ಕೋವಿಡ್‌ ಚಿಕಿತ್ಸೆಗೆ ಬಿಎಂಸಿಆರ್‌ಐ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ 200 ಬೆಡ್‌ ಮೀಸಲು!

ಸಕಲ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಬಿಎಂಸಿಆರ್‌ಐ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ. ಈ ಸಂಬಂಧ ಆಸ್ಪತ್ರೆಯ ವಿಶೇಷಾಧಿಕಾರಿ ಶನಿವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಕೋವಿಡ್‌ ಚಿಕಿತ್ಸೆಗೆ ಬಿಎಂಸಿಆರ್‌ಐ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ 200 ಬೆಡ್‌ ಮೀಸಲು!
Linkup
ಬೆಂಗಳೂರು: ಸಕಲ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ()ಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ. ಈ ಸಂಬಂಧ ಆಸ್ಪತ್ರೆಯ ವಿಶೇಷಾಧಿಕಾರಿಯವರು ಶನಿವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ಕೋವಿಡ್‌ ಸೋಂಕು ಉಲ್ಬಣಗೊಂಡು ರೋಗಿಗಳಿಗೆ ಐಸಿಯು ಹಾಸಿಗೆ ಕೊರತೆ ಎದುರಾಗಿದ್ದರೂ, ಸುಸಜ್ಜಿತ ಸೌಲಭ್ಯ ಇರುವ ಬಿಎಂಸಿಆರ್‌ಐ ಸೂಪರ್‌ ಸ್ಪೆಷಾಲಿಸಿ ಆಸ್ಪತ್ರೆಯನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಬಿಟ್ಟುಕೊಡಲು ಅಲ್ಲಿನ ಆಡಳಿತಾಧಿಕಾರಿಗಳೇ ಅಡ್ಡಿಯಾಗಿದ್ದರು. 200 ಹಾಸಿಗೆ ಇರುವ ಈ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಐಸಿಯು ಬೆಡ್‌ಗಳಾಗಿ ಪರಿವರ್ತಿಸಬಹುದು. ಇಂಥ ತುರ್ತು ಸಂದರ್ಭದಲ್ಲಿ ಈ ಆಸ್ಪತ್ರೆಯಲ್ಲಿರುವ ಸೌಲಭ್ಯವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಬಹುದು ಎಂಬ ಸಲಹೆಯೊಂದಿಗೆ 'ವಿಜಯ ಕರ್ನಾಟಕ' ಶನಿವಾರ ವಿಶೇಷ ವರದಿ ಪ್ರಕಟಿಸಿ ಸರಕಾರದ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯು, ಬಿಎಂಸಿಆರ್‌ಐ ಆಸ್ಪತ್ರೆಯನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಮೀಸಲಿಡುವುದಾಗಿ ತಕ್ಷಣ ಆದೇಶ ಹೊರಡಿಸಿದೆ. ಪ್ರತಿಷ್ಠಿಯ ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡಲಾಗಿದೆ. ಅದೇ ಆವರಣದಲ್ಲಿರುವ ಬಿಎಂಸಿಆರ್‌ಐ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಈಗ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿರುವುದರಿಂದ ಜನರಿಗೆ ಚಿಕಿತ್ಸೆಗೆ ಹೆಚ್ಚು