Russia Ukraine crisis: ಭಾರತೀಯ ವಿದ್ಯಾರ್ಥಿಗಳ 6ನೇ ತಂಡವನ್ನು ಕರೆತಂದಿದೆ ಆಪರೇಷನ್ ಗಂಗಾ..!

ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆಗೆ ಸ್ಪೈಸ್ ಜೆಟ್ ಮುಂದೆ ಬಂದಿದೆ. ಸ್ಪೈಸ್ ಜೆಟ್ ವಿಮಾನಗಳನ್ನು ಹಂಗೆರಿ ದೇಶದ ಬುಡಾಪೆಸ್ಟ್‌ಗೆ ರವಾನಿಸಲಿದ್ದು, ಉಕ್ರೇನ್‌ನಿಂದ ಅಲ್ಲಿಗೆ ಬಂದಿರುವ ವಿದ್ಯಾರ್ಥಿಗಳನ್ನು ಮರಳಿ ಭಾರತಕ್ಕೆ ಕರೆತರಲಿದೆ.

Russia Ukraine crisis: ಭಾರತೀಯ ವಿದ್ಯಾರ್ಥಿಗಳ 6ನೇ ತಂಡವನ್ನು ಕರೆತಂದಿದೆ ಆಪರೇಷನ್ ಗಂಗಾ..!
Linkup
ಹೊಸ : ರಷ್ಯಾದ ದಾಳಿಯಿಂದಾಗಿ ಯುದ್ಧ ಭೂಮಿಯಾಗಿರುವ ಉಕ್ರೇನ್‌ನಲ್ಲಿ ಸಿಲುಕಿರುವ ಹಂತ ಹಂತವಾಗಿ ತವರಿಗೆ ಮರಳುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಭಾರತ ಸರ್ಕಾರವು ಎಂಬ ಯೋಜನೆ ಆರಂಭಿಸಿದ್ದು, ಇದರನ್ವಯ 6ನೇ ಹೊಸ ದಿಲ್ಲಿಗೆ ಆಗಮಿಸಿದೆ. ಉಕ್ರೇನ್‌ನಿಂದ ಹಂಗೆರಿ ದೇಶದ ಬುಡಾಪೆಸ್ಟ್‌ಗೆ ತೆರಳಿದ್ದ 240 ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಕರೆತರಲು ಭಾರತ ವಿಮಾನ ರವಾನಿಸಿತ್ತು. ಇದೀಗ ಆ ವಿದ್ಯಾರ್ಥಿಗಳೆಲ್ಲರೂ ದಿಲ್ಲಿಗೆ ಬಂದಿಳಿದಿದ್ದಾರೆ. ಇನ್ನೊಂದೆಡೆ, ಉಕ್ರೇನ್‌ನ ಶೇಯ್ನಿ ಪಟ್ಟಣದಲ್ಲಿ ಸಿಲುಕಿದ್ದ ನೂರಾರು ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ನ ಪಶ್ಚಿಮದ ಗಡಿಯಿಂದ ಬಸ್‌ಗಳಲ್ಲಿ ಪೋಲೆಂಡ್‌ ದೇಶಕ್ಕೆ ಕರೆತರಲಾಗಿದೆ. ಇದೀಗ ಭಾರತೀಯ ವಿಮಾನವು ಪೋಲೆಂಡ್‌ಗೆ ಕೂಡಾ ಪ್ರಯಾಣ ಬೆಳೆಸಬೇಕಿದ್ದು, ಅಲ್ಲಿರುವ ನೂರಾರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಬೇಕಿದೆ. ಈ ನಡುವೆ, ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ವೀಕೆಂಡ್ ಕರ್ಫ್ಯೂ ಮುಕ್ತಾಯಗೊಳಿಸಲಾಗಿದ್ದು, ಹೊರ ದೇಶಗಳಿಂದ ಶಿಕ್ಷಣ ಪಡೆಯಲು ಬಂದಿದ್ದ ಎಲ್ಲ ವಿದ್ಯಾರ್ಥಿಗಳೂ ರೈಲುಗಳ ಮೂಲಕ ದೇಶದ ಪಶ್ಚಿಮ ಗಡಿಯತ್ತ ಪ್ರಯಾಣ ಬೆಳೆಸಲು ಆರಂಭಿಸಿದ್ದಾರೆ. ಅದರಲ್ಲೂ ಭಾರತದ ದೂತಾವಾಸ ಕಚೇರಿಯ ಬೇಡಿಕೆ ಮೇರೆಗೆ ಉಕ್ರೇನ್ ರೈಲ್ವೆ ಇಲಾಖೆಯು ವಿಶೇಷ ರೈಲುಗಳನ್ನು ಬಿಟ್ಟಿದ್ದು, ಉಕ್ರೇನ್ ದೇಶದಲ್ಲಿ ಇರುವ ಎಲ್ಲ ವಿದ್ಯಾರ್ಥಿಗಳನ್ನೂ ಪೋಲೆಂಡ್‌ಗೆ ರವಾನಿಸಲು ನಿರ್ಧರಿಸಿದೆ. ಇತ್ತ ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆಗೆ ಸ್ಪೈಸ್ ಜೆಟ್ ಮುಂದೆ ಬಂದಿದೆ. ಸ್ಪೈಸ್ ಜೆಟ್ ವಿಮಾನಗಳನ್ನು ಹಂಗೆರಿ ದೇಶದ ಬುಡಾಪೆಸ್ಟ್‌ಗೆ ರವಾನಿಸಲಿದ್ದು, ಉಕ್ರೇನ್‌ನಿಂದ ಅಲ್ಲಿಗೆ ಬಂದಿರುವ ವಿದ್ಯಾರ್ಥಿಗಳನ್ನು ಮರಳಿ ಭಾರತಕ್ಕೆ ಕರೆತರಲಿದೆ.