ಕೊರೊನಾ ಸಾವಿನ ಮನೆಯಲ್ಲಿ ಲಕ್ಷಾಂತರ ರೂ. ಹಣ, ಚಿನ್ನ ದೋಚಿದ ಸಂಬಂಧಿಕರು..!

ಸಂಬಂಧಿಕರೇ ತಮ್ಮನ್ನು ಲೂಟಿ ಮಾಡಿರುವ ಬಗ್ಗೆ ಆರ್‌.ಆರ್‌.ನಗರ ಪೊಲೀಸ್‌ ಠಾಣೆಗೆ ಪ್ರವೀಣ್ ದೂರು ನೀಡಿದರೂ, ಎಫ್‌ಐಆರ್‌ ಬದಲು ಎನ್‌ಸಿಆರ್‌ ದಾಖಲಿಸಿ ಸೆಟಲ್‌ಮೆಂಟ್‌ ಮಾಡಿಸಲು ಪೊಲೀಸರು ಮುಂದಾದ ಆರೋಪ ಕೇಳಿಬಂದಿದೆ.

ಕೊರೊನಾ ಸಾವಿನ ಮನೆಯಲ್ಲಿ ಲಕ್ಷಾಂತರ ರೂ. ಹಣ, ಚಿನ್ನ ದೋಚಿದ ಸಂಬಂಧಿಕರು..!
Linkup
: ಆಘಾತದ ನಡುವೆಯೂ ಮಾನವೀಯತೆ ಮರೆತ ಸಂಬಂಧಿಕರು , ಚಿನ್ನ ದೋಚಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಕೊರೊನಾದಿಂದ ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಟೆಕ್ಕಿಯ ಬಳಿ, ಆಕೆಯ ಸಂಬಂಧಿಕರು ಚಿನ್ನಾಭರಣ, ನಗದು, ಕಾರು ದೋಚಿರುವ ಅಮಾನವೀಯ ಸಂಗತಿಯನ್ನು ಟೆಕ್ಕಿ ಬಿಚ್ಚಿಟ್ಟಿದ್ದಾರೆ. ಟೆಕ್ಕಿ ಪ್ರವೀಣ್‌ ಹಾಗೂ ಪತ್ನಿ ನಿಮಿತಾ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿದ್ದರು. ನಿಮಿತಾ ಏಪ್ರಿಲ್ 20ರಂದು ಉಸಿರಾಟದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೇ 2ರಂದು ಮೃತಪಟ್ಟರು. ಮೇ 13ಕ್ಕೆ ತಿಥಿ ಕಾರ್ಯ ಮಾಡಲು ಮೃತರ ಪತಿ ಪ್ರವೀಣ್‌ ಹಾಗೂ ಕುಟುಂಬಸ್ಥರು ಮುಂದಾಗಿದ್ದರು. ಈ ವೇಳೆ ಆಕೆ ಮೃತಪಟ್ಟ ಸಮಯ ಸರಿಯಿಲ್ಲ. ಮೂರು ತಿಂಗಳ ಕಾಲ ಮನೆಗೆ ಬರಬೇಡಿ ಎಂದು ಹೇಳಿ ಪ್ರವೀಣ್‌ ಅವರನ್ನು ನಿಮಿತಾ ಕುಟುಂಬಸ್ಥರು ಬೇರೆಡೆ ಕಳುಹಿಸಿದ್ದರು. ಇದಾದ ಒಂದು ತಿಂಗಳ ಬಳಿಕ ಪ್ರವೀಣ್‌ ಮನೆಗೆ ಮರಳಿದ್ದಾರೆ. ಅಷ್ಟರಲ್ಲಿ ಮನೆಯಲ್ಲಿದ್ದ ಆರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮೂರು ಲಕ್ಷ ರೂ. ನಗದು, ಕಾರನ್ನು ಸಂಬಂಧಿಕರು ದೋಚಿದ್ದರು. ಮೃತಳ ಬಾವ ಶಿವಪ್ಪ, ಆಕೆಯ ಸಹೋದರಿಯರಾದ ಪ್ರೀತಿ, ಮಮತಾ, ಪಪ್ಪಚ್ಚಿ ಸೇರಿ ಹಲವರು ಚಿನ್ನಾಭರಣ ದೋಚಿದ್ದಾರೆ ಎಂದು ಪ್ರವೀಣ್‌ ಆರೋಪಿಸಿದ್ದಾರೆ. ಈ ಸಂಬಂಧ ಪ್ರವೀಣ್‌, ಆರ್‌.ಆರ್‌.ನಗರ ಪೊಲೀಸ್‌ ಠಾಣೆಗೆ ದೂರು ನೀಡಿದರೂ, ಎಫ್‌ಐಆರ್‌ ಬದಲು ಎನ್‌ಸಿಆರ್‌ ದಾಖಲಿಸಿ ಸೆಟಲ್‌ಮೆಂಟ್‌ ಮಾಡಿಸಲು ಪೊಲೀಸರು ಮುಂದಾದ ಆರೋಪ ಕೇಳಿಬಂದಿದೆ. ಪೊಲೀಸರು ದಾಖಲೆಗಳನ್ನು ಪರಿಶೀಲಿಸದೇ ಆರೋಪಿಗಳ ಪರ ವಕಾಲತ್ತು ವಹಿಸುತ್ತಿರುವ ಆರೋಪವಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರವೀಣ್‌ ಆಗ್ರಹಿಸಿದ್ದಾರೆ.