ಆಕ್ಸಿಜನ್‌ ರೀಫಿಲ್ಲಿಂಗ್‌ನಲ್ಲೂ ಗೋಲ್‌ಮಾಲ್‌? ಫ್ಲೋ ಮೀಟರ್‌ ನಿಯಂತ್ರಣದಲ್ಲಿ ಸಿಬ್ಬಂದಿ ಕೈಚಳಕ

ಏಜೆನ್ಸಿಗಳು ಪೂರ್ಣ ಪ್ರಮಾಣದಲ್ಲಿ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಭರ್ತಿ ಮಾಡದೆ ಕಳುಹಿಸಿಕೊಡುತ್ತಿವೆ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಸಿಲಿಂಡರ್‌ಗಳು ನಿಗದಿತ ಅವಧಿಗೆ ಮುನ್ನವೇ ಮುಗಿದು ಹೋಗುತ್ತಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿಗಳು ಹೇಳುತ್ತಿವೆ.

ಆಕ್ಸಿಜನ್‌ ರೀಫಿಲ್ಲಿಂಗ್‌ನಲ್ಲೂ ಗೋಲ್‌ಮಾಲ್‌? ಫ್ಲೋ ಮೀಟರ್‌ ನಿಯಂತ್ರಣದಲ್ಲಿ ಸಿಬ್ಬಂದಿ ಕೈಚಳಕ
Linkup
ಬೆಂಗಳೂರು: ಕೋವಿಡ್‌ ಕಾರಣದಿಂದ ವೈದ್ಯಕೀಯ ಬಳಕೆಯ ಆಕ್ಸಿಜನ್‌ಗೆ ತೀವ್ರ ಬೇಡಿಕೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಏಜೆನ್ಸಿಗಳು ಪೂರ್ಣ ಪ್ರಮಾಣದಲ್ಲಿ ಸಿಲಿಂಡರ್‌ಗಳನ್ನು ಭರ್ತಿ ಮಾಡದೆ ಕಳುಹಿಸಿಕೊಡುತ್ತಿವೆ ಎಂಬ ಆರೋಪ ಕೇಳಿ ಬಂದಿವೆ. ಇದಕ್ಕೆ ಪುಷ್ಟಿ ನೀಡುವಂತೆ ಸಿಲಿಂಡರ್‌ಗಳು ನಿಗದಿತ ಅವಧಿಗೆ ಮುನ್ನವೇ ಮುಗಿದು ಹೋಗುತ್ತಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿಗಳು ಹೇಳುತ್ತಿವೆ. ಗೋಲ್‌ಮಾಲ್‌ ಹೇಗೆ? ಉತ್ಪಾದಕರಿಂದ ಟ್ಯಾಂಕರ್‌ ಮೂಲಕ ಲಿಕ್ವಿಡ್‌ ಆಕ್ಸಿಜನ್‌ ಪಡೆದು ಸಂಗ್ರಹಿಸಿಕೊಳ್ಳುವ ವಿತರಕರು ಡೋರಾ, ಜಂಬೋ ಮತ್ತು ಎ, ಬಿ ಮಾದರಿಯ ಸಿಲಿಂಡರ್‌ಗಳಲ್ಲಿ ಆಕ್ಸಿಜನ್‌ ತುಂಬಿಸಿ ಆಸ್ಪತ್ರೆ ಹಾಗೂ ಇತರೆ ಗ್ರಾಹಕರಿಗೆ ಕೊಡುತ್ತಾರೆ. ಸಂಗ್ರಹಗಾರದಿಂದ ಸಿಲಿಂಡರ್‌ಗಳಿಗೆ ಆಕ್ಸಿಜನ್‌ ತುಂಬಿಸುವಾಗ ಫ್ಲೋ ಮೀಟರ್‌ ಸಂಪೂರ್ಣ ತೆರೆದಿರಬೇಕು. ಅಂದರೆ ಶೇ.100ರಷ್ಟು ಆಕ್ಸಿಜನ್‌ ಹರಿವು ಇರಬೇಕು. ಹೀಗಿದ್ದಾಗ 47 ಲೀ. ಸಾಮರ್ಥ್ಯದ ಜಂಬೋ ಸಿಲಿಂಡರ್‌ ಭರ್ತಿಗೆ 40 ರಿಂದ 50 ನಿಮಿಷ ಬೇಕು. ಆದರೆ ಸಿಲಿಂಡರ್‌ ತುಂಬುವಾಗ ಸಿಬ್ಬಂದಿ ಆಕ್ಸಿಜನ್‌ ಹರಿವಿನ ಪ್ರಮಾಣವನ್ನು ಶೇ.80-90ರಷ್ಟು ಫ್ಲೋ ಮೀಟರ್‌ ಮೂಲಕ ಕಡಿಮೆ ಮಾಡಿ ಮೋಸ ಮಾಡುತ್ತಿದ್ದಾರೆ ಎಂಬ ಶಂಕೆ ಇದೆ. ಇದರಿಂದಾಗಿ 40 ರಿಂದ 50 ನಿಮಿಷ ಭರ್ತಿ ಮಾಡಿದರೂ ಸಿಲಿಂಡರ್‌ ಸಂಪೂರ್ಣ ಭರ್ತಿಯಾಗಿರುವುದಿಲ್ಲ. ಏಜೆನ್ಸಿಗಳ ಮೂಲಕ ವಿತರಣೆಯಾಗುವ ಸಿಲಿಂಡರ್‌ಗಳ ನಿಗಾಕ್ಕೆ ಸರಕಾರ ನಿಯೋಜಿಸಿರುವ ಸಿಬ್ಬಂದಿ ಇಂತಹ ತಾಂತ್ರಿಕ ಅಂಶಗಳನ್ನು ಗಮನಿಸುತ್ತಿಲ್ಲ. ಇದನ್ನು ಗಮನಿಸಿ ವಂಚನೆ ಕಂಡು ಹಿಡಿಯುವ ತಾಂತ್ರಿಕ ನೈಪುಣ್ಯವೂ ಇವರಲ್ಲಿಲ್ಲ. ಒಟ್ಟು ಸಿಲಿಂಡರ್‌ ಎಷ್ಟು ರವಾನೆಯಾಗಿದೆ ಎಂಬುದರ ಲೆಕ್ಕ ಮಾತ್ರ ಇಡುತ್ತಿದ್ದಾರೆ. ಆದರೆ, ಇದರಿಂದಾಗಿ ಆಸ್ಪತ್ರೆ ಸೇರಿದಂತೆ ಸಿಲಿಂಡರ್‌ ಕೊಂಡೊಯ್ದ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ನಿಗದಿತ ಸಮಯಕ್ಕೆ ಮೊದಲೇ ಖಾಲಿ ಸೋಂಕಿತರಿಗೆ ಆಕ್ಸಿಜನ್‌ ಅಳವಡಿಸಿದ ಸಂದರ್ಭದಲ್ಲಿ ಆಕ್ಸಿಜನ್‌ ವೇಗವನ್ನು ಇಂತಿಷ್ಟು ಲೀಟರ್‌ ಪರ್‌ ಮಿನಿಟ್‌ (ಎಲ್‌ಪಿಎಂ) ಎಂದು ಗೊತ್ತುಪಡಿಸಿ ಫಿಕ್ಸ್‌ ಮಾಡಲಾಗುತ್ತದೆ. ಎಲ್‌ಪಿಎಂ ಹರಿಯುವಿಕೆಯಿಂದ ಇಂತಿಷ್ಟೇ ಅವಧಿಗೆ ಸಿಲಿಂಡರ್‌ ಖಾಲಿ ಆಗಬಹುದು ಎಂದು ಅಂದಾಜಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಸಮಯಕ್ಕೂ ಮೊದಲೇ ಖಾಲಿ ಆಗುತ್ತಿದೆ ಎನ್ನುತ್ತಿದ್ದಾರೆ ವೈದ್ಯರು.