ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್: ನಿಮಗೆ ಜನ್ಮದಿನದ ಶುಭಾಶಯಗಳು:

ಕರ್ನಾಟಕದ ಸಿನಿರಂಗದಲ್ಲಿ ಬಾದ್ ಶಾ ಎಂದೇ ಖ್ಯಾತಿ ಪಡೆದಿರುವ ಕಂಚಿನ ಕಂಠದ ನಟ ಕಿಚ್ಚ ಸುದೀಪ್, ಚಿತ್ರರಂಗ ಮಾತ್ರವಲ್ಲದೆ, ಅಭಿಮಾನಿಗಳ ಪಾಲಿಗೆ ದೇವರಂತೆ ಕಂಡವರು.

ಅಭಿನಯ ಚಕ್ರವರ್ತಿ   ಕಿಚ್ಚ ಸುದೀಪ್:   ನಿಮಗೆ ಜನ್ಮದಿನದ ಶುಭಾಶಯಗಳು:
Linkup

ಸುದೀಪ ಅವರು ಇಂದಿನ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗದಲ್ಲಿ ಸಂಜೀವ್ ಮಂಜಪ್ಪ ಮತ್ತು ಸರೋಜಾ ದಂಪತಿಗಳಿಗೆ 2 ಸೆಪ್ಟೆಂಬರ್ 1971 ರಂದು ಸುದೀಪ್ ಆಗಿ ಜನಿಸಿದರು . ಈ ಕುಟುಂಬ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರದಿಂದ ಶಿವಮೊಗ್ಗಕ್ಕೆ ವಲಸೆ ಬಂದಿತ್ತು . ಅವರು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು . ಅವರು ಅಂಡರ್-17 ಕ್ರಿಕೆಟ್‌ನಲ್ಲಿ ಕಾಲೇಜನ್ನು ಪ್ರತಿನಿಧಿಸಿದರು . ಉಲ್ಲೇಖದ ಅಗತ್ಯವಿದೆ ಅವರು ಮುಂಬೈನ ರೋಷನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್‌ನಲ್ಲಿ ವ್ಯಾಸಂಗ ಮಾಡಿದರು , ಅಲ್ಲಿ ಅವರು ತಮ್ಮ 'ನಾಚಿಕೆ'ಯನ್ನು ಜಯಿಸಿದರು. 

ಸುದೀಪ್ ಸಂಜೀವ್ ಜನನ 2 ಸೆಪ್ಟೆಂಬರ್ 1971,  ಸುದೀಪ ಎಂದು ಏಕನಾಮದಲ್ಲಿ ಕರೆಯಲಾಗುತ್ತದೆ , ಒಬ್ಬ ಭಾರತೀಯ ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ದೂರದರ್ಶನ ನಿರೂಪಕ ಮತ್ತು ಗಾಯಕ, ಇವರು ಪ್ರಾಥಮಿಕವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ಹಿಂದಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಕನ್ನಡ ಸಿನಿರಂಗಕ್ಕೆ ಮೊದಲ ಬಾರಿಗೆ ಕಾಲಿಟ್ಟ ಕಿಚ್ಚನನ್ನು ಕೆಲವರು ಐರನ್ ಲೆಗ್ ಎಂದು ಕರೆದಿದ್ದರು. ಅಭಿನಯಿಸಿದ ಎರಡು ಸಿನಿಮಾಗಳು ಸಹ ರಿಲೀಸ್ ಆಗಲೇ ಇಲ್ಲ. ಈ ಸಂದರ್ಭದಲ್ಲಿ ಅನೇಕರು ಕಿಚ್ಚನನ್ನು ಹೀಯಾಳಿಸಿದ್ದೂ ಉಂಟು.
ಕರ್ನಾಟಕದ ಸಿನಿರಂಗದಲ್ಲಿ ಬಾದ್ ಶಾ ಎಂದೇ ಖ್ಯಾತಿ ಪಡೆದಿರುವ ಕಂಚಿನ ಕಂಠದ ನಟ ಕಿಚ್ಚ ಸುದೀಪ್, ಚಿತ್ರರಂಗ ಮಾತ್ರವಲ್ಲದೆ, ಅಭಿಮಾನಿಗಳ ಪಾಲಿಗೆ ದೇವರಂತೆ ಕಂಡವರು. ಇಂದು ನಮ್ಮೆಲ್ಲರ ನೆಚ್ಚಿನ ಕಿಚ್ಚನಿಗೆ 49ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕಿಚ್ಚ ಸಿನಿರಂಗದಲ್ಲಿ ಅದೆಷ್ಟೋ ಕಷ್ಟದ ಸಾಧನೆಗಳನ್ನು ದಾಟಿ ಬಂದವರು. ಇವರ ಈ ಹೆಜ್ಜೆಗುರುತು ಅದೆಷ್ಟೋ ಜನರಿಗೆ ಸ್ಪೂರ್ತಿ ಎನ್ನಬಹುದು. 
ಕನ್ನಡ ಚಿತ್ರರಂಗದ ಪರಿಪೂರ್ಣ ನಟ ಸುದೀಪ್ ಎಂದರೆ ತಪ್ಪಾಗಲಾರದು. ಇಂತಹ ನಟನಿಗೆ ಸಿನಿರಂಗದ ಗಣ್ಯರು, ಆಪ್ತರು, ಅಭಿಮಾನಿಗಳು ಸೇರಿದಂತೆ ಅನೇಕರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇನ್ನು ಕಳೆದ ಎರಡು ವರ್ಷಗಳಿಂದ ಕಿಚ್ಚ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಆಚರಣೆ ಮಾಡುವುದು ಬೇಡ ಎಂದು ಸ್ವತಃ ಸುದೀಪ್ ತಿಳಿಸಿದ್ದರು. ಆದರೆ ಈ ಬಾರಿ ಮನೆಯ ಬಳಿಯೇ ಅಭಿಮಾನಿಗಳು ಜಮಾಯಿಸಿದ್ದು, ತಡರಾತ್ರಿಯೇ ನೆಚ್ಚಿನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
ಕನ್ನಡ ಸಿನಿರಂಗಕ್ಕೆ ಮೊದಲ ಬಾರಿಗೆ ಕಾಲಿಟ್ಟ ಕಿಚ್ಚನನ್ನು ಕೆಲವರು ಐರನ್ ಲೆಗ್ ಎಂದು ಕರೆದಿದ್ದರು. ಅಭಿನಯಿಸಿದ ಎರಡು ಸಿನಿಮಾಗಳು ಸಹ ರಿಲೀಸ್ ಆಗಲೇ ಇಲ್ಲ. ಈ ಸಂದರ್ಭದಲ್ಲಿ ಅನೇಕರು ಕಿಚ್ಚನನ್ನು ಹೀಯಾಳಿಸಿದ್ದೂ ಉಂಟು. ಇವೆಲ್ಲದಕ್ಕೂ ಧೃತಿಗೆಡದ ಮಾಣಿಕ್ಯ, ಸ್ಪರ್ಶ ಸಿನಿಮಾದ ಮೂಲಕ ಸಿನಿರಂಗಕ್ಕೆ ಆಗಮಿಸಿ ತನ್ನ ಛಾಪನ್ನು ಮೂಡಿಸಿದರು, ಅಷ್ಟೇ ಅಲ್ಲದೆ, ಭರವಸೆಯ ನಾಯಕ ಎಂಬ ಖ್ಯಾತಿಯನ್ನೂ ಪಡೆದರು.