ಕೋವಿಡ್ ಎರಡನೆಯ ಅಲೆ ಅಬ್ಬರಿಸಲು ನಾವು ಕಾರಣರಲ್ಲ: ಚುನಾವಣಾ ಆಯೋಗ

ದೇಶದಲ್ಲಿ ಎರಡನೆಯ ಅಲೆ ಕೋವಿಡ್ ಹರಡಲು ಚುನಾವಣಾ ಆಯೋಗವೇ ಕಾರಣ ಮತ್ತು ಅದರ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕೆಂಬ ಮದ್ರಾಸ್ ಹೈಕೋರ್ಟ್ ಹೇಳಿಕೆಯನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ನಿರ್ಬಂಧಿಸಬೇಕು ಎಂದು ಆಯೋಗ ಮನವಿ ಮಾಡಿದೆ.

ಕೋವಿಡ್ ಎರಡನೆಯ ಅಲೆ ಅಬ್ಬರಿಸಲು ನಾವು ಕಾರಣರಲ್ಲ: ಚುನಾವಣಾ ಆಯೋಗ
Linkup
: ರಾಜಕೀಯ ಸಮಾವೇಶಗಳನ್ನು ತಡೆಯದೆ ಇರುವುದಕ್ಕಾಗಿ ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು ಎಂಬ ಕೋರ್ಟ್ ಮೌಖಿಕ ಅಭಿಪ್ರಾಯವನ್ನು ಮಾಧ್ಯಮಗಳು ವರದಿ ಮಾಡದಂತೆ ನಿರ್ಬಂಧ ವಿಧಿಸಬೇಕು ಎಂದು ಚುನಾವಣಾ ಆಯೋಗವು ಮದ್ರಾಸ್ ಹೈಕೋರ್ಟ್‌ಗೆ ಮನವಿ ಮಾಡಿದೆ. ನಡೆಯದ ರಾಜ್ಯಗಳಿಗಿಂತ ಮತದಾನ ನಡೆದ ರಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳವಾಗಲು ಚುನಾವಣಾ ಪ್ರಚಾರಗಳು ಪ್ರಮುಖ ಕಾರಣ ಎನ್ನುವುದನ್ನು ಯಾವ ಅಂಶವೂ ಸಾಬೀತುಪಡಿಸಿಲ್ಲ ಎಂದು ಆಯೋಗ ವಾದಿಸಿದೆ. ಏ. 26ರಂದು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದ , ಈಗಿನ ಎರಡನೆಯ ಅಲೆಯ ಪರಿಸ್ಥಿತಿಗೆ ನೀವೇ ಹೊಣೆಗಾರರು. ಹೀಗಾಗಿ ನಿಮ್ಮ ವಿರುದ್ಧ ಕೊಲೆ ಪ್ರಕರಣಗಳನ್ನು ದಾಖಲಿಸಬೇಕು ಎಂದು ಹೇಳಿತ್ತು. ಇದನ್ನು ಮಾಧ್ಯಮಗಳು ವರದಿ ಮಾಡಿದ್ದವು. 'ಈ ವರದಿಗಳು ಚುನಾವಣಾ ಆಯೋಗದ ಹೆಸರಿಗೆ ಕಳಂಕ ಉಂಟುಮಾಡಿವೆ. ಆಯೋಗವು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಚುನಾವಣೆಗಳನ್ನು ನಡೆಸುವ ಸಂವಿಧಾನಾತ್ಮಕ ಜವಾಬ್ದಾರಿಗಳನ್ನು ಪಾಲಿಸಿದೆ' ಎಂದು ಆಯೋಗ ಹೇಳಿದೆ. ಹೈಕೋರ್ಟ್‌ನ ಈ ಮೌಖಿಕ ಅಭಿಪ್ರಾಯವನ್ನು ಮಾಧ್ಯಮಗಳು ವರದಿ ಮಾಡಿದ ಬಳಿಕ ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಉಪ ಪೊಲೀಸ್ ಆಯುಕ್ತರ ವಿರುದ್ಧ ಕೊಲೆ ಆರೋಪದ ದೂರು ದಾಖಲಿಸಿದ್ದಾರೆ ಎಂದೂ ಆಯೋಗ ಬೇಸರ ವ್ಯಕ್ತಪಡಿಸಿದೆ. 