ಕೋವಿಡ್‌ ಬಿಕ್ಕಟ್ಟಿನಲ್ಲೂ ಭಾರತದ ಆರ್ಥಿಕ ಬೆಳವಣಿಗೆ ಆಶಾದಾಯಕ, ಜಿಡಿಪಿ ಶೇ.11ರ ಬೆಳವಣಿಗೆ ನಿರೀಕ್ಷೆ- ಎಡಿಬಿ

ಪ್ರಸಕ್ತ ಹಣಕಾಸು ವರ್ಷ 2021ರಲ್ಲಿ ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆ ಆಶಾದಾಯಕವಾಗಿ ಇರಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಅಂದಾಜು ಮಾಡಿದೆ.

ಕೋವಿಡ್‌ ಬಿಕ್ಕಟ್ಟಿನಲ್ಲೂ ಭಾರತದ ಆರ್ಥಿಕ ಬೆಳವಣಿಗೆ ಆಶಾದಾಯಕ, ಜಿಡಿಪಿ ಶೇ.11ರ ಬೆಳವಣಿಗೆ ನಿರೀಕ್ಷೆ- ಎಡಿಬಿ
Linkup
ಹೊಸದಿಲ್ಲಿ: ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆ ಆಶಾದಾಯಕವಾಗಿರಲಿದೆ. ಪ್ರಸಕ್ತ ಹಣಕಾಸು ವರ್ಷ 2021ರಲ್ಲಿ (2021ರ ಏ.1ರಿಂದ-2022ರ ಮಾ.31) ಬೆಳವಣಿಗೆ ಶೇ.11ಕ್ಕೆ ಏರಿಕೆಯಾಗಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಅಂದಾಜು ಮಾಡಿದೆ. ಆದಾಗ್ಯೂ, ಕೋವಿಡ್‌ ಎರಡನೇ ಅಲೆ ತೀವ್ರಗೊಂಡರೆ ಆರ್ಥಿಕ ಚೇತರಿಕೆಗೆ ಹೊಡೆತ ಬೀಳಲಿದೆ ಎಂದು ಅಭಿಪ್ರಾಯಪಟ್ಟಿದೆ. ಸಾರ್ವಜನಿಕ ಹೂಡಿಕೆಯ ಹೆಚ್ಚಳ, ಲಸಿಕೆ ಅಭಿಯಾನ, ನಾನಾ ವಲಯಗಳಲ್ಲಿ ದೇಶೀಯವಾಗಿ ವೃದ್ಧಿಯಾಗುತ್ತಿರುವ ಬೇಡಿಕೆ ಮತ್ತಿತರ ಅಂಶಗಳು ಭಾರತದ ಆರ್ಥಿಕತೆ ವೃದ್ಧಿಗೆ ಪೂರಕವಾಗಲಿವೆ ಎಂದು 'ಏಷ್ಯಾ ಅಭಿವೃದ್ಧಿ ಮುನ್ನೋಟ (ಎಡಿಒ)-2021'ರ ವರದಿಯಲ್ಲಿ ಎಡಿಬಿ ಹೇಳಿದೆ. "ಲಸಿಕೆ ಅಭಿಯಾನವು ವಿಫಲವಾಗಿ ಕೋವಿಡ್‌ ನಿಯಂತ್ರಿಸುವಲ್ಲಿ ಸೋತರೆ, ಭಾರತದ ಆರ್ಥಿಕತೆ ಕುಸಿಯಲಿದೆ. ಜಾಗತಿಕ ಆರ್ಥಿಕ ಸ್ಥಿತಿಯು ಬಿಗಡಾಯಿಸಿದರೆ, ಭಾರತಕ್ಕೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ. ಭಾರತದ ಮಾರುಕಟ್ಟೆಯಲ್ಲಿ ಬಡ್ಡಿ ದರದ ಮೇಲೆ ಒತ್ತಡ ಸೃಷ್ಟಿಯಾಗಲಿದೆ. ಇದರಿಂದ ಆರ್ಥಿಕತೆ ಹಳಿ ತಪ್ಪಬಹುದು,'' ಎಂದು ಎಡಿಬಿ ಹೇಳಿದೆ. ಮುಂದಿನ ಹಣಕಾಸು ವರ್ಷ 2022ರ ಮುನ್ನೋಟವನ್ನೂ ಎಡಿಬಿ ಪ್ರಕಟಿಸಿದ್ದು, ಶೇ.7ರ ಜಿಡಿಪಿಯನ್ನು ಅಂದಾಜಿಸಲಾಗಿದೆ. ದಕ್ಷಿಣ ಏಷ್ಯಾದ ಜಿಡಿಪಿ ಶೇ.9.5ಕ್ಕೆ ಮತ್ತೆ ಏರಲಿದೆ. 2020ರಲ್ಲಿ ಜಿಡಿಪಿ ಕೇವಲ ಶೇ.6ರಷ್ಟಿತ್ತು. ಚೀನಾ ಜಿಡಿಪಿ ಶೇ. 8.1ಹಣಕಾಸು ವರ್ಷ 2021ರಲ್ಲಿ ಚೀನಾದ ಜಿಡಿಪಿ ಶೇ.8.1ಕ್ಕೆ ಏರಲಿದೆ. ಆದರೆ, 2022ರಲ್ಲಿ ಶೇ.5.5ರಷ್ಟು ಬೆಳವಣಿಗೆ ದಾಖಲಾಗಲಿದೆ ಎಂದು ಎಡಿಬಿ ಹೇಳಿದೆ.