ಕೆನರಾ ಬ್ಯಾಂಕ್‌ಗೆ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ₹1,177 ಕೋಟಿ ಲಾಭ!

ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ 1,177 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.190ರಷ್ಟು ವೃದ್ಧಿಸಿದೆ. ಅಂದರೆ ನಿವ್ವಳ ಲಾಭದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.

ಕೆನರಾ ಬ್ಯಾಂಕ್‌ಗೆ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ₹1,177 ಕೋಟಿ ಲಾಭ!
Linkup
ಬೆಂಗಳೂರು: ಸಾರ್ವಜನಿಕ ವಲಯದ ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ 1,177 ಕೋಟಿ ರೂ. ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.190ರಷ್ಟು ವೃದ್ಧಿಸಿದೆ. ಬ್ಯಾಂಕ್‌ನ ನಿವ್ವಳ ಲಾಭ 2020ರ ಜೂನ್‌ನಲ್ಲಿ 406 ಕೋಟಿ ರೂ.ನಷ್ಟಿತ್ತು. ಕಾರ್ಯಾಚರಣೆ ಲಾಭ ಶೇ.34 ವೃದ್ಧಿಸಿದ್ದು, 5,751 ಕೋಟಿ ರೂ.ಗೆ ವೃದ್ಧಿಸಿದೆ. ಶುಲ್ಕ ಆಧಾರಿತ ಆದಾಯ ಶೇ.43.61 ಪ್ರಗತಿ ದಾಖಲಿಸಿದೆ. ಕೃಷಿ ಸಾಲಗಳು ಮತ್ತು ಇತರ ಕೃಷಿ ಚಟುವಟಿಕೆ ಸಂಬಂಧಿತ ಸಾಲ ವಿತರಣೆಯಲ್ಲಿ ಶೇ.17 ಚೇತರಿಸಿದೆ. ರಿಟೇಲ್‌ ಸಾಲ ಶೇ.9.57, ಒಟ್ಟಾರೆ ಜಾಗತಿಕ ವ್ಯವಹಾರ ಶೇ.9.38ರಷ್ಟು ವೃದ್ಧಿಸಿದೆ. ಕೆನರಾ ಬ್ಯಾಂಕ್‌ ಜೂನ್‌ 30ಕ್ಕೆ ಒಟ್ಟು 9,877 ಶಾಖೆಗಳನ್ನು ಹೊಂದಿದೆ. ಇದರಲ್ಲಿ 3047 ಗ್ರಾಮೀಣ ಪ್ರದೇಶ, 2,853 ಅರೆ ನಗರ ಪ್ರದೇಶ, 1973 ನಗರ ಪ್ರದೇಶ ಮತ್ತು 2004 ಮಹಾ ನಗರಗಳಲ್ಲಿ ಇವೆ. ಒಟ್ಟು ಎಟಿಎಂಗಳ ಸಂಖ್ಯೆ 11,819 ಆಗಿದೆ. 2021ರ ಜೂನ್‌ ಅಂತ್ಯಕ್ಕೆ 138 ಲಕ್ಷ ಪ್ರಧಾನಮಂತ್ರಿ ಜನ್‌ ಧನ್‌ ಯೋಜನೆಯ ಖಾತೆಗಳನ್ನು ತೆರೆಯಲಾಗಿದೆ. ಹಾಗೂ ಈ ಖಾತೆಗಳಲ್ಲಿ 6103 ಕೋಟಿ ರೂ. ಹಣವನ್ನು ಠೇವಣಿ ಇಡಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.