'ಕೋವಿಡ್-19 ಎರಡನೆಯ ಅಲೆಗೆ ನಿಮ್ಮ ಸಂಸ್ಥೆಯೇ ಏಕೈಕ ಹೊಣೆಗಾರ. ನಿಮ್ಮ ಅಧಿಕಾರಿಗಳ ಮೇಲೆ ಸರಿಯಾಗಿ ಕೊಲೆ ಪ್ರಕರಣ ದಾಖಲಿಸಬೇಕು. ಚುನಾವಣಾ ಸಮಾವೇಶಗಳು ನಡೆಯುವಾಗ ನೀವೇನು ಬೇರೆ ಗ್ರಹದಲ್ಲಿ ಇದ್ದಿರಾ?' ಎಂದು ಸೋಮವಾರ ಮದ್ರಾಸ್ ಹೈಕೋರ್ಟ್ ಅಸಮಾಧಾನ ಪ್ರದರ್ಶಿಸಿತ್ತು. 'ಈ ನ್ಯಾಯಾಲಯದ ಕಲಾಪದಲ್ಲಿ ದಾಖಲೆಯಲ್ಲಿ ಪರಿಗಣಿಸದೆ ಇರುವುದನ್ನು ವರದಿ ಮಾಡಲು ಯಾರಿಗೂ ಅನುಮತಿ ನೀಡಬಾರದು. ಮುಖ್ಯವಾಗಿ ವಿವರವಾದ ಆದೇಶ ಲಭ್ಯವಾಗುವಾಗ ಅದಕ್ಕೆ ಅವಕಾಶ ಕೊಡಬಾರದು. ತಮಿಳುನಾಡಿನಲ್ಲಿ ಏ. 4ರಂದೇ ಚುನಾವಣಾ ಪ್ರಚಾರವು ಮುಕ್ತಾಯವಾಗಿರುವಾಗ ಕೋರ್ಟ್ ಅಂತಹ ಅಭಿಪ್ರಾಯ ವ್ಯಕ್ತಪಡಿಸುವ ಪ್ರಮೇಯ ಇರಲಿಲ್ಲ' ಎಂದು ಆಯೋಗ ಹೇಳಿದೆ. ಭಾನುವಾರ ನಡೆಯಲಿರುವ ಮತ ಎಣಿಕೆಯ ಕಾರ್ಯಕ್ಕಾಗಿ ಆಯೋಗ ತೆಗೆದುಕೊಂಡಿರುವ ಕೋವಿಡ್ ಸಂಬಂಧಿ ಕ್ರಮಗಳ ಬಗ್ಗೆ ಕೋಲ್ಕತ್ತಾ ಮತ್ತು ಕೇರಳ ಹೈಕೋರ್ಟ್‌ಗಳು ತೃಪ್ತಿ ವ್ಯಕ್ತಪಡಿಸಿವೆ. ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಪುದುಚೆರಿಗಳಲ್ಲಿ ಫೆಬ್ರವರಿ 26ರಂದು ಚುನಾವಣೆ ಘೋಷಿಸುವಾಗ ಕೋವಿಡ್ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆ ಇತ್ತು ಎಂದು ಆಯೋಗ ತಿಳಿಸಿದೆ. ಮತದಾನ ನಡೆದ ರಾಜ್ಯಗಳು ಮತ್ತು ಚುನಾವಣೆ ನಡೆಯದ ರಾಜ್ಯಗಳಲ್ಲಿ ಮಾರ್ಚ್ 20 ರಿಂದ ಏ. 4ರ ಅವಧಿಯಲ್ಲಿನ ಕೋವಿಡ್ ಪ್ರಕರಣಗಳ ಅಂಕಿ-ಅಂಶಗಳ ಹೋಲಿಕೆ ಮಾಡಿರುವ ಆಯೋಗ, ಕೋವಿಡ್ ಹರಡುವಲ್ಲಿ ಚುನಾವಣಾ ಪ್ರಚಾರ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಇದು ಸೂಚಿಸುವುದಿಲ್ಲ ಮತ್ತು ಕೋರ್ಟ್ ವ್ಯಾಖ್ಯಾನಿಸಿರುವಂತೆ ಇದು ಏಕೈಕ ಅಂಶವಾಗಿಲ್ಲ ಎಂದು ಹೇಳಿದೆ. ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲಿ ಚುನಾವಣೆಗಳು ನಡೆದಿಲ್ಲ. ಆದರೂ ಇವುಗಳಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಕೋವಿಡ್ ಎರಡನೆಯ ಅಲೆಗೆ ಏಕೈಕ ಹೊಣೆಗಾರ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳನ್ನು ಯಾವುದೇ ರೀತಿ ಕೊಲೆಗಾರರು ಎಂದು ವ್ಯಾಖ್ಯಾನಿಸಲಾಗದು ಎಂದು ಆಯೋಗದ ಅರ್ಜಿ ಹೇಳಿದೆ.