ಅನುಕೂಲವಾಗಲಿದೆ. ಬಿಎಂಆರ್‌ಸಿಐ ಆರು ವಿಭಾಗದ ಸಾಮಾನ್ಯ ಒಳ ರೋಗಿ ಹಾಗೂ ಹೊರ ರೋಗಿಗಳ ದಾಖಲಾತಿ ಚಿಕಿತ್ಸೆ ಸ್ಥಗಿತಗೊಳಿಸುವಂತೆ ಸುತ್ತೋಲೆಯಲ್ಲಿತಿಳಿಸಲಾಗಿದೆ. ಜತೆಗೆ ಎಲ್ಲಾವಿಭಾಗದ ಪ್ರಾಧ್ಯಾಪಕರು ಹಾಗೂ ವಿಭಾಗಾದ ಮುಖ್ಯಸ್ಥರುಗಳು ತಮ್ಮ ಮೌಲ್ಯ ಉಳ್ಳಂತಹ ವಸ್ತುಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿಕೊಳ್ಳಲು ಸೂಚಿಸಿದೆ. ಸುಸಜ್ಜಿತ ವ್ಯವಸ್ಥೆ ಇದೆ ಕೋವಿಡ್‌ ಆಸ್ಪತ್ರೆಯಾಗಿ ಬದಲಾಯಿಸಿದ್ದರಿಂದ ತಕ್ಷಣಕ್ಕೆ 200 ಹಾಸಿಗೆಗಳ ಆಕ್ಸಿಜನ್‌ ಬೆಡ್‌ಗಳನ್ನು ತೆರೆಯಬಹುದು. ಆಸ್ಪತ್ರೆಯ ಆವರಣದಲ್ಲಿಯೇ ಆಕ್ಸಿಜನ್‌ ಜನರೇಟ್‌ ವ್ಯವಸ್ಥೆ ಇದುದ್ದರಿಂದ ಆಕ್ಸಿಜನ್‌ ಪೂರೈಕೆಯ ಸಮಸ್ಯೆಯಾಗಲಿ, ರೆಮಿಡಿಸಿವಿರ್‌ ಔಷಧ ಮತ್ತು ಸಿಬ್ಬಂದಿಗಳ ಕೊರತೆ ಇಲ್ಲದ ಸುಸಜ್ಜಿತ ಕೋವಿಡ್‌ ಆಸ್ಪತ್ರೆ ಇದಾಗಲಿದೆ. ಇದರಲ್ಲಿರುವ ಆರು ಸೂಪರ್‌ ಸ್ಪೆಷಾಲಿಟಿ ವಿಭಾಗಗಳ ಪೈಕಿ ಪ್ರತಿ ವಿಭಾಗದಲ್ಲಿ 5 ಐಸಿಯು ಮತ್ತು 5 ಎಚ್‌ಡಿಯು (ಹೈ ಡಿಪೆಂಡೆನ್ಸಿ ಯೂನಿಟ್‌) ಹಾಸಿಗೆಗಳಿವೆ. ತುರ್ತಾಗಿ 60 ಐಸಿಯು ಹಾಸಿಗೆಗಳು ತಕ್ಷಣ ಲಭ್ಯ ಇದೆ. ಇದನ್ನು ಈ ಕೂಡಲೇ ಬಳಸಿಕೊಂಡು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾಗಿದೆ. ಆಕ್ಸಿಜನ್‌ ಸೌಲಭ್ಯವಿದೆ ಉಳಿದ 140 ಸಾಮಾನ್ಯ ಹಾಸಿಗೆಗಳಿಗೆ ಪೈಪ್‌ಲೈನ್‌ ಮೂಲಕ (ಮ್ಯಾನಿಪೋಲ್ಡ್‌) ಆಮ್ಲಜನಕ ಪೂರೈಕೆ ಮಾಡುವ ಸೌಲಭ್ಯವಿದೆ. ರೋಗಿಗಳಿಗೆ ಆಕ್ಸಿಜನ್‌ ಮಾಸ್ಕ್‌ ಹಾಕಿ ಅಥವಾ ಇನ್ವೆಂಟರಿ ಟ್ಯೂಬ್‌ ಮೂಲಕ ಆಕ್ಸಿಜನ್‌ ಪೂರೈಕೆ ಮಾಡಬಹುದು. ಈ ಎಲ್ಲವನ್ನು ಬಳಸಿಕೊಂಡು ತಕ್ಷಣಕ್ಕೆ ಸುಸಜ್ಜಿತ 200 ಆಕ್ಸಿಜನ್‌ ಹಾಸಿಗೆಗಳನ್ನು ಮಾಡಬಹುದಾಗಿದೆ ಎಂದು ಅಲ್ಲಿನ ಹಿರಿಯ ವೈದ್ಯರು ಮಾಹಿತಿ ನೀಡಿದರು. ಇತರೆ ರೋಗಿಗಳಿಗೆ ಚಿಕಿತ್ಸೆ ಹೇಗೆ? ಈ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದ ನರ ರೋಗ ಚಿಕಿತ್ಸಾ ವಿಭಾಗದವರು ನಿಮ್ಹಾನ್ಸ್‌ಗೆ, ಶಿಶು ಚಿಕಿತ್ಸಾ ವಿಭಾಗದವರು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ, ಪ್ಲಾಸ್ಟಿಕ್‌ ಸರ್ಜರಿ ವಿಭಾಗದವರು ಸಂಜಯ್‌ ಗಾಂಧಿ ಆಸ್ಪತ್ರೆಗೆ, ಉದರ ಶಸ್ತ್ರ ಚಿಕಿತ್ಸಾ ಹಾಗೂ ಯಕೃತ್‌ ಕಸಿ ವಿಭಾಗದವರು ಕೆ.ಸಿ.ಜನರಲ್‌ಗೆ, ಹೃದ್ರೋಗ ಸಮಸ್ಯೆ ಇರುವವರು ಜಯದೇವಕ್ಕೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ.