ಕೋವಿಡ್‌ ಹೊರತಾಗಿಯೂ ಆರ್ಥಿಕ ಬೆಳವಣಿಗೆ: ನಿರ್ಮಲಾ ಸೀತಾರಾಮನ್‌

ಕೋವಿಡ್‌-19 ನಿರ್ವಹಣೆಯಲ್ಲಿ ಉದ್ದಿಮೆ ವಲಯಕ್ಕಿರುವ ಕಳವಳದ ಬಗ್ಗೆ ಮಾಹಿತಿ ತರಿಸಿಕೊಳ್ಳಲಾಗಿದೆ. ಕೋವಿಡ್‌ ಎರಡನೇ ಅಲೆಯ ಹೊರತಾಗಿಯೂ ಈ ವರ್ಷ ಆರ್ಥಿಕ ಬೆಳವಣಿಗೆ ಉಂಟಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಕೋವಿಡ್‌ ಹೊರತಾಗಿಯೂ ಆರ್ಥಿಕ ಬೆಳವಣಿಗೆ: ನಿರ್ಮಲಾ ಸೀತಾರಾಮನ್‌
Linkup
ಹೊಸದಿಲ್ಲಿ: ನಿರ್ವಹಣೆಯಲ್ಲಿ ಉದ್ದಿಮೆ ವಲಯಕ್ಕಿರುವ ಕಳವಳದ ಬಗ್ಗೆ ಮಾಹಿತಿ ತರಿಸಿಕೊಳ್ಳಲಾಗಿದೆ. ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಜತೆಗೂಡಿ ಜನರ ಜೀವ ರಕ್ಷಣೆ ಮತ್ತು ಜೀವನ ನಿರ್ವಹಣೆ ಎರಡಕ್ಕೂ ಆದ್ಯತೆ ನೀಡಲಿದೆ. ಕೋವಿಡ್‌ ಎರಡನೇ ಅಲೆಯ ಹೊರತಾಗಿಯೂ ಈ ವರ್ಷ ಆರ್ಥಿಕ ಬೆಳವಣಿಗೆ ಉಂಟಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ದೇಶದ ಆರ್ಥಿಕತೆಗೆ ಕೋವಿಡ್‌-19 ಎರಡನೇ ಅಲೆಯಿಂದ ಆಗುವ ಅಪಾಯಗಳ ಬಗ್ಗೆ ಉದ್ಯಮ ವಲಯದ ಪ್ರಮುಖರಿಂದ ಸರಕಾರವು ಅಭಿಪ್ರಾಯ ಸಂಗ್ರಹಿಸಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ''ಬಿಸಿನೆಸ್‌/ವಾಣಿಜ್ಯ ಮಂಡಳಿಗಳ ಪ್ರಮುಖರ ಜತೆ ಟೆಲಿಫೋನ್‌ ಮೂಲಕ ಮಾತುಕತೆ ನಡೆಸಿದ್ದೇನೆ. ಉದ್ಯಮದ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡುತ್ತಿದ್ದೇವೆ,'' ಎಂದು ಅವರು ಹೇಳಿದರು. ಸಿಐಐ ಅಧ್ಯಕ್ಷ ಉದಯ್‌ ಕೋಟಕ್‌, ಫಿಕ್ಕಿ ಅಧ್ಯಕ್ಷ ಉದಯ್‌ ಶಂಕರ್‌, ಅಸೋಚಮ್‌ ಅಧ್ಯಕ್ಷ ವಿನೀತ್‌ ಅಗರವಾಲ್‌, ಟಾಟಾ ಸ್ಟೀಲ್‌ ಎಂಡಿ ಟಿ.ವಿ.ನರೇಂದ್ರನ್‌, ಎಲ್‌ಆ್ಯಂಡ್‌ಟಿ ಅಧ್ಯಕ್ಷ ಎ.ಎಂ.ನಾಯಕ್‌, ಟಿಸಿಎಸ್‌ ಎಂಡಿ ರಾಜೇಶ್‌ ಗೋಪಿನಾಥನ್‌, ಮಾರುತಿ ಸುಜುಕಿ ಅಧ್ಯಕ್ಷ ಆರ್‌.ಸಿ.ಭಾರ್ಗವ, ಟಿವಿಎಸ್‌ ಗ್ರೂಪ್‌ ಚೇರ್ಮನ್‌ ವೇಣು ಶ್ರೀನಿವಾಸನ್‌, ಹೀರೋ ಮೋಟೊ ಕಾಪ್‌ರ್‍ ಎಂಡಿ ಪವನ್‌ ಮುಂಜಾಲ್‌ ಸೇರಿದಂತೆ ಉದ್ಯಮದ ಪ್ರಮುಖರ ಜತೆ ವಿತ್ತ ಸಚಿವರು ಮಾತುಕತೆ ನಡೆಸಿದ್ದಾರೆ. ಕೋವಿಡ್‌ ಪ್ರಕರಣಗಳು ಏರುತ್ತಿದ್ದು, ಇದರಿಂದ ಉದ್ಯಮದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಚರ್ಚಿಸಿದ್ದಾರೆ. ಕೋವಿಡ್‌ ಪರಿಣಾಮದಿಂದಾಗಿ ಕಳೆದ ಹಣಕಾಸು ವರ್ಷದ ಏಪ್ರಿಲ್‌-ಜೂನ್‌ನ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಮೈನಸ್‌ 23.9 ಪರ್ಸೆಂಟ್‌ಗೆ ಕುಸಿದಿತ್ತು. ಈ ವರ್ಷ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲೇ ಬಿಕ್ಕಟ್ಟು ಮತ್ತೆ ತಲೆದೋರಿದೆ. ''ದೇಶವ್ಯಾಪಿ ಲಾಕ್‌ಡೌನ್‌ ಮಾಡುವ ಉದ್ದೇಶ ಕೇಂದ್ರ ಸರಕಾರಕ್ಕಿಲ್ಲ,'' ಎಂದು ಕಳೆದ ವಾರವಷ್ಟೇ ವಿತ್ತ ಸಚಿವರು ಹೇಳಿದ್ದರು.