Shiv Sena Symbol: ಕೈತಪ್ಪಿದ 'ಬಿಲ್ಲು-ಬಾಣ' ಚಿಹ್ನೆ: ಕಂಗೆಟ್ಟ ಉದ್ಧವ್ ಠಾಕ್ರೆಗೆ ಶರದ್ ಪವಾರ್ ಸಲಹೆ

ಮುಂಬಯಿ: ತನ್ನ 39 ಶಾಸಕರು ಬಂಡಾಯವೆದ್ದು ಬಿಜೆಪಿ ಜತೆ ಕೈ ಜೋಡಿಸುವುದರೊಂದಿಗೆ ಮಹಾ ವಿಕಾಸ್ ಅಘಾಡಿ ಸರ್ಕಾರದ ಅಧಿಕಾರವನ್ನು ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿದ್ದ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಅವರಿಗೆ ಚುನಾವಣಾ ಆಯೋಗದಿಂದ ಮತ್ತೊಂದು ಹಿನ್ನಡೆ ಉಂಟಾಗಿದೆ. ಬಾಳಸಾಹೇಬ್ ಠಾಕ್ರೆ ಅವರು ಸ್ಥಾಪಿಸಿದ ಶಿವಸೇನಾದ ಅಧಿಕೃತ ಬಿಲ್ಲು ಮತ್ತು ಬಾಣದ ಗುರುತು, ಬಂಡಾಯ ಶಾಸಕರ ಬಣಕ್ಕೆ ಸೇರಿದೆ ಎಂದು ಆಯೋಗ ಶುಕ್ರವಾರ ಹೇಳಿದೆ.ಇದರಿಂದಾಗಿ ಉದ್ಧವ್ ಠಾಕ್ರೆ ಅವರನ್ನು ತಂದೆ ಸ್ಥಾಪಿಸಿದ ಪಕ್ಷದಿಂದಲೇ ಹೊರ ಹಾಕಿದಂತಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಎದುರಾಳಿ ಗುಂಪಿಗೆ ತಲೆಬಾಗಲು ಸಿದ್ಧರಿಲ್ಲದ ಉದ್ಧವ್ ಠಾಕ್ರೆ, ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಚುನಾವಣಾ ಆಯೋಗದ ತೀರ್ಪನ್ನು ಅವರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾರೆ.

Linkup