ್ರೇಲ್ ಸೇನೆ ಕೂಡ ತನ್ನ ಫಿರಂಗಿ ಮತ್ತು ಮಾರ್ಟರ್ ಶೆಲ್‌ಗಳೊಂದಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ಇಸ್ರೇಲಿ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಗಾಜಾಪಟ್ಟಿ ವಶಕ್ಕೆ ಪಡೆದ ಇಸ್ರೇಲ್ ಸೇನೆ; ಪ್ಯಾಲೆಸ್ತೀನ್ ಬೆನ್ನಲ್ಲೇ ಲೆಬನಾನ್, ಸಿರಿಯಾದಿಂದಲೂ ದಾಳಿ!