ಏಷ್ಯನ್ ಗೇಮ್ಸ್: ಭಾರತ ಕ್ರಿಕೆಟ್ ತಂಡಕ್ಕೆ ಚಿನ್ನದ ಪದಕ!

ಏಷ್ಯನ್ ಗೇಮ್ಸ್ ನಲ್ಲಿ ಭಾರತ ಕ್ರಿಕೆಟ್ ತಂಡ ಚೊಚ್ಚಲ ಚಿನ್ನದ ಪದಕ ಗೆದ್ದಿದೆ.  ಝೆಜಿಯಾಂಗ್: ಏಷ್ಯನ್ ಗೇಮ್ಸ್ ನಲ್ಲಿ ಭಾರತ ಕ್ರಿಕೆಟ್ ತಂಡ ಚೊಚ್ಚಲ ಚಿನ್ನದ ಪದಕ ಗೆದ್ದಿದೆ.  ಅಫ್ಘಾನಿಸ್ಥಾನದ ವಿರುದ್ಧ ಫೈನಲ್ಸ್ ಪಂದ್ಯ ಮಳೆಯ ಕಾರಣ ರದ್ದಾಗಿದ್ದು, ಹೆಚ್ಚಿನ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದರಿಂದ ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡವನ್ನು ವಿಜೇತ ಎಂದು ಘೋಷಿಸಲಾಗಿದೆ.  ಅಫ್ಘಾನಿಸ್ಥಾನ ತಂಡ 18.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 112 ರನ್ ಗಳನ್ನು ಗಳಿಸಿತ್ತು. ಈ ವೇಳೆ ಮಳೆಯ ಕಾರಣ ಮುಂದೂಡಲ್ಪಟ್ಟ ಪಂದ್ಯ ಮತ್ತೆ ಆರಂಭವಾಗಲಿಲ್ಲ. ಝೆಜಿಯಾಂಗ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಕ್ರಿಕೆಟ್ ಫೀಲ್ಡ್ ನಲ್ಲಿ ಪಂದ್ಯ ನಡೆದಿತ್ತು.  ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023: ಮಹಿಳೆಯರ ಕಬಡ್ಡಿಯಲ್ಲಿ ಚಿನ್ನ, ಭಾರತ 100 ಪದಕಗಳ ಸಾಧನೆ! ಪ್ರಧಾನಿ ಮೋದಿ ಅಭಿನಂದನೆ ಭಾರತ ಈ ಪಂದ್ಯದಲ್ಲಿ ವಿಜೇತ ತಂಡ ಎಂದು ಘೋಷಣೆಯಾಗಿ ಏಷ್ಯನ್ ಗೇಮ್ಸ್ ನ ಕ್ರಿಕೆಟ್ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಗೆದ್ದಿದೆ. 

ಏಷ್ಯನ್ ಗೇಮ್ಸ್: ಭಾರತ ಕ್ರಿಕೆಟ್ ತಂಡಕ್ಕೆ ಚಿನ್ನದ ಪದಕ!
Linkup
ಏಷ್ಯನ್ ಗೇಮ್ಸ್ ನಲ್ಲಿ ಭಾರತ ಕ್ರಿಕೆಟ್ ತಂಡ ಚೊಚ್ಚಲ ಚಿನ್ನದ ಪದಕ ಗೆದ್ದಿದೆ.  ಝೆಜಿಯಾಂಗ್: ಏಷ್ಯನ್ ಗೇಮ್ಸ್ ನಲ್ಲಿ ಭಾರತ ಕ್ರಿಕೆಟ್ ತಂಡ ಚೊಚ್ಚಲ ಚಿನ್ನದ ಪದಕ ಗೆದ್ದಿದೆ.  ಅಫ್ಘಾನಿಸ್ಥಾನದ ವಿರುದ್ಧ ಫೈನಲ್ಸ್ ಪಂದ್ಯ ಮಳೆಯ ಕಾರಣ ರದ್ದಾಗಿದ್ದು, ಹೆಚ್ಚಿನ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದರಿಂದ ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡವನ್ನು ವಿಜೇತ ಎಂದು ಘೋಷಿಸಲಾಗಿದೆ.  ಅಫ್ಘಾನಿಸ್ಥಾನ ತಂಡ 18.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 112 ರನ್ ಗಳನ್ನು ಗಳಿಸಿತ್ತು. ಈ ವೇಳೆ ಮಳೆಯ ಕಾರಣ ಮುಂದೂಡಲ್ಪಟ್ಟ ಪಂದ್ಯ ಮತ್ತೆ ಆರಂಭವಾಗಲಿಲ್ಲ. ಝೆಜಿಯಾಂಗ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಕ್ರಿಕೆಟ್ ಫೀಲ್ಡ್ ನಲ್ಲಿ ಪಂದ್ಯ ನಡೆದಿತ್ತು.  ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023: ಮಹಿಳೆಯರ ಕಬಡ್ಡಿಯಲ್ಲಿ ಚಿನ್ನ, ಭಾರತ 100 ಪದಕಗಳ ಸಾಧನೆ! ಪ್ರಧಾನಿ ಮೋದಿ ಅಭಿನಂದನೆ ಭಾರತ ಈ ಪಂದ್ಯದಲ್ಲಿ ವಿಜೇತ ತಂಡ ಎಂದು ಘೋಷಣೆಯಾಗಿ ಏಷ್ಯನ್ ಗೇಮ್ಸ್ ನ ಕ್ರಿಕೆಟ್ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಗೆದ್ದಿದೆ.  ಏಷ್ಯನ್ ಗೇಮ್ಸ್: ಭಾರತ ಕ್ರಿಕೆಟ್ ತಂಡಕ್ಕೆ ಚಿನ್ನದ ಪದಕ!